ಗುತ್ತಿಗೆ ಪೌರ ಕಾರ್ಮಿಕರಿಗೆ ಮೂ ಲಭೂತ ಸೌಲಭ್ಯ ಒದಗಿಸಲು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಎನ್ ವೆಂಕಟೇಶ್ ಆಗ್ರಹ

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ದಿನಾಂಕ 16.03.2023 ರಂದು ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಅನ್ವಯ ಜಿಲ್ಲಾ ಮಟ್ಟದ ಜಿಲ್ಲಾ ಜಾಗೃತಿ ಸಮಿತಿಯ ಪ್ರಥಮ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆಯ ಎನ್ ವೆಂಕಟೇಶ್, ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ, ಹಾಗೂ ಅವರ ನೇಮಕಾತಿಯ ಬಗ್ಗೆ, ಅವರಿಗೆ ಪುನರ್ವಸತಿ ಒದಗಿಸುವ ಬಗ್ಗೆ,ಸುರಕ್ಷತಾ ಸಲಕರಣೆಗಳನ್ನು ಕೊಡುವ ಬಗ್ಗೆ,ಪಿಎಫ್ ಮತ್ತು ಈ ಎಸ್ ಐ, ಕೊಡಬೇಕೆಂದು ಹಾಗೂ ಎಲ್ಲಾ ಗುತ್ತಿಗೆ ಪೌರಕಾರ್ಮಿಕರಿಗೂ ಮನೆ ಮನೆ ಕಸ ಸಂಗ್ರಹ ಮಾಡುವ ಪೌರಕಾರ್ಮಿಕರಿಗೂ ಸಪಾಯಿ ಕರ್ಮಚಾರಿ ಗುರುತಿನ ಚೀಟಿಯನ್ನು ಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.