ವಾಯು ವಿಹಾರಕ್ಕೆ ಹೋಗಿದ್ದ ರವಿಚಂದ್ರ, ಅನನ್ಯ, ಶಾಮವೇಣಿ, ಆಕಸ್ಮಿಕ ಸಾವು.
ತರೀಕೆರೆ ಮೇ.22

ತರೀಕೆರೆ ವಾಸಿ ಬಿಲ್ಡಿಂಗ್ ಗುತ್ತಿಗೆದಾರ ಗಾರೆ ಸ್ವಾಮಿ ರವರ ತಂಗಿ ನೇತ್ರಾವತಿ ರವರ ಪತಿ, ರವಿಚಂದ್ರ 35 ವರ್ಷ, ಅಕ್ಕನ ಮಕ್ಕಳಾದ ಶಿವಮೊಗ್ಗ ವಾಸಿ ಗಾಯಿತ್ರಿ ಶ್ರೀನಿವಾಸ್ ರವರ ಮಗಳು ಅನನ್ಯ 18 ವರ್ಷ, ಹಾಗೂ ನಂಜನಗೂಡು ವಾಸಿಯಾದ ಆಶಾ ರಾಣಿ ಶ್ರೀನಿವಾಸ್ ರವರ ಮಗಳು ಶಾಮವೇಣಿ 16 ವರ್ಷ.
ಈ ಮೂವರು ಲಕ್ಕವಳ್ಳಿ ಡ್ಯಾಮ್ ನ ಬಲದಂಡೆ ನಾಲೆಯ ಬಳಿ ಭಾನುವಾರ ಸಂಜೆ 6 ಗಂಟೆಗೆ ವಾಯುವಿಹಾರಕ್ಕೆ ಹೋಗಿದ್ದು ಆಕಸ್ಮಿಕ ಕಾಲು ಜಾರಿ ನಾಲೆಗೆ ಬಿದ್ದ ಅನನ್ಯ ಮತ್ತು ಶಾಮವೇಣಿಯನ್ನು ರಕ್ಷಿಸಲು ಹೋದ ರವಿಚಂದ್ರ ಸೇರಿ ಮೂರು ಜನರು ಭದ್ರಾ ಬಲದಂಡೆ ಕಾಲುವೆಯಲ್ಲಿ ಸಾವನ್ನಪ್ಪಿರುವುದಾಗಿ ಮೃತರ ಸಂಬಂಧಿ ಗಾರೆ ಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು . ಲಕ್ಕವಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಪ್ರಕರಣ ದಾಖಲಿಸಿದ್ದು, ಯುಡಿ ಆರ್ ನಂಬರ್ 10 / 2023 ಆಗಿದ್ದು, ಅನನ್ಯ ರವರ ಮೃತ ದೇಹ ತರೀಕೆರೆ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿದ್ದು ರವಿಚಂದ್ರ ಮತ್ತು ಶಾಮವೇಣಿ ರವರ ಮೃತದೇಹಗಳಿಗಾಗಿ ಅಗ್ನಿಶಾಮಕದಳ ಶೋಧ ನಡೆಸುತ್ತಿದೆ.
ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಉಮಾ ಶಂಕರ್ ರವರು ಸ್ಥಳ ಪರಿಶೀಲನೆ ನಡೆಸಿ, ವಿಚಾರಣೆ ಮಾಡಿ ಮೃತರ ತಾಯಿ ರೇಣುಕಮ್ಮ ಗಾಯತ್ರಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು. ಮೃತ ರವಿಚಂದ್ರ ರವರ ಪತ್ನಿ ನೇತ್ರಾವತಿ ಮಕ್ಕಳಾದ ಧನು,ಅಮ್ಮು, ಎಂಬುವರನ್ನು ಅಗಲಿದ್ದಾರೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ