“ಮೈ ಹೀರೋ” ಎರಡನೇ ಹಂತದ ಚಿತ್ರೀಕರಣ ಮುಕ್ತಾಯ.

ಬೆಂಗಳೂರ ಏ.26

ಬೆಂಗಳೂರ ಎ ವಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ನಿರ್ಮಿಸುತ್ತಿರುವ ” ಮೈ ಹೀರೋ ” ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.


ಮೊದಲ ಹಂತದಲ್ಲಿ ಮೂಡಗೆರೆ, ಚಿಕ್ಕಮಗಳೂರು, ದೇವರಮನೆ ಬೆಟ್ಟಗುಡ್ಡ ಸೌಂದರ್ಯದ ನಡುವೆ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದ ತಂಡ ಚಿತ್ರಕತೆಯ ಸನ್ನಿವೇಶಕ್ಕೆ ಸಂಬಂಧಪಟ್ಟ ದೃಶ್ಯಗಳಿಗಾಗಿ ಮದ್ಯಪ್ರದೇಶಕ್ಕೆ ತೆರಳಿತ್ತು. ಮಧ್ಯಪ್ರದೇಶದಲ್ಲಿರುವ ಮಹೇಶ್ವರ್, ಇಂಡೋರ್, ಮಾಂಡೋ, ಉಜೈನ್, ಪಾತಾಲ್ ಪಾನಿ, ಹಾಗೂ ಹಲವಾರು ಐತಿಹಾಸಿಕ ಸ್ಥಳಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ಕರ್ನಾಟಕ, ಭಾರತ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ ಇದಾಗಿದೆ. ನಾಲ್ಕು ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಹಿರಿಯ ನಟ ದತ್ತಣ್ಣ, ಕಿರುತೆರಯಲ್ಲಿ ಜನರ ಮನಸ್ಸನ್ನು ಗೆದ್ದಿರುವ ಅಂಕಿತ ಅಮರ್ ಮತ್ತು ಬಾಲಿವುಡ್ ನ ಖ್ಯಾತ ಹಾಸ್ಯ ನಟರಾದ ಕ್ಷಿತೀಜ್ ಪವಾರ್ ಹಾಗೂ ಮಕ್ಕಳು ನಟನೆ ಮಾಡಿದ್ದಾರೆ. ಖ್ಯಾತ ಬಹುಭಾಷಾ ನಟರಾದ ಪ್ರಕಾಶ್ ಬೆಳವಾಡಿ , ನಿರಂಜನ ದೇಶಪಾಂಡೆ, ಕಾಂತಾರ ಖ್ಯಾತಿಯ ನವೀನ್ ಬೋಂಡಲ್, ವೇದ ಖ್ಯಾತಿಯ ತನುಜ, ಕಿಲಾಡಿಗಳು ಸಿನೇಮಾ ನಿರ್ದೇಶಕರಾದ ಹರಿಹರನ್ ಬಿಪಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ ಗೆದ್ದಿರುವ ಸಿದ್ದು ಮಂಡ್ಯ ‘ಮೈ ಹಿರೋ’ ಚಿತ್ರಕ್ಕೆ ಕೈ ಜೋಡಿಸಿ ಹೊಸಹುರುಪು ತಂದಿದ್ದಾರೆ. ಈ ಚಿತ್ರದಲ್ಲಿ ಎರಡು ಕನ್ನಡ, ಒಂದು ಹಿಂದಿ ಹಾಗೂ ಒಂದು ಇಂಗ್ಲೀಷ್ ಹಾಡುಗಳು ಇರಲಿವೆ.

ಇಂಗ್ಲಿಷ್ ಹಾಡುಗಳನ್ನು ಯುಎಸ್ ನ ಖ್ಯಾತ ಸಂಗೀತ ನಿರ್ದೇಶಕರೆ ಸಂಯೋಜಿಸಲಿದ್ದಾರೆ. ಯು ಎಸ್ ನಲ್ಲಿ ಒಂದು ಹಾಡಿನ ಚಿತ್ರೀಕರಣ ಮತ್ತು ಐದು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಹಾಲಿವುಡ್ ಖ್ಯಾತ ನಟರೊಬ್ಬರು ಪಾತ್ರ ನಿರ್ವಹಿಸಲಿದ್ದು ಅವರ ಜೊತೆ ಮಾತುಕತೆ ನಡೆದಿದೆ ಇದೀಗ ಚಿತ್ರೀಕರಣ ಮುಗಿಸಲಾದ ಪೋರ್ಷನ್ ಗೆ ಡಬ್ಬಿಂಗ್ ಕಾರ್ಯ ನಡೆಸಿದ್ದೇವೆ ಎಂದು ನಿರ್ದೇಶಕ ಅವಿನಾಶ್ ವಿಜಯಕುಮಾರ್ ತಿಳಿಸಿದರು. ಗಗನ್ ಬಧಾರಿಯಾ ಸಂಗೀತ , ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣ, ಕಥೆ, ಚಿತ್ರಕಥೆಯನ್ನು ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್ ಟಿ,. ಎ.ವಿ.ಸ್ಟುಡಿಯೋ ಸಂಭಾಷಣೆ ಬರೆದಿದ್ದಾರೆ , ಪಿಆರ್ ಓ ಸುಧೀಂದ್ರವೆಂಕಟೇಶ್, ಪತ್ರಿಕಾ ಸಂಪರ್ಕ ಡಾಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ,. ಸಂಕಲನ ಮುತ್ತುರಾಜ್ ಟಿ, ನಿರ್ಮಾಣ ನಿರ್ವಹಣೆ ಹರಿಹರನ್ ಬಿ.ಪಿ. ಮೊದಲಾದವರು ತಂತ್ರಜ್ಞರಲ್ಲದೆ ಹಾಲಿವುಡ್‌ನ ತಂತ್ರಜ್ಞರು ಸಹ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವರದಿ: ಡಾ.ಪ್ರಭು ಗಂಜಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button