ಟಿಸಿಎಸ್ ಕಂಪನಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಸಲ್ಲಿಕೆ…..
ಕೊಟ್ಟೂರು ಏ.29 :

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ. 29 ಏಪ್ರಿಲ್ 2023 ರಂದು ಕೊಟ್ಟೂರೇಶ್ವರ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು, ಧಾರವಾಡದ ದೇಶಪಾಂಡೆ ಫೌಂಡೇಶನ್ ಸಂಸ್ಥೆ ಅಡಿಯಲ್ಲಿ ಎರಡು ತಿಂಗಳ ಕಾಲ ತರಬೇತಿಯನ್ನು ಪಡೆದು ಟಿಸಿಎಸ್ ಕಂಪನಿಗೆ ಆಯ್ಕೆಯಾಗಿರುವ ಏಳು ಜನ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಪ್ರೊ. ಶಾಂತ ಮೂರ್ತಿ ಬಿ. ಕುಲಕರ್ಣಿ ಮತ್ತು ಡಾ. ರವಿಕುಮಾರ್ ಅಭಿನಂದನೆಯನ್ನು ಸಲ್ಲಿಸಿದರು ಅಭಿನಂದನಾ ಕಾರ್ಯಕ್ರಮದಲ್ಲಿ ತರಬೇತುದಾರರಾಗಿರುವ ಕುಮಾರಿ. ತೇಜಸ್ವಿನಿ ಮತ್ತು ಡಾ. ಪೃಥ್ವಿರಾಜ್ ಸಿ.ಬೆಡ್ ಜರ್ಗಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.ಕೊಟ್ಟೂರು