ದಲಿತರು ರಾಜಕೀಯ ಅಧಿಕಾರ ಹಿಡಿಯಬೇಕೆ ಎನ್ನುವುದು ಅಂಬೇಡ್ಕರ್ ರವರ ಕನಸು.
ಅರೇಹಳ್ಳಿ ಮೇ.28

ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ರವರು ದಲಿತರು ರಾಜಕೀಯ ಅಧಿಕಾರ ಹಿಡಿಯಬೇಕೆಂದು ಕನಸು ಕಂಡಿದ್ದರು. ಎಂದು ಕ ದ ಸಂ ಸ ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ರೀ ನಂ, 386 / 2020 -21 ಸಂಘಟನೆಯು ಏರ್ಪಡಿಸಿದ್ದ ಹೊಳಲ್ಕೆರೆ ತಾಲೂಕು ಅರೇಹಳ್ಳಿ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಹೇಳಿದರು. ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ರವರನ್ನು ಆಹ್ವಾನಿಸದೆ ಅಪಮಾನ ಮಾಡಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ಸ್ಥಾಪಿಸದೇ ಇರುವುದು ವಿಷಾದನೀಯ, ಜಾತಿ ಪದ್ಧತಿ, ಗೋಡ್ಡು ಸಂಪ್ರದಾಯಗಳನ್ನು ಪುರೋಹಿತ ಶಾಹಿ ವ್ಯವಸ್ತೆಯನ್ನು ಆಚರಣೆ ಮಾಡುತ್ತಿರುವುದು ಖಂಡನೀಯವಾದದ್ದು. ವ್ಯವಸ್ಥೆ ಬದಲಾಗಬೇಕೆಂದರೆ ನಿಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಪ್ರಜ್ಞಾವಂತರಾಗಿಸಿ ಉನ್ನತ ಸ್ಥಾನಮಾನ ಪಡೆಯಬೇಕು. ಗ್ರಾಮ ಪಂಚಾಯಿತಿ,ತಾಲೂಕು ಪಂಚಾಯಿತಿ,ಜಿಲ್ಲಾ ಪಂಚಾಯಿತಿ, ಅಧಿಕಾರ ಹಿಡಿಯಬೇಕು, ಶಾಸಕರಾಗಿ ಮಂತ್ರಿಗಳಾಗಿ ಅಧಿಕಾರ ಹಿಡಿಯಬೇಕು ಎಂದು ಕರೆ ಕೊಟ್ಟರು. ಗ್ರಾಮ ಶಾಖೆಯ ನಾಮಫಲಕ ಅನಾವರಣ ಮಾಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ರಾಜ್ಯ ಸಂಚಾಲಕರಾದ ಡಿ ಆರ್ ಪಾಂಡುರಂಗ ಸ್ವಾಮಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರನ್ನು ನೋಡಲು ಪುಸ್ತಕಗಳನ್ನು ಓದುವ ಮೂಲಕ ಸಂವಿಧಾನವನ್ನು ಓದುವ ಮೂಲಕ ನೋಡಬೇಕು ಹುಡುಕಬೇಕು. ಏನಾದರೂ ಸಾಧನೆ ಮಾಡಬೇಕೆಂದರೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪನವರ ಹೋರಾಟದ ಸಂಘಟನೆಯ ಕುರಿತು ಅಧ್ಯಯನ ಮಾಡಿದರೆ ತಿಳಿಯುತ್ತದೆ. ಅಸ್ಪೃಶ್ಯರು ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸಮಾನತೆಗಾಗಿ ತಮ್ಮ ಕೊನೆಯ ಉಸಿರು ಇರುವ ತನಕ ಹೋರಾಟ ಮಾಡಿದ್ದಾರೆ ಎಂದು ಹೇಳಿದರು. ಹೊಳಲ್ಕೆರೆ ತಾಲೂಕು ಸಂಘಟನಾ ಸಂಚಾಲಕರಾದ ಕಾಲ್ಕೆರೆ ಪ್ರಕಾಶ್ ಮಾತನಾಡಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಿ ಶಿಕ್ಷಣದಿಂದ ಜಾತಿ ಪದ್ಧತಿ, ಶೋಷಣೆ,ಅಸಮಾನತೆಯನ್ನು ತೊಲಗಿಸಲು ಸಾಧ್ಯ ಎಂದು ಹೇಳಿದರು. ಸಂವಿಧಾನದ ಆಧಾರದಲ್ಲಿ ಈ ಪ್ರಜಾಪ್ರಭುತ್ವ ವ್ಯವಸ್ಥೆ ನಡೆಯುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್ ಪ್ರಸನ್ನ ಕುಮಾರ್ ದಾಸಿಕಟ್ಟೆ ರವರು ಮಾತನಾಡಿ ದಲಿತರಾದ ನಾವು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರಿಗೆ ಉತ್ತಮವಾದ ಭವಿಷ್ಯ ರೂಪಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ನುಲೇನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಪ್ಪ, DSS ತಾಲೂಕು ಸಂಘಟನಾ ಸಂಚಾಲಕ ರಾದ ಎನ್ ಜಿ ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ್, ರಂಗಪ್ಪ, ತಾಲೂಕು ಸಂಘಟನಾ ಸಂಚಾಲಕರಾದ ಆನಂದ, ಶಿವಕುಮಾರ್, ಸಂತೋಷ್, ದ್ವಾಟೇ ಶ್, ವಕೀಲರಾದ ನವೀನ್ ಕುಮಾರ್ ಪವಾರ್, ಉಪಸ್ಥಿತರಿದ್ದು ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜು ದಾಸೀಕಟ್ಟೆ ಸ್ವಾಗತಿಸಿ, ಶಿವಕುಮಾರ್ ನಿರೂಪಿಸಿ ವಂದಿಸಿದರು. ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ