ಯಾರು ದೊಡ್ಡವರು…

ಮಾನವೀಯತೆಯನು ಬಿಟ್ಟವರಾ ಅಥವಾ ಮನುಷ್ಯತ್ವದಿಂದ ಬದುಕುವರು ದೊಡ್ಡವರಾ….
ಅಧರ್ಮದ ಹಾದಿಯಲಿ ನಡೆಯುವವರಾ ಅಥವಾ ಧರ್ಮ ಮಾರ್ಗದಿ ಸನ್ಮಾರ್ಗ ಕಂಡವರು ದೊಡ್ಡವರಾ….
ಮೋಸ ವಂಚನೆ ಮಾಡುವವರಾ ಅಥವಾ ನಿಷ್ಠೆ ಸ್ವಾಭಿಮಾನದಿ ಬದುಕುವರು ದೊಡ್ಡವರಾ….
ನಾನು ನನ್ನದೆನ್ನುವ ಮೂರ್ಖರಾ ಅಥವಾ ನಾವು ನಮ್ಮವರು ಎನ್ನುವ ಶ್ರೇಷ್ಠರು ದೊಡ್ಡವರಾ ….
ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುವವರಾ ಅಥವಾ ದಿನನಿತ್ಯ ಹೆತ್ತವರನ್ನು ಪೂಜಿಸುವರು ದೊಡ್ಡವರಾ….
ಕಲಿಸಿದ ಗುರುವಿಗೆ ಗುರ್ ಎನ್ನುವವರಾ ಅಥವಾ ಗುರುವಿಗೆ ಸದಾ ವಿನಮ್ರರಾಗಿರುವವರು ದೊಡ್ಡವರಾ….
ಭೂಮಿ ತಾಯಿಯ ಋಣ ತೀರಿಸುವವರಾ ಅಥವಾ ಭೂಮಿಯ ಆಗಿದು ಬಗೆದು ತಿನ್ನುವವರು ದೊಡ್ಡವರಾ….
ನಂಬಿಸಿ ಪ್ರೀತಿಸಿ ಮೋಸ ಮಾಡುವವರಾ ಅಥವಾ ಪ್ರೀತಿಯನ್ನು ಪೂಜಿಸುವವರು ದೊಡ್ಡವರಾ….
ಸ್ನೇಹದಲ್ಲಿ ಬೆನ್ನಿಗೆ ಚೂರಿ ಹಾಕುವವರಾ ಅಥವಾ ಸ್ನೇಹಕ್ಕಾಗಿ ಪ್ರಾಣ ನೀಡುವವರು ದೊಡ್ಡವರಾ….
ಮುತ್ತು.ಯ.ವಡ್ದರ
(ಶಿಕ್ಷಕರು) ಬಾಗಲಕೋಟೆ