ಪರ್ಸನಲ್ ಕಂಪ್ಯೂಟರ್ ನಲ್ಲಿ ಕುಸಿತ ಕಂಡ ‘ ಡೆಲ್ (DELL) ‘ ಕಂಪನಿ ; 6500 ಉದ್ಯೋಗಿಗಳ ವಜಾ…..!
ನವದೆಹಲಿ, ಫೆ.6 :
ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿ ಡೆಲ್ 6,500 ಉದ್ಯೋಗಿಗಳನ್ನು ವಜಾಗೊಳಿಸಲು ಆದೇಶಿಸಿದೆ.
2020ರಲ್ಲಿ ಕೋವಿಡ್-19 ಬಿಕ್ಕಟ್ಟಿನ ಸಂದರ್ಭ ಕಂಪನಿ ಉದ್ಯೋಗ ಕಡಿತ ಮಾಡಿತ್ತು. ಇದೀಗ ಹೊಸ ನೇಮಕಾತಿಯಲ್ಲಿ ಕಡಿತ, ಪ್ರಯಾಣಗಳ ವೆಚ್ಚ ಇಳಿಕೆ, ಇತ್ಯಾದಿ ಕ್ರಮಗಳನ್ನು ಕಂಪನಿ ಕೈಗೊಂಡಿದೆ. ಕಂಪನಿ ಈ ಹಿಂದೆಯೂ ಅನೇಕ ವಿಪತ್ತುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಮುಂಬರುವ ದಿನಗಳಲ್ಲಿ ಪ್ರಬಲವಾಗಿ ವಿಸ್ತರಿಸಲಿದೆ.
ಡೆಲ್ ಕಂಪನಿಯು 39,000 ಸಿಬ್ಬಂದಿಯನ್ನು ಹೊಂದಿದ್ದು, ಕಂಪನಿಯ ಉದ್ಯೋಗಿಗಳಲ್ಲಿ ಮೂರನೇ ಒಂದರಷ್ಟು ಮಂದಿ ಅಮೆರಿಕ ಮೂಲದವರಾಗಿದ್ದಾರೆ. ಡೆಲ್ ಹೊಸ ಹೊಸ ಆವಿಷ್ಕಾರಗಳಿಂದ ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವೆಚ್ಚ ನಿಯಂತ್ರಣ ಅಗತ್ಯವಾಗಿದ್ದು ಡೆಲ್ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.
2020 ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಪರ್ಸನಲ್ ಕಂಪ್ಯೂಟರ್ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿತ್ತು. ಡೆಲ್ ಕಂಪನಿಯ ವ್ಯವಹಾರದಲ್ಲಿ 37% ಇಳಿಕೆಯಾಗಿತ್ತು. ಎಚ್‌ಪಿ(HP) ಕೂಡ ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಿಗಳನ್ನು ಕಡಿತಗೊಳಿಸಲಿದೆ. ಸಿಸ್ಕೊ ಸಿಸ್ಟಮ್, ಇಂಟರ್‌ನ್ಯಾಶನಲ್ ಬಿಸಿನೆಸ್ ಮೆಶೀನ್ಸ್ ಕಾರ್ಪ್ ಕೂಡ ತಲಾ 4,000 ಕಾರ್ಮಿಕರನ್ನು ವಜಾಗೊಳಿಸಲಿದೆ. ಟೆಕ್ ವಲಯ 2022ರಲ್ಲಿ 97,171 ಉದ್ಯೋಗಗಳನ್ನು ಕಡಿತಗೊಳಿಸಿದೆ.