ಹೋರಾಟಗಾರ ಬಿ.ಡಿ.ಪಾಟೀಲರ ಗೆಲುವಿಗೆ.ತಾಲೂಕಿನ ಜನತೆ ಆಶೀರ್ವಾದ ನೀಡಬೇಕು ಶಿವಯೋಗಪ್ಪ ನೇದಲಗಿ
ಇಂಡಿ ಏ.22
ಇಂಡಿ ಮತಕ್ಷೇತ್ರದ ಹಿರೇರೂಗಿ ಗ್ರಾಮದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶಿವಯೋಗಪ್ಪ ನೇದಲಗಿ ಯವರು ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ನಾನು ಎಲ್ಲಾ ಪಕ್ಷದ ನಾಯಕರ ಸ್ವಭಾವ ಗುಣ ನೋಡಿದ್ದೇನೆ,ಆದರೆ ಬಿ ಡಿ ಪಾಟೀಲರು ಸರಳ ಸ್ವಭಾವ ಸರ್ವಜನಾಂವನ್ನು ಗೌರವದಿಂದ ಕಾಣುವ ಗುಣ ಹೋಂದಿದ್ದಾರೆ ವಿಶೇಷವಾಗಿ ಹೋರಾಟದ ಮುಖಾಂತರ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ.

ಈ ಚುನಾವಣೆಯು ಜನಭಲವೂ,ಹಣಭಲವೂ, ಎಂಬುವುದು ಪ್ರತಿಯೂಬ್ಬರು ನಿರ್ಧಾರ ತೆಗೆದುಕೊಳ್ಳುವ ಸಂದರ್ಭವಾಗಿದೆ ಎಂದು ಮಾತನಾಡಿದರು.ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ನೆನಗುದ್ದಿಗೆ ಬಿದ್ದ ನೀರಾವರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ದೃಢಸಂಕಲ್ಪ ಮಾಡಿದ್ದೇನೆ, ಹಾಗೂ ನಿಂಬೆ ಬೆಳೆಗಾರರ ಹಿತರಕ್ಷಣೆಗೆ ಕಂಕಣಬದ್ದನಾಗಿ ಸೇವೆಯನ್ನು ಮಾಡಲು ಅವಕಾಶ ನೀಡಬೇಕು ಎಂದು ಸೇರಿದ ಜನಸಾಗರಕ್ಕೆ ಕೈಮುಗಿದು ಮತಯಾಚನೆ ಮಾಡಿದರು.ಯುವಮುಖಂಡ ವೀರಾಜ ಪಾಟೀಲ ಮಾತನಾಡಿ ನಮ್ಮ ತಂದೆಯವರು ಇಂಡಿ ತಾಲೂಕಿನಲ್ಲಿ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದ್ದಾರೆ .ಉಳಿದ ಕಾಮಗಾರಿಗಳನ್ನು ಬಿ ಡಿ ಪಾಟೀಲರು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಶ್ರಮಿಸುತ್ತಾರೆ ,ಬಡ ವ್ಯಕ್ತಿಯ ಹೋರಾಟ ಗಮನಿಸಿ ಅವರ ಬೆಂಬಲಕ್ಕೆ ನಾನು ನಿಂತಿದ್ದೇವೆ ಎಂದು ಮಾತನಾಡಿದರು, ವೇದಿಕೆಯಲ್ಲಿ ಮುತ್ತಪ್ಪ ಪೋತೆ, ಮರೇಪ್ಪ ಗಿರಣಿವಡ್ಡರ, ಅಯೂಬ್ ನಾಟೀಕರ ಶ್ರೀಶೈಲಗೌಡ ಪಾಟೀಲ, ನಾಗೇಶ ತಳಕೇರಿ ರಮೇಶ್ ರಾಠೋಡ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಚಂದ್ರಯ್ಯ ಮಠಪತಿ,ಮಶಾಕಸಾಬ ನಧಾಪ, ಗುಡ್ಡಪ್ಪ ಗಿಣ್ಣಿ,ಸಿದ್ದು ಡಂಗಾ, ಸೋಮು ಗಿರಣಿವಡ್ಡರ, ಗೋಪಾಲ ಗಿಣ್ಣಿ, ಲಕ್ಷ್ಮಣ ಡಂಗಿ, ಅಶೋಕ್ ವಾಲಿಕಾರ, ಸಂತೋಷ ಗಿಣ್ಣಿ,ರಾಜು ಹಡಪದ,ಚಾಯಪ್ಪ ಹಳ್ಳಿ,ಅಶೋ ಸಿಂಗ್ಕ ಝಳಕಿ, ಸುದರ್ಶನ್ ಬೇವನೂರ, ಸಿದ್ದಪ್ಪ ನಾವಿ,ಮನೋಹರ ಉಪ್ಪಾರ,ಧಶರದ ಬೇವನೂರ, ರಾಮಣ್ಣ ಪಟೇದ,ಶಂಕರ ಕೋಲಾರ,ಪಿ ಸಿ ಸುಣಗಾರ,ಗುರಣ್ಣ ಅಗಸರ,ನಜೀರಸಾಬ ಅಂಗಡಿ, ಲಕ್ಷ್ಮಣ ಕೇರಕಿ, ಪರಮೇಶ್ ಬೇವನೂರ, ಸೋಮಯ್ಯ ಮಠಪತಿ,ಬಂಟು ಬಾರಸಾಕಳೆ,ಜಟ್ಟಪ್ಪ ಹಡಪದ, ರಾಜಕುಮಾರ್ ಹಡಪದ, ಮಹಾದೇವ ಲಚ್ಚ್ಯಾಣ, ಅಶೋಕ್ ಮಡಿವಾಳ, ಶಾಂತಪ್ಪ ಡಂಗಿ,ಜಟೇಪ್ಪ ಝಳಕಿ, ಉಮೇಶ ಹಲಸಂಗಿ, ಶ್ರೀ ಶೈಲ ಗುನ್ನಾಪೂರ, ಮಾಳಪ್ಪ ನಿಂಬಾಳ, ಲಕ್ಷ್ಮಣ ಪೂಜಾರಿ, ವಿಠ್ಠಲ ಹಳ್ಳಿ,ದ್ಯಾವು ಪೂಜಾರಿ ವಂದಿಸಿ ನಿರೂಪಿಸಿದರು. ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ