ನನ್ನಾಕಿ…

ಬಾಳ ಪಯಣದಲಿ ನನ್ನೊಂದಿಗೆ ಕೈ ಹಿಡಿದಾಕಿ
ಹಸೆಮನೆ ಏರಿ ಸಪ್ತಪದಿ ತುಳಿದಾಕಿ
ಮೌನದಿ ಕುಳಿತರೆ ಮಾತನಾಡಿಸಿ ನಗಾಕಿ
ಸುಖ ದುಃಖಗಳಲ್ಲಿ ಸಮನಾಗಿ ಬೆರತಾಕಿ..ಊಟಕ್ಕ ಕುಳಿತರ ತುತ್ತು ಮಾಡಿ ಉಣಿಸಾಕಿ
ಪ್ರತಿಯೊಬ್ಬರ ಜೊತೆ ಪ್ರೀತಿ ಸ್ನೇಹದಿಂದ ಬದುಕಿದಾಕಿ
ಉಸಿರಿರೊವರೆಗೂ ಜೊತೆಗೆ ಇರುತೀನಿ ಅಂದಾಕಿ
ಬೇಗ ಬರಲಿಲ್ಲ ಅಂದ್ರೆ ಫೋನ ಮಾಡಿ ಕರಿಯಾಕಿ..ಕಷ್ಟದಾಗ ಹೆಗಲಿಗೆ ಹೆಗಲು ಕೊಡಾಕಿ
ಸುಖದಾಗ ಹಮ್ಮಿಲೇ ಮೆರಿಲಿಲ್ಲ ನನ್ನಾಕಿ
ಎಲ್ಲೇ ಇರು ಹೇಗೆ ಇರು ನೀನು ಸುಖವಾಗಿ ಇರು ಅನ್ನುವಾಕಿ
ಯಾರು ಇಲ್ದಾಗ ಬಂದು ಪ್ರೀತಿಲೇ ಮುತ್ತು ಕೊಡುವಾಕಿ..ಗುರು ಹಿರಿಯರಿಗೆ ತಲೆಬಾಗಿ ನಡೆಯುವಾಕಿ
ಕರುಣೆ ಮಮತೆ ತುಂಬಿದ ಹೃದಯವಂತಿ ಆಕಿ
ಯಾರೇನೇ ಅಂದರು ನನಗಾಗಿ ಸುಮ್ಮನಿರಾಕಿ
ಪತಿಯೇ ಪರಮದೇವ ಎಂದು ಬದುಕಿ ಬಾಳಿದಾಕಿ..ಶಾಲೆಗೆ ಹೋಗಲೀಕೂ ಬಹಳ ಶಾಣೆಯಾಕಿ
ಬೆಳಗಿನಂದ ರಾತ್ರಿವರೆಗೂ ಕೆಲಸ ಮಾಡಿ ಸುಮ್ಮನಿರಾಕಿ
ನೀವು ಇಲ್ಲದೆ ನನ್ನ ಬದುಕೇ ಶೂನ್ಯ ಅನ್ನುವಾಕಿ
ನೀವು ಪ್ರೀತಿಸದಿದ್ದರೂ ನಾನು ಪೂಜಿಸುವೆ ಅನ್ನುವ ಸತಿ ಆಕಿ..
ರಚನೆ:ಮುತ್ತು.ಯ.ವಡ್ಡರ
( ಶಿಕ್ಷಕರು)ಬಾಗಲಕೋಟ