ಬಸವನಗೌಡ ಪಾಟೀಲ್ ಯತ್ನಾಳ್ ಮಾಜಿ ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿಯಾದ ಬಲ್ಲಾ ಹುಣಸಿ ರಾಮಣ್ಣನವರ ಪರವಾಗಿ ಕೊಟ್ಟೂರಿನಲ್ಲಿ ಮತಯಾಚನೆ ನಡೆಸಿದರು.

ಕೊಟ್ಟೂರು ಏ.28

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಸಚಿವರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಲ್ಲಾ ಹುಣಿಸಿ ರಾಮಣ್ಣನವರ ಪರವಾಗಿ ಕೊಟ್ಟೂರಿನಲ್ಲಿ ಮತಯಾಚನೆ ನಡೆಸಿದರು
ಬಲ್ಲಾ ಹುಣಸಿ ರಾಮಣ್ಣ ಸರಳ ಮತ್ತು ಸೃಜನಶೀಲ ಸಹೃದಯವಂತ ಇಂತಹ ಸರಳ ವ್ಯಕ್ತಿ ಬಗ್ಗೆ ಯಾವ ಸಮುದಾಯದವರು ಭಯ ಪಡಬೇಕಾಗಿಲ್ಲ ಮಾದಿಗ ಸಮಾಜದಲ್ಲಿ ಸೇವೆ ಮಾಡು, ವ್ಯಕ್ತಿಗಳೇ ಇದ್ದಾರೆ ಹೊರತು ಯಾವುದೇ ರೀತಿಯ ಬೇರೆ ಸಮಾಜದವರಿಗೆ ಅಟ್ರಾಸಿಟಿ ಅಂತಹ ಕೇಸ್ ಮಾಡಲು ಮುಂದೆ ಬರುವ ಸಮಾಜ ಅಲ್ಲ ಅಪಾರ ಗೌರವವನ್ನು ಇಟ್ಟುಕೊಂಡ ಇಂದಿನಿಂದಲೂ ನಮ್ಮ ಸೇವೆ ಮಾಡುತ್ತಾ ಬಂದಿರುವ ಸಮಾಜ ಎಂದರೆ ಅದು ಮಾದಿಗ ಸಮಾಜ ಹೀಗಾಗಿ ಯಾರು ಭಯಪಡಬೇಕಾಗಿಲ್ಲ 55000 ಲಿಂಗಾಯಿತರು ಮತಗಳು ಸಂಪೂರ್ಣ ಬಲ್ಲಾ ಹುಣಿಸಿ ರಾಮಣ್ಣನಿಗೆ ಮತ ಚಲಾಯಿಸಬೇಕು ಹಾಗೂ ಬಲ್ಲಾ ಹುಣಸಿ ರಾಮಣ್ಣ ಗೆದ್ದರೆ ನಾನು ಗೆದ್ದಂತೆ ನನಗೆ ನೀವು ಮತ ನೀಡಿದಂತೆ ಎಂದರು ಹಾಗೂ ನೇಮಿರಾಜ್ ನಾಯಕ್ ರವರಿಗೆ ಎರಡು ಬಾರಿ ಟಿಕೆಟ್ ನಮ್ಮ ಬಿಜೆಪಿ ನೀಡಿತ್ತು.

ಆದರೆ ಗೆಲ್ಲಲಿಕ್ಕೆ ಆಗಲಿಲ್ಲ ಆದಕಾರಣದಿಂದ ಟಿಕೆಟ್ ಸಿಕ್ಕಿಲ್ಲ ಎಂದು ಇವತ್ತು ಲೆಕ್ಕಕ್ಕೆ ಇರದ ಪಕ್ಷ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ ಇಂತಹ ಜಾತಿವಾದಿ ನಾಯಕರಿಗೆ ತಕ್ಕ ಪಾಠ ಕಲಿಸಬೇಕು ಆದ್ದರಿಂದ ದಯವಿಟ್ಟು ನಿಮ್ಮ ಅಮೂಲ್ಯವಾದ ಮತ ಜೆಡಿಎಸ್ ಪಕ್ಷಕ್ಕೆ ಹಾಕಬೇಡಿ ನಮ್ಮ ಕಮಲದ ಗುರುತು ಬಿ ರಾಮಣ್ಣನವರಿಗೆ ಬಹುಮತದಿಂದ ಆರಿಸಿ ತರಬೇಕೆಂದು ಮತ್ತು ಈ ಸಮಾಜದಲ್ಲಿ ಸಾಮಾಜಿಕ ನ್ಯಾಯ ಸಿಗಬೇಕಾದರೆ ಅದು ಬಿಜೆಪಿ ಪಕ್ಷ ಎಲ್ಲಾ ಸಮಾಜದವರಿಗೂ ಮೀಸಲಾತಿ ನೀಡುತ್ತಾ ಬಂದಿದ್ದೇವೆ ಆದರೆ ಡಿಕೆ ಶಿವಕುಮಾರ್ ಹೇಳ್ತಾರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಮೀಸಲಾತಿ ರದ್ದು ಮಾಡುತ್ತೇನೆ ಎಂದು ಸಾಮಾನ್ಯ ಜನರಿಗೆ ಮೀಸಲಾತಿ ಬಗ್ಗೆ ತಿಳಿದುಕೊಂಡು ನಿಮ್ಮ ಅಮೂಲ್ಯವಾದ ಮತವನ್ನು ನಮ್ಮ ಕಮಲದ ಗುರುತಿಗೆ ಅಂದರೆ ಬಿ ರಾಮಣ್ಣನಿಗೆ ಮತ ಹಾಕಬೇಕೆಂದು ಬಸವಗೌಡ ಪಾಟೀಲ್ ಯತ್ನಾಳ್ ರವರು ತಿಳಿಸಿದರು. ದೇವೇಂದ್ರಪ್ಪ ಸಂಸದರು ವೀರ ಸ್ವಾಮಿ ಬಿಜೆಪಿ ಮಂಡಲ ಅಧ್ಯಕ್ಷರು ಆರ್ ಟಿ ಓ ಪರಮೇಶ್ವರಪ್ಪ ಲಕ್ಷ್ಮೀನಾರಾಯಣ್ಇನ್ನು ಮುಂತಾದ ಬಿಜೆಪಿಯ ಅನೇಕ ಮುಖಂಡರು ಕಾರ್ಯಕರ್ತರು ಅಪಾರ ಮತ ಬಾಂಧವರು ಸೇರಿದ್ದರು.

ತಾಲೂಕ ವರದಿಗಾರರು : ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button