ಇನ್ನೊಮ್ಮೆ ಆಶೀರ್ವದಿಸಿದರೆ ತಾಲೂಕಿನ ಚಿತ್ರಣವನ್ನೇ ಬದಲಾವಣೆ ಮಾಡಿ ಜಿಲ್ಲಾ ಕೇಂದ್ರವನ್ನಾಗಿ ಮಾಡುವೆ ಯಶವಂತರಾಯಗೌಡ ಪಾಟೀಲ.
ಭತಗುಣಕಿ ಏ.29
ಹಿಂದುಳಿದ ತಾಲೂಕನ್ನು ಮುಂದುವರಿಯ ತಾಲೂಕನ್ನಾಗಿ ಮಾರ್ಪಡಸಿದ್ದೇನೆ ಈ ಬಾರಿಯೂ ಇನ್ನೊಮ್ಮೆ ಆಶೀರ್ವದಿಸಿದರೆ ತಾಲೂಕಿನ ಚಿತ್ರಣವನ್ನೇ ಬದಲಾವಣೆ ಮಾಡಿ ಜಿಲ್ಲಾ ಕೇಂದ್ರವನ್ನಾಗಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಹೇಳಿದರು.ಶನಿವಾರ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಜಿಲ್ಲಾ ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಇಲಾಖೆಗಳನ್ನು ಈಗಾಗಲೇ ಕೇಂದ್ರ ಸ್ಥಾನದಲ್ಲಿ ತರಲಾಗಿದೆ. ತಾಲೂಕಿನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶೈಕ್ಷಣಿಕ ರಂಗವನ್ನು ಮಾರ್ಪಾಡು ಮಾಡಿದ್ದೇನೆ.

ದಶಕಗಳ ಕಾಲ ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಪೂರ್ಣ ಮಾಡಿದ್ದೇನೆ. ಕೆರೆ ತುಂಬುವುದು, ಕಾಲುವೆಗಳಿಗೆ ನೀರು ಹರಿಸುವುದು ಸೇರಿದಂತೆ ಇನ್ನಿತರ ಕಾರ‍್ಯಗಳನ್ನು ಮಾಡಿದ್ದೇನೆ. ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದರೆ ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ರಾಜ್ಯದಲ್ಲಿಯೇ ಮಾದರಿ ಆಡಳಿತ ನೀಡುತ್ತೇನೆ ಎಂದು ತಿಳಿಸಿದರುಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಆರ್. ಪಾಟೀಲ್ ಬಳ್ಳೊಳ್ಳಿ, ಸಂಭಾಜಿ ಮಿಸಾಳೆ, ಬಿ.ಎಮ್. ಕೋರೆ, ಅಣ್ಣಪ್ಪ ಬೀದರಕೋಟಿ, ಜಾವಿದ್ ಮೊಮಿನ್, ಇಲಿಯಾಸ ಬೋರಾಮಣಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್. ವಿಜಯಪುರ.