ಡಾ, ಬಿ.ಆರ್ ಅಂಬೇಡ್ಕರ್ ವಿಶ್ವದಲ್ಲಿಯೇ ಅಗ್ರ ಗಣ್ಯರು – ಡಾ, ಕೆ.ಜೆ ಕಾಂತರಾಜ್.
ತರೀಕೆರೆ ಡಿ. 06

ಭಾರತ ಸಂವಿಧಾನ ಜಾತ್ಯತೀತ ಪ್ರಜಾ ಸತ್ತಾತ್ಮಕವಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ, ಕೆ.ಜೆ ಕಾಂತರಾಜ್ ಹೇಳಿದರು. ಅವರು ಇಂದು ಭಾರತ ರತ್ನ ಡಾ, ಬಿ.ಆರ್ ಅಂಬೇಡ್ಕರ್ ಅವರ ಪರಿ ನಿಬ್ಬಾಣದ ದಿನದ ಅಂಗವಾಗಿ ಪಟ್ಟಣದ ಆಡಳಿತ ಸೌಧ ಬಳಿ ಇರುವ ಡಾ, ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಹೇಳಿದರು. ದೇಶಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು ವಿಶ್ವದಲ್ಲಿಯೇ ಅತಿ ಶ್ರೇಷ್ಠ ಸಂವಿಧಾನ ನಮ್ಮದು ಪ್ರತಿಯೊಬ್ಬರು ನೆಮ್ಮದಿ ಭಾತೃತ್ವದಿಂದ ಬಾಳ್ವೆಯೊಂದಿಗೆ ಬಾಳೋಣ ಅವರ ಆದರ್ಶಗಳನ್ನು ಪಾಲಿಸೋಣ, ಸ್ಮರಿಸೋಣ ಅವರು ವಿಶ್ವದಲ್ಲಿಯೇ ಅಗ್ರ ಗಣ್ಯರು, ಅಜರಾಮರ ರಾಗಿದ್ದಾರೆ ಎಂದು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ರವರು ಮಾತನಾಡಿ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸಮಾನತೆಯನ್ನು ಕೊಟ್ಟಿದೆ. ಪ್ರಪಂಚದಲ್ಲಿ 180 ರಾಷ್ಟ್ರಗಳಿಗಿಂತಲೂ ಅತಿ ಹೆಚ್ಚು ರಾಷ್ಟ್ರಗಳಲ್ಲಿ ಅಂಬೇಡ್ಕರ್ ಅವರ ಪುತ್ತಳಿಗಳಿವೆ ಮತ್ತು ಭಾವ ಚಿತ್ರಗಳಿವೆ ಹಾಗೂ ಅಧ್ಯಯನ ನಡೆಯುತ್ತಿದೆ. ಎಲ್ಲಾ ದೇಶಗಳಲ್ಲಿಯೂ ಸಹ ಅವರ ಭಾವ ಚಿತ್ರಗಳು ಮತ್ತು ಪುತ್ತಳಿಗಳು ಇವೆ ಅವರು ಎಲ್ಲಾ ವಿಷಯಗಳ ಬಗ್ಗೆಯೂ ಅಧ್ಯಯನ ಮಾಡಿದ ವಿದ್ವಾಂಸಕರಾಗಿದ್ದಾರೆ ಎಂದು ಹೇಳಿದರು. ಅಜ್ಜಂಪುರ ತಾಲೂಕಿನ ನೂತನ ತಹಸಿಲ್ದರಾಗಿ ಆಗಮಿಸಿದ್ದ ವಿನಯ್ ಸಾಗರ್ ರವರು ಮಾತನಾಡಿ ಅಂಬೇಡ್ಕರ್ರವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಮನುಕುಲದ ಅಗ್ರ ಗಣ್ಯರಲ್ಲಿ ಅಂಬೇಡ್ಕರ್ ಅವರು ಇದ್ದಾರೆ ಎಂದು ಹೇಳಿದರು. ಪುರಸಭಾ ಮುಖ್ಯ ಅಧಿಕಾರಿ ಹೆಚ್.ಪ್ರಶಾಂತ್ ರವರು ಮಾತನಾಡಿ ಸಮಾಜಕ್ಕೋಸ್ಕರ ಬದುಕಿದವರಿಗೆ ಸಾವಿಲ್ಲ ಚಿರಂಜೀವಿ ಯಾಗಿರುತ್ತಾರೆ. ವಿಶ್ವದ ಮನುಕುಲದ ಉದ್ದಾರಕ್ಕಾಗಿ ಬದುಕಿದವರು ಇವರ ಆದರ್ಶಗಳು ಮುಂದಿನ ಬದುಕಿಗೆ ದಾರಿ ದೀಪವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು