ಡಾಲರ್ಸ್ ಕಾಲೋನಿಯ ಬನ್ನಿ ಮಹಾಕಾಳಿಯ ಕಟ್ಟೆ ಉದ್ಘಾಟನೆ.
ಇಲಕಲ್ಲ ಅ.03

ಸಮೀಪದ ಗೊರಬಾಳ ಗ್ರಾಮದ ಡಾಲರ್ಸ್ ಕಾಲೋನಿಯ ಹಿರಿಯರೆಲ್ಲರೂ ಸೇರಿಕೊಂಡು ನಾಡಹಬ್ಬ ದಸರಾ ಅದ್ದೂರಿಯಾಗಿ ಆಚರಿಸ ಬೇಕೆನ್ನುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಹಳೆಯ ಬನ್ನಿ ಕಟ್ಟೆಯನ್ನು ಜೀರ್ಣೋದ್ಧಾರ ಮಾಡಿ ಹೊಸ ಕಟ್ಟೆಯನ್ನು ಇಂಗಳಗೇರಿಯ ಶಿವಯೋಗಿನಿ ಶ್ರೀ ಅಕ್ಕಮಹಾದೇವಿ ಅಮ್ಮನವರು ಆಶೀರ್ವಾದದೊಂದಿಗೆ ಕಟ್ಟೆ ಉದ್ಘಾಟನೆಯಾಯಿತು.

ಡಾಲರ್ಸ್ ಕಾಲೋನಿಯ ಮಹಿಳೆಯರೆಲ್ಲರೂ ಸುಮಾರು ಎರಡು ಮೂರು ದಶಕಗಳಿಂದಲೇ ನವರಾತ್ರಿ ಹಬ್ಬದ ಪ್ರಯುಕ್ತ ದಿನಂ ಪ್ರತಿ ಬನ್ನಿ ಗಿಡಕ್ಕೆ ಪೂಜೆ ಮಾಡುವ ಪರಂಪರೆಯನ್ನು ಅಳವಡಿಸಿ ಕೊಂಡಿದ್ದರು ಆದರೆ ಈ ವರ್ಷ ಡಾಲರ್ಸ್ ಕಾಲೋನಿಯ ಮಹಿಳೆಯರೆಲ್ಲರೂ ಸೇರಿಕೊಂಡು ಬನ್ನಿ ಗಿಡದ ಹಳೆಯ ಕಟ್ಟೆಯನ್ನು ಜೀರ್ಣೋದ್ಧಾರ ಮಾಡಬೇಕೆಂದು ನಿರ್ಧರಿಸಿ ಕಾಲೋನಿಯ ಹಿರಿಯರೆಲ್ಲರ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ಕಟ್ಟೆಯನ್ನು ಆಧುನಿಕರಣ ಗೊಳಿಸಿ ಉದ್ಘಾಟನೆ ಗೊಳಿಸಿದರು.

ಗ್ರಾಮದ ಹಿರಿಯರಾದಬಸಯ್ಯ ಹಿರೇಮಠ, ಶಂಕ್ರಯ್ಯ ಉಪನಾಮಠ ,ಶರಣಯ್ಯ ಹಿರೇಮಠ. ವೀರನಗೌಡ ಪೊಲೀಸ್ ಪಾಟೀಲ್. ಮಲ್ಲಪ್ಪ ಕನಗೇರಿ. ಮಹೇಶ್ ಕತ್ತಿ, ರಂಗಪ್ಪ ಗುಗ್ಗರಿ. ದುರ್ಗಪ್ಪ ಬೊಮ್ಮನಾಳ, ಬಸವರಾಜ ಬಡಿಗೇರ, ಚಂದ್ರಕಾಂತ ಹಿರೇಮಠ, ನಾಗಪ್ಪ ಕತ್ತಿ, ಬಾಲಪ್ಪ ಘಂಟಿ. ಬಾಲಪ್ಪ ಪೂಜಾರಿ. ಮಾಹಾಂತೇಶ ಗುಗ್ಗರಿ. ಹಾಗೂ ಡಾಲರ್ಸ್ ಕಾಲೋನಿ ಎಲ್ಲ ಮಹಿಳೆಯರು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.