ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದಂತ ಡಾಕ್ಟರ್ ಶ್ರೀನಿವಾಸ್ ಎನ್. ಟಿ ರವರು ಅತಿಹೆಚ್ಚಿನ 25000 ಕ್ಕೂ ಹೆಚ್ಚು ಬಹುಮತದಿಂದ ವಿಜಯ ಸಾಧಿಸಲಿದ್ದಾರೆ ಎಲ್.ಎಸ್. ಬಶೀರ್ ಅಹಮದ್ ವಕೀಲರ ಅಭಿಮತ
ಕೂಡ್ಲಿಗಿ ಮೇ.12
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಎಲ್ ಎಸ್ ಬಶೀರ್ ಅಹ್ಮದ್ ಅವರ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ 2023ನೇ ಚುನಾವಣೆ ನಡೆದಿರುವ ಫಲಿತಾಂಶದ ಪೂರ್ವ ಪತ್ರಿಕಾಗೋಷ್ಠಿಯನ್ನು ಎಲ್.ಎಸ್, ಬಶೀರ್ ಅಹ್ಮದ್ ವಕೀಲರು ಇವರ ನೇತೃತ್ವದಲ್ಲಿ ಕರೆದಿದ್ದು ,ಈ ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು ಜಯಭೇರಿ ಆಗಲಿದೆ ಎಂದು ಎಲ್ ಎಸ್ ಬಶೀರ್ ಅಹ್ಮದ್ ಮಾಜಿ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ವಕೀಲರು ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದಂತಹ ಡಾಕ್ಟರ್ ಶ್ರೀನಿವಾಸ್ ಎನ್ .ಟಿ ಇವರು ಈ ಬಾರಿ ಕೂಡ್ಲಿಗಿ ಕ್ಷೇತ್ರದಲ್ಲಿ ಸರಿ ಸುಮಾರು 25,000 ಅಂತರ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯನ್ನು ತಮ್ಮ ನಿವಾಸವದಲ್ಲಿ ಕರೆದಿದ್ದು ಕೂಡ್ಲಿಗಿ ತಾಲೂಕಿನ ಕೆಲವರು ಮುಖಂಡರುಗಳು ಈ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡವರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಸಿ ಸಹ ಪ್ರಾಮಾಣಿಕವಾಗಿ ಸ್ಥಳೀಯ ಅಭ್ಯರ್ಥಿಯಾದ ಡಾಕ್ಟರ್ ಶ್ರೀನಿವಾಸ್ ಎನ್ ಟಿ ಅವರನ್ನು ಕೂಡ್ಲಿಗಿ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಇಲ್ಲದೆ ಪರದಾಡುವಂತ ಪರಿಸ್ಥಿತಿಯಲ್ಲಿ ತಾಲೂಕು ಇತ್ತು. ಆದರೆ ಈ ಬಾರಿ ದಿವಂಗತ ಮಾಜಿ ಶಾಸಕರ ಎನ್. ಟಿ. ಬೊಮ್ಮಣ್ಣನವರ ಸುಪುತ್ರನಾದ ಎನ್. ಟಿ. ಶ್ರೀನಿವಾಸ್ ಡಾಕ್ಟರ್ ಇವರನ್ನು ಸ್ಥಳೀಯ ಅಭ್ಯರ್ಥಿಯ ಅಲೆಯೊಂದಿಗೆ ಕಾಂಗ್ರೆಸ್ ಪಕ್ಷ ಬಹುಮತಗಳಿಂದ ಗೆಲ್ಲುವುದು ಖಚಿತ ಎಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಗುಡೆಕೋಟೆ ಬಿ. ಹನುಮಂತಪ್ಪ ಕೂಡ್ಲಿಗಿ, ಎಸ್.ಕೆ ಯರ್ರಿಸ್ವಾಮಿ ಓಬಳಾಪುರ, ಕರಿಯಣ್ಣ ,ಮಾರೇಶ್ ಮಡಿವಾಳ್, ಬೆಣ್ಣೆ ಕೊಟ್ರೇಶ್, ಆರ್ ಈಶ್ವರಪ್ಪ ಹರವದಿ, ಇಸ್ಮಾಯಿಲ್, ಮುನ್ನಾ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ,ಗುಡೆಕೋಟೆ ಹೊನ್ನೂರ್ ವಲ್ಲಿ, ಗೌರಮ್ಮ ಸೋಮಶೇಖರ್ ,ಡಾ. ಶರೀಫ್, ಹುಸೇನ್ ,ಅಭಿವೃದ್ಧಿನ್, ರಿಜ್ವಾನ್ ಸಾಬ್ ,ಮೌಲಿಸಾಬ್, ಸೈಕಲ್ ಚಂದ ಭಾಷಾ ,ಇನ್ನು ಮುಂತಾದರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು : ರಾಘವೇಂದ್ರ ಸಾಲುಮನಿ ಕೂಡ್ಲಿಗಿ