ನ್ಯೂ ಲಿಟಲ್ ಫ್ಲವರ್ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಕಾಲೇಜಿನ – ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ.
ರೋಣ ಜ.25

ಪಟ್ಟಣದ ಶರಣರ ಶಿಕ್ಷಣ ಸಮಿತಿಯ ನ್ಯೂ ಲಿಟಲ್ ಫ್ಲವರ್ ಇಂಗ್ಲಿಷ್ ಮಾಧ್ಯಮ ಶಾಲೆ, ಪದವಿ ಪೂರ್ವ ಮಹಾ ವಿದ್ಯಾಲಯ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಕಾರ್ಯಕ್ರಮ ಉದ್ದೇಶೀಸಿ ಮಾತನಾಡಿದರು ವಿದ್ಯಾರ್ಥಿಗಳು ದೇಶದ ಅಮೂಲ್ಯ ಸಂಪತ್ತಾಗಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳ ಮಧ್ಯೆಯು ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಮಕ್ಕಳು ಮುಂದಿನ ದಿನಮಾನಗಳಲ್ಲಿ ಯಾವುದೇ ವೃತ್ತಿಯನ್ನು ಮೇಲು ಕೀಳು ಎಂದು ಭಾವಿಸದೆ ತಾವು ತೊಡಗಿದ ವೃತ್ತಿಯಲ್ಲಿ ಶ್ರೇಷ್ಠತೆ ಮೆರೆಯುವಂತಾಗ ಬೇಕು. ಪಾಲಕರು ಸಾಧ್ಯವಾದಷ್ಟು ಮಗುವಿನ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಶ್ರಮಿಸಬೇಕು. ಮಕ್ಕಳಿಗಾಗಿ ಅಸ್ತಿ ಮಾಡದೆ ಮಕ್ಕಳನ್ನೇ ಅಸ್ತಿಯನ್ನಾಗಿ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗುತ್ತಿದ್ದು ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್ ನಿಂದ ದೂರವಿರಿಸಿ ಎಸ್.ಬಿ ಲಕ್ಕೊಳ ಹೇಳಿದರು ಎಂದರು.ಶರಣರ ಶಿಕ್ಷಣ ಸಮಿತಿ ರೋಣದ ವತಿಯಿಂದ ಪ್ಯಾರಾ ಮೆಡಿಕಲ್ ಕಾಲೇಜನ್ನು ಪ್ರಾರಂಭಿಸಲಾಗಿದ್ದು ಇದು ನಮ್ಮ ಸಂಸ್ಥೆ ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಇದರ ಜೊತೆಗೆ ನ್ಯೂ ಲಿಟಲ್ ಫ್ಲವರ್ ಶಾಲೆಯಲ್ಲಿ ಗುಣಮಟ್ಟದ ನೀಟ್ ಕೋಚಿಂಗ್ ಕೂಡ ನೀಡಲಾಗುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆ ಶ್ರಮಿಸುತ್ತಿದೆ ಎಂದು ಹೇಳಿದರು.ಚಿಕ್ಕೇನಕೊಪ್ಪದ ಶಿವಶಾಂತವೀರ ಶರಣರು, ರೋಣ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ತೋಟಪ್ಪ ನವಲಗುಂದ, ರಾಜಣ್ಣ ಸುಂಕದ, ರಾಜೇಂದ್ರಗೌಡ ಗಿರಡ್ಡಿ, ಮುತ್ತಣ್ಣ ಸಂಗಳದ, ಸೋಮಶೇಖರ ಪಾಳೇಗಾರ, ಸಾವಿತ್ರಮ್ಮ ಹುಗ್ಗಿ, ಬಿ.ಎನ್ ಬಳಗಾನೂರ, ಎಸ್.ಪಿ ಬಳಿಗಾರ, ಪಿ.ವಿ ಚರಂತಿಮಠ, ಜೆ.ಬಿ ಕಲ್ಲನಗೌಡ್ರ ಸೇರಿದಂತೆ ಇತರರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ ಗದಗ