ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನದ ಕಾರ್ಯಕ್ರಮದಲ್ಲಿ ಡಾll ರಾಜೇಶ ಕೋಳೆಕರ ಮಾತನಾಡಿದರು.
ಇಂಡಿ ಮೇ.13
ಇಂಡಿ ಕೋವಿಡ್ ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ ದಾದಿಯರ ಸೇವೆ ಅವಿಸ್ಮರಣೀಯವಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಾ ಆರೋಗ್ಯ ಕೇಂದ್ರ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ದಾದಿಯರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ|| ಪ್ರೀತಿ ಕೋಳೆಕರ ಮಾತನಾಡಿ ದಾದಿಯರು ಮುಂದಿನ ಪೀಳಿಗೆ ನೂರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವದು ಹೆಮ್ಮೆಯ ವಿಚಾರ ಎಂದರು.
ಡಾ|| ಸಂತೋಷ ಪವಾರ ಮಾತನಾಡಿ ಇಂದು ವಿಶ್ವ ದಾದಿಯರ ದಿನ ಎಂದು ಕರೆಯಲಾಗುತ್ತಿದೆ. ಹಿಂದಿನವರ ಸೇವೆ ಗುರುತಿಸಿ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಇವರ ಸೇವೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೀವ ಉಳಿಸುವ ಕೆಲಸದಲ್ಲಿ ತೊಡಗಿದ್ದು ಸಾಮಾನ್ಯ ವಿಷಯವಲ್ಲ ಎಂದರು.
ಶುಶ್ರೂಷಕ ಅಧಿಕಾರಿಗಳಾದ ವಿಜಯಲಕ್ಷ್ಮೀ ಬಿರಾದಾರ, ರೇಣುಕಾ ಬಡಿಗೇರ, , ಗಿರಿಜಾ ಬಜಂತ್ರಿ, ತಹಿಸೀನಾ ಮೋಮಿನ್, ಕಾಮಣ್ಣ ದಶವಂತ, ರವಿ ಹಾದಿಮನಿ, ವಿಜಯಲಕ್ಷ್ಮೀ ಹಾದಿಮನಿ, ಮೇಘಾ ಪೋದ್ದಾರ, ವಿಜಯಕುಮಾರ ಪೋಳ,ವ ಮಂಜುನಾಥ ಮಠ, ಡಾ|| ಜಗದೀಶ ಬಿರಾದಾರ, ಡಾ|| ವಿಪುಲ್ ಕೋಳೆಕರ, ಡಾ|| ಅಮೀತ ಕೋಳೆಕರ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು : ಬೀ.ಎಸ್.ಹೊಸೂರ್. ವಿಜಯಪುರ