ಝಳಕಿ ಮನೆಗೆ ತೆರಳಿ ಮತ ಯಾಚನೆ ಸಭೆ
ಝಳಕಿ ( ಏ.26 ) :
ಸಮೀಪದ ಹಡಲಸಂಗ, ಎಲ್‌ಟಿ ನಂಬರ್ ೦೧,೦೬,೦೪, ಹೊರ್ತಿ, ಹೊರ್ತಿ ಎಲ್‌ಟಿ ೦೧,೦೨ ಗ್ರಾಮಗಳಲ್ಲಿ ಇಂಡಿ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮನೆ ಮನೆಗೆ ಮತ ಯಾಚನೆ ಸಭೆಗೆ ಸಸಿಗೆ ನೀರು ಹಾಕಿ ನಡೆದಾಡುವ ದೇವರು ಸಿದ್ದೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವುದರ ಮೂಲಕ ಮಾತನಾಡಿದರು.
ನಮ್ಮ ಸರ್ಕಾರ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಗಾಂದೀಜಿಯವರ ಕನಸಿನ ಕೂಸು ಕಾಂಗ್ರೆಸ್ ಪಕ್ಷ, ನಾನು ಸಿದ್ದಾಂತ, ಸಂಸ್ಕçತಿ, ಆಚಾರ, ವಿಚಾರಗಳನ್ನು ನಂಬಿದವನು, ಇವತ್ತು ಇಂಡಿಯಲ್ಲಿ ೩ ನೇ ಮಜಲಿಗೆ ಯಾವುದೇ ಯಂತ್ರದ ಸಹಾಯವಿಲ್ಲದೆ ನೀರು ದೊರಕುವ ವ್ಯವಸ್ಥೆ ನಮ್ಮ ಸರ್ಕಾರ ಮಾಡಿದೆ ಎಂದರು. ಮಹಿಳೆಯರಿಗೆ ಮೊದಲನೆಯ ಸ್ಥಾನ ಮಾನ ನೀಡುವ ಪಕ್ಷ ಅದು ಕಾಂಗ್ರೆಸ್ ಪಕ್ಷ ಎಂದು ಕೆಪಿಸಿಸಿ ಮಹಿಳಾ ಕಾರ್ಯಾಧ್ಯಕ್ಷೆ ಕಾಂತಾ ನಾಯಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಾಲೀಕರು ನೀವು ನಿಮ್ಮ ಸೇವಕ ನಾನು, ನಾನು ಶಾಸಕನಾಗಿದ್ದು ನಿಮ್ಮ ಸೇವೆ ಮಾಡೋದಿಕ್ಕೆ, ರಾಜ್ಯದಲ್ಲಿ ನಮ್ಮ ತಾಲೂಕಿನಲ್ಲಿ ಮಾತ್ರ ಮಿನಿ ವಿಧಾನ ಸೌಧ ಇದೆ, ಇಲ್ಲಿ ಒಂದೇ ಕಟ್ಟಡದಲ್ಲಿ ಎಲ್ಲಾ ಕಚೇರಿಗಳು ಇವೆ, ಇದಕ್ಕೆ ಕಾರಣ ನಮ್ಮ ಸರ್ಕಾರ, ಬಿಜೆಪಿ ಪಕ್ಷ ಮರ್ಯಾದೆ ಕೊಡದ ಪಕ್ಷ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಸಾಧ್ಯ , ದೂರದೃಷ್ಟಿ ಉಳ್ಳ, ಕಳ ಕಳಿ ಉಳ್ಳ, ಆಚಾರ ವಿಚಾರ ಇದ್ದಂತಹ ಅಭ್ಯರ್ಥಿಗೆ ನಿಮ್ಮ ಮತ ಕೊಡಿ ಎಂದು ವಿನಂತಿಸಿಕೊಂಡರು.
೨೩ರಿಂದ ೨೮ ರವರೆಗೆ ನಮ್ಮ ಸರ್ಕಾರ ಆಡಳಿತ ನಡೆಸಲ್ಲಿದ್ದು, ಇಲ್ಲಿನ ಭ್ರಷ್ಟಾಚಾರ, ಅನಾಚಾರಗಳನ್ನು ತೊಳೆದು ಹಾಕುವುದೆ ಮೊದಲನೆಯ ಕೆಲಸ, ೧೦೦ಕ್ಕೆ ೯೯ ಪ್ರತಿಶತ ಕೆಲಸಗಳನ್ನು ಪೂರ್ಣ ಗೊಳಿಸಿದ ಸರ್ಕಾರ ಅದುವೇ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ಸಿಗೆ ತನ್ನದೇ ಆದಂತಹ ಸಿದ್ದಾಂತಗಳಿವೆ, ಇಂದಿರಾ ಗಾಂಧಿರವರು ಮಾಡಿರುವಂತಹ ಹಲವಾರು ಯೋಜನೆಗಳಲ್ಲಿ ಗರಿಬಿ ಹಠಾವೋ ಎಂಬ ಮುಖ್ಯ ಯೋಜನೆ, ಗರಿಬರನ್ನು ಪ್ರೀತಿಸೋದು, ಬೇಳೆಸೋದು, ರಕ್ಷಿಸೋದು ಕೇವಲ ಕಾಂಗ್ರೆಸ್ ಪಕ್ಷ ಆದ್ದರಿಂದ ಮತ್ತೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿ ಎಂದರು.
ಈ ಸಂದರ್ಭದಲ್ಲಿ ಗುರಣ್ಣಗೌಡ ಪಾಟೀಲ, ಪ್ರಶಾಂತ ಪೂಜಾರಿ, ಮಲ್ಲು ನಾವಿ, ಸಣ್ಣಪ್ಪ ತಳವಾರ, ಅಣ್ಣಪ್ಪ ತಳವಾರ, ಶೇಖರ ನಾಯಕ, ಪ್ರಶಾಂತ ಕಾಳೆ, ರಾಜು ಶಾಮಪುರ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ