ಕೆರೂಟಗಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ.
ಕೆರೂಟಗಿ ಸ.13

ಗ್ರಾಮ ಪಂಚಾಯತ ವತಿಯಿಂದ ಕೆರೂಟಗಿ ಶಾಲೆಯಲ್ಲಿ ಅದ್ದೂರಿಯಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಡಿ ಬಾ ನನ್ನ ಕಂದ ಅಂಗಾಲ ತೋಳೆದೇನ ತೆಂಗಿನ ಕಾಯಿ ತಿಳಿನೀರ ತುಕ್ಕೊಂಡು ನಿನ್ನ ಬಂಗಾರದ ಮಾರಿ ತೋಳೆದೇನ ಎನ್ನುವುದರ ಮೂಲಕ ಕೆರೂಟಗಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎಸ್ ಸಾತಿಹಾಳ ಸರ್ವರಿಗೂ ಸ್ವಾಗತ ಬಯಸಿದರೂ ದೇವರ ಹಿಪ್ಪರಗಿ ತಾಲೂಕಿನ ಕೆರೂಟಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸತ್ಯವ್ವ ಪರಶುರಾಮ ದೊಡಮನಿಯವರ ಸಮ್ಮುಖದಲ್ಲಿ ಸುಸುತ್ರವಾಗಿ ನೇರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ ಶ್ರೀ ಶಿವಬಸವ ಶಿವಾಚಾರ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕೆರೂಟಗಿ ಕ್ಲಸ್ಟರ್ ಮಟ್ಟದ ಸಿ.ಆರ್.ಪಿ ಶ್ರೀ ಸಂಜು ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದರಂತೆ ಅತಿಥಿ ಶಿಕ್ಷಕರ ಜಿಲ್ಲಾಧ್ಯಕ್ಷರಾದ ದಾನೇಶ ಕಲಕೇರಿಯವರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಭೆ ಮುಖ್ಯ ಆಟದ ಜೋತೆಗೆ ಪಾಠ ಮುಖ್ಯ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಸರ್ವ ಸದಸ್ಯರು ಎಲ್ಲಾ ಶಾಲೆಯ ಶಿಕ್ಷಕರು ಶಿಕ್ಷಕಿಯರು ಊರಿನ ಹಿರಿಯರು ಶಿಕ್ಷಣ ಪ್ರೇಮಿಗಳು ಅವರಿವರೇನದೇ ಎಲ್ಲರೂ ಸರ್ವ ರೀತಿಯಿಂದ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ