ಹೊಸಪೇಟೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಆದಮೇಲೆ ಸಂಭವಿಸಿದ ದುರ್ಘಟನೆ 200 ವರ್ಷದ ಆಲದ ಮರ ಮುರಿದು ಬಿದ್ದ ಘಟನೆ ಜರುಗಿತು ಆದರೆ ಯಾವುದೇ ರೀತಿಯಲ್ಲಿ ಹಾನಿ ಸಂಭವಿಸಿಲ್ಲ
ಹೊಸಪೇಟೆ ಏ.22

ಪ್ರಾರ್ಥನೆ ಮುಗಿದ ನಂತರ 200 ವರ್ಷದ ಹಳೆಯದಾದ ಮರವು ಏಕಾಏಕಿ ಧರೆಗೆ ಉರುಳಿದೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಇಮಾಮ್ ನಿಯಾಜಿ ಅಂಜುಮನ್ ಕಮೀಟಿ ಅಧ್ಯಕ್ಷರು .
ಅವರು ಏಕಾಏಕಿ ಮರವು ಮರಿದುಬಿದ್ದ ಕಾರಣ ತಿಳಿದು ಬಂದಿಲ್ಲ ಆದರೆ ದೇವರ ಕೃಪೆ ಯಾವುದೇ ರೀತಿ ಹಾನಿಯೂ ಸಂಭವಿಸಿಲ್ಲ ಎಂದರು.
ಮುಸ್ಲಿಮರಿಗೆ ಪವಿತ್ರವಾದ ಮಾಸ ರಂಜಾನ್ ಹಬ್ಬ, ಈ ಒಂದು ತಿಂಗಳು ಮುಂಜಾನೆಯಿಂದ ಸೂರ್ಯಾಸ್ತದ ತನಕ ಹನಿ ನೀರನ್ನು ಸೇವಿಸದೆ ಅನ್ನಹಾರ ತೊರೆದು ಉಪವಾಸ ಕೈಗೊಳ್ಳಲಾಗುತ್ತದೆ. ಬಡವರು ಅನಾಥರ ನೋವು, ಸಂಕಷ್ಟ ಹರಿದು ಅನುಕಂಪದಿಂದ ವರ್ತಿಸಬೇಕೆಂಬ ಸದುದ್ದೇಶ ಇದರಲ್ಲಿದೆ. ಈದುಲ್ ಫಿತ್ರ್ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರು ದಾನ.(ಝಕಾತ್) ನೀಡುವ ಕಾರ್ಯಕ್ರಮ ಕೈಕೊಳ್ಳುವುದು ಕೂಡ ಕಡ್ಡಾಯವಾಗಿದೆ,
ಈ ಬಾರಿಯ ರಂಜಾನ್ ಮಾಸವು ಬಿಸಿಲಿನ ಧಗೆಯಲ್ಲಿಯೇ ಹಾದು ಹೋಗಿದೆ.
ಬಡವನ ಹಸಿವನ್ನು ಸ್ವತಃ ಅನುಭವಿಸುವ ವಿಶೇಷವಾಗಿ ತೋರ್ಪಡಿಸುತ್ತದೆ
ಬಡ ನಿರ್ಗತಿಕ ಅನಾಥರ ನೋವು ಸಂಕಷ್ಟ ಅರಿತು ಅವರಲ್ಲಿ ಸಹಾನುಭೂತಿ ಅನುಕಂಪ ಭಾವನೆ ಮೂಡುತ್ತದೆ
ಜನರಲ್ಲಿ ಸಹನೆಯ ಪಾಠವನ್ನು ಇದು ಕಲಿಸುತ್ತದೆ ಬೆಳಗಿನ ಜಾವದಲ್ಲಿ ಅನ್ನಾಹಾರ ತೊರೆದು ಉಪವಾಸ ದೇವನ ಮೇಲಿನ ಭಯದಿಂದ ಅದನ್ನು ಸಂಪೂರ್ಣ ತೊರೆಯುತ್ತಾರೆ, ರಾತ್ರಿ ಹೊತ್ತಿನಲ್ಲಿ ವಿಶೇಷ ರೀತಿಯ ಪ್ರಾರ್ಥನೆಯಲ್ಲಿ ನಿರತರಾಗುತ್ತಾರೆ.

ಮನೆ ಮನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ ಮಕ್ಕಳು ಮಹಿಳೆಯರು ವಿವಿಧ ರೀತಿಯ ಊಟದ ತಿನಿಸುಗಳನ್ನು ತಯಾರಿಸುತ್ತಾರೆ. ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಸುಖ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಿದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್