ಅಧ್ಯಕ್ಷರಾಗಿ ಶಿವಾನಂದ ಉಪಾಧ್ಯಕ್ಷರಾಗಿ ಅನ್ನಪೂರ್ಣ ಆಯ್ಕೆ.
ಹುನಗುಂದ ಮೇ.14

ಪಟ್ಟಣದ ಶ್ರೀ ವಿಜಯ ಮಹಾಂತೇಶ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಶಿವಾನಂದ ಕಂಠಿ ಹಾಗೂ ಉಪಾಧ್ಯಕ್ಷರಾಗಿ ಅನ್ನಪೂರ್ಣ ಹೊಸೂರ ಆಯ್ಕೆಯಾಗಿದ್ದಾರೆ. ಶ್ರೀ ವಿಜಯ ಮಹಾಂತೇಶ ಬ್ಯಾಂಕ್ ನೂತನ ಅಧ್ಯಕ್ಷ ಮಾತನಾಡಿ ಪ್ರತಿಷ್ಠಿತ ಬ್ಯಾಂಕಿನ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಶ್ರೇಯೋಭಿವೃದ್ಧಿಯ ಶ್ರಮಿಸುವೆ ಎಂದರು. ಉಪಾಧ್ಯಕ್ಷರಾಗಿ ಅನ್ನಪೂರ್ಣ ಹೊಸೂರು ಮಾತನಾಡಿ ನನ್ನ ಮೇಲೆ ಭರವಸೆಯಿಟ್ಟು ಆಯ್ಕೆ ಮಾಡಿದ್ದಕ್ಕೆ ನಿಮ್ಮೆಲ್ಲರೊಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಶ್ರೀವಿಜಯ ಮಹಾಂತೇಶ ಬ್ಯಾಂಕಿನ ಮಾಜಿ ಅಧ್ಯಕ್ಷ ರವಿ ಹುಚ್ಚುನೂರ ಮಾತನಾಡಿ ಹತ್ತು ತಿಂಗಳ ಕಾಲ ನನ್ನನ್ನು ವಿಜಯ ಮಹಾಂತೇಶ ಬ್ಯಾಂಕಿನ ಅಧ್ಯಕ್ಷನಾಗಿ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸವನ್ನು ಎಲ್ಲಾ ನಮ್ಮ ಬ್ಯಾಂಕಿನ ಸದಸ್ಯರಿಗೂ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಧನ್ಯವಾದಗಳು ಹೇಳಲು ಬಯಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಶಶಿಕಾಂಗೌಡ ಪಾಟೀಲ ಮಹಾಂತೇಶ ಆವರಿ ಬಸವರಾಜ ಗದ್ದಿ ರಾಜಕುಮಾರ ಬಾಗವಾಡಗಿ ಸೋಮಶೇಖರ ಬಲಕುಂದಿ ಸಂಗಣ್ಣ ಕಡಪಟ್ಟಿ ನೀಲಪ್ಪ ತಪ್ಪೆಲಿ ದೇವು ಡಂಬಳ ಬಸವರಾಜ ನಾಡಗೌಡರ ತಿರುಪತಿ ಕುಷ್ಟಗಿ ಮಂಜು ಆಲೂರ ಶಕುಂತಲಾ ಗಂಜಿಹಾಳ ಲಕ್ಷ್ಮೀಬಾಯಿ ಮುಕ್ಕಣ್ಣವರ್ ಸುಜಾತ ನಾಗರಾಳ ಸುರೇಶ್ ಚಿತ್ತರಗಿ ಪ್ರಧಾನ ವ್ಯವಸ್ಥಾಪಕರು ಕೆ ಎಸ್ ಅಲದಿ ಸಿಬ್ಬಂದಿಗಳಾದ ರಾಜು ಬಯ್ಯಾಪುರ ಪ್ರಕಾಶ್ ಪಾಟೀಲ್ ಗಿರೀಶ ಪಾಟೀಲ್ ಆರ್ ವಿ ಪಾಟೀಲ ಮುಖಂಡರಾದ ಎಸ್ ಬಿ ಗಂಜಿಹಾಳ ಶರಣಪ್ಪ ಹೊಸೂರ ಶೇಖರಪ್ಪ ಬಾದವಾಡಗಿ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.