ಕಲಕೇರಿ ಗ್ರಾಮದ ಕೆಇಬಿ ಗೆ ಕ್ಯಾಶ್ ಕೌಂಟರ್ ಅವಶ್ಯ: ರೈತರ ಆಗ್ರಹ.
ಕಲಕೇರಿ ಮಾರ್ಚ್.13

ಕಲಕೇರಿ ಗ್ರಾಮದಲ್ಲಿ ಕೆ ಇ ಬಿ ಯ ಬಿಲ್ಡಿಂಗ್ ಕಟ್ಟಿ 4 ವರ್ಷಗಳ ಕಾಲ ಆಯ್ತು ಕೆ ಇ ಬಿ ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒಂದು ತಿಂಗಳಾಯಿತು. ಇಲ್ಲಿವರೆಗೂ ಕ್ಯಾಶ್ ಕೌಂಟರ್ ಮಾಡಬೇಕೆಂಬುದು ಯಾವ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ ಒಂದು ತಿಂಗಳಿಗೆ 40 ರಿಂದ 50 ಲಕ್ಷ ಕನೆಕ್ಷನ್ ಆಗುವ ಸುತ್ತ 18 ಹಳ್ಳಿಗಳ ರೈತರಿಗೆ ಗ್ರಾಹಕರಿಗೆ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದೆ ಯಾವುದೇ ಕೆಲಸವಿದ್ದರೆ 40 ರಿಂದ 50 ಕಿಲೋಮೀಟರ್ ದೂರದಲ್ಲಿ ಜನರಿಗೆ ಹೋಗಕ್ಕೆ ತುಂಬಾ ತೊಂದರೆ ಇದೆ ಆದ್ದರಿಂದ ಅಧಿಕಾರಿಗಳು ಬೇಗನೆ ಕಲಕೇರಿ ಗ್ರಾಮದಲ್ಲಿ ಕ್ಯಾಶ್ ಕೌಂಟರ ಪ್ರಾರಂಭ ಮಾಡಬೇಕು ಎಲ್ಲಾ ರೈತರು ಹಾಗೂ ಸಾರ್ವಜನಿಕರಿಂದ ಆಗ್ರಹಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿಕೆಇಬಿ ಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ಅಧ್ಯಕ್ಷರು ಮೈಬೂಬಬಾಷ ಮನಗೂಳಿ. ಮತ್ತು ಶ್ರೀಶೈಲ ವಾಲಿಕಾರ ರೈತ ಸಂಘದ ಅಧ್ಯಕ್ಷರು. ಕಲಕೇರಿಯ ಗ್ರಾಮ ಪಂಚಾಯತಿಯ ಸದಸ್ಯರು ಸುಧಾಕರ ಅಡಿಕಿ. ರೈತ ಸಂಘದ ಗೌರವಾಧ್ಯಕ್ಷರಾದ ಮಶಾಕ ಸಾಬ ವಾಲಿಭಾವಿ ಹಲವಾರು ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ಮೂಲಕ ಎಚ್ಚರಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ