ಶ್ರಾವಣದಲ್ಲಿ ವಿಶೇಷ ಪೂಜಿತನಾಗುವ ರಡ್ಡೇರಹಟ್ಟಿಯ ಮಟ್ಟಿ ಬಸವೇಶ್ವರ.
ಅಥಣಿ ಆ.05

ಶ್ರಾವಣ ಮಾಸ ಬಂತೆಂದರೆ ಸಾಕು ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಪ್ರಾರಂಭವಾಗಿ ಮಾಸಾಂತ್ಯ ವಿಶೇಷ ಪ್ರಾರ್ಥನೆಯ ಕೇಂದ್ರಗಳಾಗುತ್ತವೆ. ಆದರೆ ದೂರದ ನದಿಯಿಂದ ನೀರು ತಂದು ಅದರ ಮೂಲಕವೇ ಪೂಜೆ ಗೊಳ್ಳುವ ವಿಶೇಷವೊಂದು ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಮಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ ಇಂದಿಗೂ ಆಚರಣೆ ಇದೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ನಡೆದು ಬಂದಿರೋದು ವಿಶೇಷ ಸಾಂಪ್ರದಾಯ, ಶ್ರಾವಣ ಮಾಸದ ಪ್ರತಿ ಸೋಮವಾರ ನಸುಕಿನ ಜಾವ ನಾಲ್ಕು ಗಂಟೆಗೆ ಎದ್ದು ಸುಮಾರು ಏಳು ಕಿ.ಮೀ ದೂರವಿರುವ ಕೃಷ್ಣಾ ನದಿಗೆ ಹೋಗಿ ಮಡಿಯಿಂದ ಸ್ನಾನ ಮಾಡಿ ರಡ್ಡೇರಹಟ್ಟಿ ಗ್ರಾಮದ ಮಟ್ಟಿ ಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸುವುದು ಈ ಗ್ರಾಮದ ವಾಡಿಕೆಯಾಗಿದೆ.

ಬೈಟ್ :-
ಮುರುಗೇಶ ಖೋತ್ (ಸ್ಥಳೀಯ ಯುವಕ) ಸಾಂಪ್ರದಾಯವು ಸುಮಾರು ವರ್ಷಗಳಿಂದ ನಡೆದು ಕೊಂಡು ಬಂದಿದೆ ನಮ್ಮ ಪೂರ್ವಜರು ಈ ಸಾಂಪ್ರದಾಯವನ್ನು ಮಾಡಿಕೊಂಡು ಬಂದಿದ್ದಾರೆ ಅದೇ ರೀತಿ ಯುವಕರಾದ ನಾವುಗಳು ಕೂಡ ಈ ಸಾಂಪ್ರದಾಯವನ್ನು ಮುಂದುವರಿಸುತ್ತೇವೆ ಎಂದು ರಡ್ಡೇರಹಟ್ಟಿ ಗ್ರಾಮದ ಯುವಕ ಮುರಗೇಶ ಖೋತ ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ. ಬೆಳಗಾವಿ.