ಕಾಂಗ್ರೆಸ್ ನಿಂದ ಶ್ರೀನಿವಾಸ್ ಗೆದ್ದರೆ ನನಗೆ ರಾಜಕೀಯ ಶಕ್ತಿ ಬರುತ್ತದೆ-ಸಿದ್ದರಾಮಯ್ಯ.
ತರೀಕೆರೆ ಮೇ.6
ನಾನು ಮುಖ್ಯಮಂತ್ರಿ ಆಗಿ ಮೇ 6 ರಂದು ಬಸವ ಜಯಂತಿ ದಿನ ಪ್ರಮಾಣವಚನ ಸ್ವೀಕರಿಸಿದ್ದೆ, ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವಂತೆ ಆದೇಶ ಮಾಡಿದ್ದೆ, ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿಎಚ್ ಶ್ರೀನಿವಾಸ್ ಇವರ ಚುನಾವಣೆ ಪ್ರಚಾರ ಮತ್ತು ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿ ರಹಿತ,ವರ್ಗ ರಹಿತ,ಧರ್ಮ ರಹಿತ,ಸಮಾಜ ನಿರ್ಮಾಣ ಮಾಡಿ ಎಲ್ಲರೂ ಮನುಷ್ಯರಂತೆ ಬಾಳಬೇಕು ಎಂಬುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಆದರೆ ಬಿಜೆಪಿಯವರು ಜಾತಿ ಜಾತಿ ನಡುವೆ ಕಂದಕ, ಧರ್ಮದ ಹೆಸರಿನಲ್ಲಿ ಕೋಮು ಸಂಘರ್ಷಣೆ, ಹಿಂದುತ್ವದ ಹೆಸರಿನಲ್ಲಿ ಡೋಂಗಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ಈತ ಸಿಟಿ ರವಿ ಅಲ್ಲ ಲೂಟಿ ರವಿ, ನನ್ನನ್ನು ಸಿದ್ಧರಾಮುಲ್ಲ ಖಾನ್ ಎಂದು ಅವಹೇಳನ ಮಾಡಿರುತ್ತಾನೆ. ನಾವು ಎಲ್ಲಾ ಜಾತಿಯ ಧರ್ಮದವರನ್ನು ಗೌರವಿಸುತ್ತೇವೆ ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಅನೇಕ ಜಾತಿ,ಭಾಷೆ, ಸಂಸ್ಕೃತಿ ಭಾರತದಲ್ಲಿದೆ. ವಿಭಿನ್ನತೆಯಲ್ಲಿ ಏಕತೆ ಕಾಂಗ್ರೆಸ್ ಪಕ್ಷದ್ದು, ಸಿಟಿ ರವಿಗೆ ಇದರ ಇತಿಹಾಸ ಗೊತ್ತಿಲ್ಲ, ಆದ್ದರಿಂದ ಇತಿಹಾಸ ನಿರ್ಮಿಸಲಿಕ್ಕೂ ಆಗಲ್ಲ, ಹಿಂದೆ ನನ್ನ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಬಡವರಿಗೆ ಕಟ್ಟಿಸಿ ಕೊಟ್ಟಿದ್ದೇವೆ. ಕಳೆದ 5 ವರ್ಷಗಳಿಂದ ಬಿಜೆಪಿ ಸರ್ಕಾರ ದಿಂದ ಒಂದು ಮನೆಯೂ ಕೊಟ್ಟಿಲ್ಲ. ಆದರೆ ಕರ್ನಾಟಕದಲ್ಲಿ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಕಂಟ್ರಾಕ್ಟರ್ ಅಸೋಸಿಯನ್ ರವರು, ಬಿಜೆಪಿ ಸರ್ಕಾರದ ಪ್ರಧಾನಮಂತ್ರಿಗೆ ಒಂದುವರೆ ವರ್ಷದ ಹಿಂದೆ ಪತ್ರ ಬರೆದು ತಿಳಿಸಿದ್ದರೂ ಇದುವರೆಗೂ ಏನು ಕ್ರಮ ಆಗಿಲ್ಲ. ನುಡಿದಂತೆ ನಡೆದಿಲ್ಲ ಬಿಜೆಪಿಯವರು ಎಂದು ವ್ಯಂಗ್ಯವಾಡಿದರು. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕೆಂದು ನಮ್ಮ ಸರ್ಕಾರದಲ್ಲಿ ಒಬ್ಬರಿಗೆ ಮಾಸಿಕ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆವು, ಆದರೆ ಬಿಜೆಪಿ ಸರ್ಕಾರದವರು ಇದನ್ನು ನಾಲ್ಕು ಕೆಜಿಗೆ ಇಳಿಸಿ ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಮುಂದೆ ನಮ್ಮ ಸರ್ಕಾರ ಬಂದಲ್ಲಿ ಗೃಹಲಕ್ಷ್ಮಿ ಯೋಜನೆ ಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂಗಳು ಹಾಗೂ ಉಚಿತ ಬಸ್ ಪ್ರಯಾಣ, ಯುವ ನಿಧಿ ಯೋಜನೆ ಅಡಿ ಪದವೀಧರರಿಗೆ ಮಾಸಿಕ 3000 ರೂ ಗಳು, ಡಿಪ್ಲೋಮಾ ಪದವೀಧರರಿಗೆ ರೂ 1,500, ಎರಡು ವರ್ಷಗಳ ಕಾಲದವರೆಗೆ ನೀಡುತ್ತೇವೆ. ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ.
ಕರ್ನಾಟಕದಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ಆಗಬಾರದು, 2013ರಲ್ಲಿ ಬಹುಮತದೊಂದಿಗೆ ಐದು ವರ್ಷ ಸಂಪೂರ್ಣ ಆಡಳಿತ ನಡೆಸಿದ್ದೇವೆ. ಕೊಟ್ಟ ಮಾತನ್ನು ನೂರಕ್ಕೆ ನೂರು ಪೂರೈಸಿದ್ದೇವೆ. ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತರೀಕೆರೆ ಕ್ಷೇತ್ರಕ್ಕೆ 2019 ರಿಂದ ಇಲ್ಲಿಯವರೆಗೂ ಒಂದು ರೂಪಾಯಿಗಳನ್ನು ಕೊಟ್ಟಿಲ್ಲ, ಹಾಗೆಯೇ ನನ್ನ ಅವಧಿಯಲ್ಲಿ ಅಜ್ಜಂಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದೇನೆ. ಈ ಬಾರಿ ಎಲ್ಲರ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಬಂದರೆ ದಲಿತರು, ಮುಸಲ್ಮಾನರು, ವೀರಶೈವರು, ಒಕ್ಕಲಿಗರು ಹಿಂದುಳಿದವರುಗೂ ಮೀಸಲಾತಿ ಕೊಡಲಾಗುವುದು. ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಬದ್ಧವಾಗಿದೆ. ತರೀಕೆರೆ ವಿಧಾನಸಭಾ ಅಭ್ಯರ್ಥಿ ಶ್ರೀನಿವಾಸ್ ಜನಪರ ಕಾಳಜಿ ಇರುವ ವ್ಯಕ್ತಿ. ಶ್ರೀನಿವಾಸ್ ಗೆದ್ದರೆ ನನಗೆ ರಾಜಕೀಯ ಶಕ್ತಿ ಬರುತ್ತದೆ. ಪಕ್ಷೇತರ ಅಭ್ಯರ್ಥಿ ಗೆದ್ದರೆ ನನಗೆ ಶಕ್ತಿ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ತರೀಕೆರೆ ಕ್ಷೇತ್ರವನ್ನು ಸರ್ವಾಂಗಿನ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದರು. ವೇದಿಕೆಯಲ್ಲಿ ಮಾಜಿ ಕೇಂದ್ರ ಸಚಿವೆ ಡಿಕೆ ತಾರಾದೇವಿ, ಕೆಪಿಸಿಸಿ ಸದಸ್ಯ ಟಿವಿ ಶಿವಶಂಕರಪ್ಪ, ಜಿಲ್ಲಾ ಅಧ್ಯಕ್ಷ ಡಾ.ಅಂಶುಮಂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಯು ಫಾರೂಕ್, ಪುರಸಭಾ ಅಧ್ಯಕ್ಷೇ ಕಮಲ ರಾಜೇಂದ್ರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ವಿಶ್ವನಾಥ್,ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತಿ ಗೌಡ ಕಾಂಗ್ರೆಸ್ ಮುಖಂಡರಾದ ಸಮಿಉಲ್ಲಾ ಷರೀಫ್, ಬಿ ಆರ್ ರವಿ, ಗೆಜ್ಜೆಗೊಂಡನಹಳ್ಳಿ ತಿಪ್ಪೇಶ್, ಲಕ್ಕವಳ್ಳಿ ಹೇಮಣ್ಣ, ಜಾತ್ಯತೀತ ಜನತಾದಳ ತಾಲೂಕು ಅಧ್ಯಕ್ಷ ಎಂ ನರೇಂದ್ರ ಮಾತನಾಡಿದರು. ವೇದಿಕೆಯಲ್ಲಿ ಲೋಕೇಶ್ ತಾಳಿಕಟ್ಟೆ, ಅಮ್ಜದ್, ಅನ್ಬು, ಗೊಲ್ಲರಹಳ್ಳಿ ರಂಗಪ್ಪ, ರವಿ ಶಾನ್ಬೋಗ್, ಎ ಆರ್ ರಾಜಶೇಖರ್, ಇರ್ಫಾನ್ ಅಹಮದ್ ಬೇಗ್, ಭಾಗ್ಯಲಕ್ಷ್ಮಿ, ರಾಮಚಂದ್ರಪ್ಪ, ಎಚ್ ಎನ್ ಮಂಜುನಾಥ ಲಾಡ್, ಲಕ್ಷ್ಮೀನಾರಾಯಣ, ತಿಪ್ಪೆ ರುದ್ರಪ್ಪ, ಧರ್ಮರಾಜ್, ಕೃಷ್ಣ, ಪರಮೇಶ್, ಹೇಮಲತಾ, ಪರ್ವೀನ್ ತಾಜ್, ಸೀತಾರಾಮ್, ಟಿಜಿ ಮಂಜುನಾಥ್, ವೀರಮಣಿ, ಪಿ ಜಿ ಲೋಕೇಶ್, ರಂಗನಾಥ್, ಗೌರೀಶ, ನಟರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಪರಶುರಾಮ್, ಜಯ ಕರ್ನಾಟಕ ಸಂಘಟನೆಯ ಜಗದೀಶ್, ಮಹಿಳಾ ಪ್ರಧಾನ ಕಾರ್ಯದರ್ಶಿ ಪುಷ್ಪಲತಾ, ಉಪಸ್ಥಿತರಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀನಿವಾಸ್ ಸ್ವಾಗತಿಸಿ ಲಕ್ಕವಳ್ಳಿ ಹೋಬಳಿ ಅಧ್ಯಕ್ಷರಾದ ಮಂಜುನಾಥ ಲಾಡು ಒಂದಿಸಿದರು. ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ