ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಜೆಡಿಎಸ್ ಗೆ ಬೆಂಬಲಿಸಿ ರವಿಕಾಂತ ಪಾಟೀಲ

ಸಾತಲಾಗಾಂವ (ಏ.27) :

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾಜಿ ಶಾಸಕರಾದ ರವಿಕಾಂತ ಪಾಟೀಲ ಮಾತನಾಡುತ್ತಾ ನಾನು ಶಾಸಕನಾಗಿದ್ದಾಗ ಮಾಜಿ ಪ್ರಧಾನಿ ದೇವೇಗೌಡರು ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಕಾರ್ಯ ಮಾಡಿದ್ದೇನೆ,ಇಂಡಿ ಸಿಂದಗಿ ತಾಲೂಕಿಗೆ ಕೃಷ್ಣಾ ಕಾಲುವೆ, ಹಾಗೂ ಇಂಡಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಇದಕ್ಕೆಲ್ಲ ಕಾರಣ ಜೆಡಿಎಸ್ ಪಕ್ಷದ ನೀರಾವರಿ ಭೀಷ್ಮ ಮಾಜಿ ಪ್ರಧಾನಿ ದೇವೇಗೌಡರು‌.ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಬಿ ಡಿ ಪಾಟೀಲರ ಗೆಲುವಿಗೆ ಬೆಂಬಲ ನೀಡಬೇಕೆಂದು ಕಳಕಳಿಯ ಮನವಿ ಮಾಡಿದರು.ಮಾಜಿ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ ಹಲಸಂಗಿ ಮಾತನಾಡುತ್ತಾ ಬರದ ನಾಡಿನ ಭಗೀರಥ ಸನ್ಮಾನ್ಯ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪಂಚರತ್ನ ಯೋಜನೆಯನ್ನು ಅನುಷ್ಠಾನಕ್ಕೆ ತರಲು ದೃಢಸಂಕಲ್ಪ ಮಾಡಿದ್ದಾರೆ.ಈ ಕಾರ್ಯಕ್ರಮಗಳು ಬಡವರ ಪಾಲಿಗೆ ಆಶಾಕಿರಣ ಆಗಿವೆ ಎಂದು ಮಾತನಾಡಿದರು.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಯೋಗಪ್ಪ ನೇದಲಗಿ ಮಾತನಾಡುತ್ತಾ ರೈತ ಹೋರಾಟಗಾರ ಬಿ ಡಿ ಪಾಟೀಲರು ಸರಳ ವ್ಯಕ್ತಿತ್ವದ ನಾಯಕರು ಅವರ ಜನಪರವಾದ ಕಳಕಳಿಯನ್ನು ಗಮನಿಸಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರಿಗೆ ನಾವು ಬೆಂಬಲಸಿ ಗೆಲುವುಗೆ ಶ್ರಮಿಸಿದ್ದೇವೆ ಎಂದು ಮಾತನಾಡಿದರು.

ನಾಗೇಶ ತಳಕೇರಿ,ಅಯೋಬ ನಾಟೀಕರ, ಶ್ರೀಶೈಲಗೌಡ ಪಾಟೀಲ, ಮುತ್ತಪ್ಪ ಪೋತೆ,ಮಾತನಾಡಿದರು.ಮರೆಪ್ಪ ಗಿರಣಿವಡ್ಡರ, ಸಿದ್ದು ಡಂಗಾ,ಟಿ ಎಸ್ ಪೂಜಾರಿ, ಪರತಯ್ಯ ತಳವಾರ,ಭೀಮ ಕೋಳಿ, ಹುಸೇನಿ ಮಸಳಿ,ನೀಲಕಂಠ ವಾಲಿಕಾರ,ರಾಮ ಬೋಮಗೋಂಡ,ಸುರೇಶ ತಳವಾರ, ಶಂಕರಗೌಡ ಬಿರಾದಾರ,ಮಲ್ಲು ಸಗರಗೋಂಡ,ರಮಜಾನ ಸಂಜವಾಡ,ಮಮ್ಮಸಾಹುಕಾರ ತಾಂಬೂಳಿ,ರಾವತಪ್ಪ ನಂದಗೋಕುಲ,ರಾಜು ತಳವಾರ, ರಮೇಶ್ ವಾಲಿಕಾರ, ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button