ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ಆರೋಗ್ಯದ ಕಡೆ ಗಮನವಿರಲಿ – ಶರಣು ಚಲವಾದಿ.

ಬೇಸಿಗೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಿಸಿಗಾಳಿ ಯಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದ್ದು ಆದಕಾರಣ ಸಾರ್ವಜನಿಕರಾದ ನಾವುಗಳು ಸೂರ್ಯಘಾತ ದಿಂದ ತಪ್ಪಿಸಿಕೊಳ್ಳುಲು ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದೆ ಎಂದು ಯುವ ಮುಖಂಡರಾದ ಶರಣು ಬಾಳಪ್ಪ ಚಲವಾದಿ ಹೇಳಿದರು.ಹವಾಮಾನ ಇಲಾಖೆ ಮಾಹಿತಿ ಪ್ರಕಾರ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ಬಿಸಿಲಿನ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ಕಡಿಮೆ ಮಾಡಬೇಕು. ಶುದ್ಧವಾದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು. ಶುಭ್ರವಾದ ಹತ್ತಿಬಟ್ಟೆಯನ್ನು ಧರಿಸಬೇಕು. ಸಕ್ಕರೆಯುಕ್ತ ಪಾನೀಯ, ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬಾರದು. ಓ.ಆರ್.ಎಸ್ ಮತ್ತು ಎಳನೀರನ್ನು ಕುಡಿಯುವ ಮೂಲಕ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕು. ಸಾಧ್ಯವಾದಷ್ಟು ಬಿಸಿಲು ಹೆಚ್ಚಿರುವ ಸಮಯದಲ್ಲಿ ನೆರಳಿನಲ್ಲಿ ಉಳಿದು ಕೊಳ್ಳುವುದು ಒಳಿತು ಎಂದರು.ಬೇಸಿಗೆ ಕಾಲದಲ್ಲಿ ಹೆಚ್ಚು ಹಬ್ಬ ಹರಿದಿನ ಜಾತ್ರೆಗಳು ಸಾರ್ವಜನಿಕ ಸಭೆಗಳು ನಡೆಯುತ್ತವೆ ಹಾಗಾಗಿ ಅತ್ಯಂತ ಜಾಗರೂಕತೆಯಿಂದ ಇರಬೇಕು. ಬೇಸಿಗೆಯಲ್ಲಿ ಮಾಂಸಹಾರಗಳನ್ನು ಸೇವಿಸಬಾರದು ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಇದರಿಂದ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು.ಹಾಗೂ ಕಾಲರಾ ಬರುವ ಸಾಧ್ಯತೆಯಿರುವದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಚನ್ನಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಹಣ್ಣು ಸೊಪ್ಪು ತರಕಾರಿಗಳನ್ನು ಶುದ್ಧವಾದ ನೀರಿನಲ್ಲಿ ತೊಳೆದು ಸೇವಿಸಬೇಕು.ಆಹಾರವನ್ನು ತಯಾರಿಸುವ ಮುನ್ನ ಹಾಗೂ ಸೇವಿಸುವ ಮುನ್ನ ಸಾಬೂನಿನಿಂದ ಚನ್ನಾಗಿ ಕೈ ತೊಳೆದು ಕೊಳ್ಳಬೇಕು. ಹೊರಗಿನ ಆಹಾರವನ್ನು ಸೇವಿಸುವ ಬದಲು ಮನೆಯ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶೌಚಾಲಯವನ್ನು ಬಳಸಿದ ನಂತರ ಸ್ವಚ್ಚವಾಗಿ ತೊಳೆಯಬೇಕು. ‘ಆರೋಗ್ಯವೇ ಭಾಗ್ಯ’ ನಿಮ್ಮ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಯುವ ಮುಖಂಡರಾದ ಶರಣು ಬಾಳಪ್ಪ ಚಲವಾದಿ ಆರೋಗ್ಯ ಸಲಹೆ ನೀಡಿದರು.”ಲೇಖನ”ಶರಣು ಬಾಳಪ್ಪ ಚಲವಾದಿಶ್ರೀ ಗುರು ಪುಟ್ಟರಾಜ ಸೇವಾ ಸಮಿತಿ ಸಂಚಾಲಕರು ರೋಣ,
___________________________________________ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಂ.ಎಂ. ಶರ್ಮಾ ಬೆಳಗಾವಿ.