ಶಾಂತಿ ಮತ್ತು ಅಭಿವೃದ್ದಿ ಮಾತ್ರ ನನ್ನ ಮೂಲಮಂತ್ರ-ಶಾಸಕ ಯಶವಂತರಾಯಾಗೌಡ ಪಾಟೀಲ.

ಇಂಡಿ ಮೇ.6

ಇಂಡಿ ಪಟ್ಟಣದ ಸುರಪೂರ ಸಭಾ ಭವನದಲ್ಲಿ ಶನಿವಾರ ಹಾಲುಮತದ ಮುಖಂಡರು ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿಇಂಡಿ ಮತಕ್ಷೇತ್ರದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಗಳು ಮಾತ್ರ ನನ್ನ ಮೂಲ ಮಂತ್ರ. ಅವುಗಳಿಗಾಗಿ ನಾನು ಸದಾ ಚಿಂತಿಸುತ್ತೇನೆ ವೈಯಕ್ತಿಕ ಟೀಕೆ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವದು ನನಗೂ ಗೊತ್ತು, ಆದರೆ ಅಂತಹ ಹೀನ ಕಾರ್ಯಕ್ಕೆ ನಾನು ಕೈಹಾಕುವದಿಲ್ಲ. ಇನ್ನೊಬ್ಬರ ತೇಜೋವಧೆ ಮಾಡಲು ಪ್ರಯತ್ನಿಸುವದಿಲ್ಲ.

ಜಾತಿ, ನಿಂದನೆ, ತೇಜೋವಧೆ, ಕೀಳು ಭಾಷೆಯ ರಾಜಕಾರಣಕ್ಕಿಂತ ನೀತಿ ರಾಜಕಾರಣ ಶ್ರೇಷ್ಠ ಎಂದು ನಂಬಿಕೊಂಡವನು ನಾನು ಎಂದು ಹೇಳಿದ ಅವರು ರಾಜ್ಯದಲ್ಲಿರುವ ಬಿಜೆಪಿ ಸರಕಾರದಲ್ಲಿ ಭ್ರಷ್ಠಾಚಾರ ತುಂಬಿ ತುಳುಕುತ್ತಿದೆ. ಅದನ್ನು ಹೋಗಲಾಡಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.ಎಲ್ಲರನ್ನೂ ಪ್ರೀತಿಸಿ, ಅವರ ಮನಸ್ಸನ್ನು ಗೆದ್ದು, ಅವರೆಲ್ಲರ ಸಲಹೆ ಸೂಚನೆಯ ಮೇರೆಗೆ ಅಭಿವೃದ್ಧಿ ಮಾಡುವ ರಾಜಕಾರಣಿಯಾಗಿದ್ದೇನೆಯೇ ವಿನಹ ಇನ್ನೊಬ್ಬರನ್ನು ಹೀಯಾಳಿಸಿ ಮಾತನಾಡುವದಿಲ್ಲ. ಬಸವಣ್ಣನವರ ನೀತಿಯನ್ನು ಅನುಸರಿಸಿ, ಪ್ರಜಾಪ್ರಭುತ್ವದ ತಳಹದಿಯ ಮೇಲೆ ಕೆಲಸ ಮಾಡುತ್ತೇನೆ ಎಂದರು.ಕಳೆದ ಎರಡು ಅವಧಿಯಲ್ಲಿ ನನಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದಕ್ಕೆ ತಕ್ಕಂತೆ ಮತಕ್ಷೇತ್ರದ ಅಭಿವೃದ್ಧಿ ಮಾಡಿ ಇಂಡಿ ತಾಲ್ಲೂಕಿನ ಚಿತ್ರಣವನ್ನೇ ಬದಲಾಯಿಸಿದ್ದೇನೆ. ನನ್ನ ಅಭಿವೃದ್ಧಿ ಕಂಡ ಇಂಡಿ ಮತಕ್ಷೇತ್ರದ ಮತದಾರರು ನಾನು ಪ್ರಚಾರಕ್ಕೆ ಹೋದ ಕಡೆಗಳಲ್ಲೇಲ್ಲಾ ನನ್ನನ್ನು ಸನ್ಮಾನಿಸುತ್ತಿದ್ದಾರೆ. ನಾನು ಪ್ರಚಾರಕ್ಕೆ ಹೋಗುವ ಮಾರ್ಗವು ಸನ್ಮಾನಕ್ಕೆ ಹೊರಟಂತಿದೆ. ಮತದಾರರು ನನಗೆ ಅಷ್ಟೋಂದು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ. ಕಾರಣ ಈ ಸಲವೂ ನನ್ನ ಗೆಲವು ನಿಶ್ಚಿತ ಎಂದರು.ಸಮಾರಂಭದಲ್ಲಿ ಹಾಲುಮತ ಸಮಾಜದ ಮುಖಂಡ ಜೆಟ್ಟೆಪ್ಪ ರವಳಿ ಮಾತನಾಡಿ, ಕರ್ನಾಟಕ ರಾಜ್ಯಕ್ಕೆ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಬೇಕು. ಅವರು ಮುಖ್ಯ ಮಂತ್ರಿಯಾಗಬೇಕೆಂದರೆ ಇಂಡಿ ಮತಕ್ಷೇತ್ರದಲ್ಲಿ ಯಶವಂತರಾಯಗೌಡ ಪಾಟೀಲರಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.ಜಾತಿ ರಾಜಕಾರಣ ಬೇಡ ಎಂದ ಅವರು ಕರ್ನಾಟಕ ರಾಜ್ಯದಲ್ಲಿ ಯಾವದೇ ಶಾಸಕ ಕೇವಲ ತನ್ನ ಜಾತಿಯವರ ಮತ ಪಡೆದುಕೊಂಡು ಶಾಸಕರಾದ ಉದಾಹರಣೆಗಳಿಲ್ಲ. ಶಾಸಕರಾಗಬೇಕೆಂದರೆ ಮತಕ್ಷೇತ್ರದ ಸರ್ವ ಜನಾಂಗದ ಮತಗಳ ಅಗತ್ಯವಿದೆ. ಯಾರು ಸರ್ವರನ್ನೂ ಪ್ರೀತಿ, ಗೌರವದಿಂದ ಕಾಣುತ್ತಾರೆಯೋ ಅಂತವರನ್ನು ಆಯ್ಕೆ ಮಾಡೋಣ ಎಂದ ಅವರು ನಮ್ಮ ಮತಕ್ಷೇತ್ರದಲ್ಲಿ ಸರ್ವರನ್ನೂ ಪ್ರೀತಿಸುವ ವ್ಯಕ್ತಿ ಶಾಸಕ ಯಶವಂತರಾಯಗೌಡ ಪಾಟೀಲ. ಕಾರಣ ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕೆಂದು ಹಾಲುಮತದ ಮತದಾರರಲ್ಲಿ ಮನವಿ ಮಾಡಿಕೊಂಡರು.ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರನಗೌಡ ಪಾಟೀಲ, ಎನ್.ಕೆ.ಪೂಜಾರಿ, ಮೈಲಾರಿ ಪೂಜಾರಿ, ಸಿದರಾಯ ಐರೋಡಗಿ, ಬಿಸಿನಾಳ ಮುಂತಾದವರು ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.ವೇದಿಕೆಯಲ್ಲಿ ಹಾಲುಮತ ಸಮಾಜದ ಪೂಜ್ಯರಾದ ಕೆಂಚಪ್ಪ ಪೂಜಾರಿ ಪಡನೂರ, ಮಾಯಪ್ಪ ಪೂಜಾರಿ ಸಾತಪೂರ, ಯಲ್ಲಾಲಿಂಗ ಮಹಾರಾಜ ಶಿರಗೂರ, ಹೂವಣ್ಣ ಪೂಜಾರಿ ಹಂಜಗಿ, ಕೇದಾರಲಿಂಗ ಪೂಜಾರಿ ತೆಗ್ಗಿಹಳ್ಳಿ. ರಾಮಮಹಾರಾಜರು ತೆನ್ನಿಹಳ್ಳಿ ಇದ್ದರು.

ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button