ಆಗುವುದಾದರೆ ಇವರಂತಾಗು……!!

ಮೂಕನಾಗಬೇಕು ಸುಳ್ಳು ತಲೆಯೆತ್ತಿ ನಿಂತಾಗ
ಕಿವುಡನಾಗಬೇಕು ಚಾಡಿಕೋರರ ಮಾತುಗಳು ಜೋರಾದಾಗ.ಕುರುಡನಾಗಬೇಕು ನಮ್ಮವರೇ ನಮಗೆ ಮೋಸ ಮಾಡುವಾಗ
ಶಾಂತನಾಗಬೇಕು ಹಿತಶತ್ರು ಜೋರಾಗಿ ಚೀರಾಡುವಾಗ.ಧೈರ್ಯವಂತನಾಗಬೇಕು ನಿಲುಕದ ಸಮಸ್ಯೆಗಳು ಬಂದೊಡಗಿದಾಗ
ಮೌನಿಯಾಗಬೇಕು ಮೂರ್ಖರು ವಾದ ಮಾಡುವಾಗ.ಉಪಕಾರಿಯಾಗಬೇಕು ಅಪಕಾರಿ ಸಹಾಯ ಕೇಳಿದಾಗೂ
ಸ್ನೇಹಿತನಾಗಬೇಕು ಮನುಷ್ಯರೊಂದಿಗಲ್ಲ ಮನುಷ್ಯತ್ವದವರೊಂದಿಗೆ.ಹೋರಾಟಗಾರನಾಗಬೇಕು ಬದುಕಿನ ನೋವು ನಲಿವುಗಳ ಜೊತೆಗೆ
ಸಾಧಕನಾಗಬೇಕು ಯಾರೂ ಮಾಡದ ಸಾಧನೆ ಮಾಡಿ.ಆದರ್ಶವಾಗಬೇಕು ಬದುಕಿ ಬಾಳಿದ ಊರಿನ ಜನರಿಗೆ
ಮಾದರಿಯಾಗಬೇಕು ಬೆಳೆಯುವ ಯುವ ಪೀಳಿಗೆಗೆ.ಸ್ನೇಹಿತನಾಗಬೇಕು ಪ್ರತಿ ಸಂಬಂಧಗಳಿಗೆ
ಮಗುವಾಗಬೇಕು ತಂದೆ ತಾಯಿ ಸದಾ ಪ್ರೀತಿಸುವಂತೆ.
ರಚನೆ:ಮುತ್ತು.ಯ.ವಡ್ಡರ* (ಶಿಕ್ಷಕರು)
ಬಾಗಲಕೋಟ