ಗ್ರಾಮೀಣ ಕೂಲಿ ಕಾರ್ಮಿಕರ ಹಣ ಪಾವತಿಸಲು ಕೇಂದ್ರ ಸರ್ಕಾರ ವಿಫಲ, ಪಿಡಿಓ ಮೂಲಕ ಪ್ರಧಾನಿಯವರಿಗೆ ಮನವಿ ….
ಮಾಲವಿ (ಮೇ.29) :
ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ,(ಗ್ರಾಕೋಸ್ )ವತಿಯಿಂದ ಇಂದು ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ಇವರಿಗೆ ಪಿಡಿಓ ಮೂಲಕ ಮನವಿ ಪತ್ರವನ್ನು ಕಳಿಸಲಾಯಿತು. ಕಾರಣ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಮರ್ಪಕ ಅನುಷ್ಠಾನಕ್ಕಾಗಿ ಹಕ್ಕೊತ್ತಾಯಗಳ ವಿಷಯವನ್ನು ಇಟ್ಟುಕೊಂಡು ಹೋರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸಾಕಷ್ಟು ಸಮಸ್ಯೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಆಗುತ್ತಿದ್ದು ಈ ಸಮಸ್ಯೆಗಳನ್ನು ಸರ್ಕಾರವು ಅರಿತುಕೊಂಡು ಶೀಘ್ರದಲ್ಲಿ ಸಂಬಂಧಪಟ್ಟಂತಹ ಸರ್ಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಯೋಜನೆ ಅಡಿಯಲ್ಲಿ ನಡೆಯುವಂತಹ ಕೂಲಿ ಕಾರ್ಮಿಕರ ಕೆಲಸದ ಹಣದಲ್ಲಿ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಸರಿಯಾದ ರೀತಿಯಲ್ಲಿ ಜನರಿಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದು ಸಮಸ್ಯೆಗಳನ್ನು ಸರ್ಕಾರವು ಬೇಗನೆ ಅರಿತುಕೊಂಡು ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗುವಂತೆ ಸರ್ಕಾರವು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗಳಲ್ಲಿ ತಿಂಗಳಾನುಗಟ್ಟಲೆ ಕೂಲಿ ಕೆಲಸ ಮಾಡಿದ್ದರು ಸಹ 1 ಅಥವಾ 2 ವಾರದ ಹಣ ಮಾತ್ರ ಅಕೌಂಟಿಗೆ ಜಮಾವಾಗುತ್ತಿದೆ, ಇದರಿಂದ ಬೆಸತ್ತ ಕೂಲಿ ಕಾರ್ಮಿಕರು ಇದನ್ನು ಖಂಡಿಸಿ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದಲೆ ಸರಿಯಾದ ರೀತಿಯಲ್ಲಿ ಹಣ ಜಮಾವಾಗುತ್ತಿಲ್ಲ ಎಂದು ಅಧಿಕಾರಿ ವರ್ಗದವರು ತಿಳಿಸಿರುತ್ತಾರೆ.
ಕಾರಣ ಕೇಳಿದರೆ ನರೇಗಾ ಬಜೆಟ್ ಅತಿ ಕಡಿಮೆ ಹಣ ಇಟ್ಟಿದ್ದು ಕೂಲಿ ಮಾಡಿದ ಹಣವನ್ನು ಕೇಳಲು ಗ್ರಾಮ ಪಂಚಾಯಿತಿ ಗೆ ಪ್ರತಿ ದಿನವೂ ಹಲೆದಾಟವಾಗಿದೆ ,2 ತಿಂಗಳು ಕೂಲಿ ಮಾಡಿದರೆ ಅಂತವರಿಗೆ ಒಂದ ವಾರದ ಹಣ ಹಾಗೂ ಎರಡು ವಾರದ ಹಣ ಮಾತ್ರ ಅಕೌಂಟಿಗೆ ಜಮಾವಾಗುತ್ತಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರು ತಿಳಿಸಿರುತ್ತಾರೆ. ಕಾರ್ಮಿಕರು ಇಂದು ಆಕ್ರೋಶ ಭರಿತರಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರಧಾನಿಯವರಿಗೆ ಮನವಿ ಪತ್ರದ ಮೂಲಕ ಬಿಜೆಪಿ ಸರ್ಕಾರವು ಕಾರ್ಮಿಕರ ನರೇಗಾ ಯೋಜನೆ ಅಡಿಯಲ್ಲಿ ಸಿಗುವಂತಹ ಕೂಲಿ ಕಾರ್ಮಿಕರ ಕೆಲಸದ ಹಣ ಕೂಲಿ ಕಾರ್ಮಿಕರ ಅಕೌಂಟ್ ಪಾಸ್ ಪುಸ್ತಕಕ್ಕೆ ಜಮಾ ಮಾಡದೆ ಕೇಂದ್ರ ಸರ್ಕಾರ ವಿಫಲವಾಗಿದೆ ,ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸರ್ಕಾರಕ್ಕೆ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದಂತಹ ಕೊಟ್ರಮ್ಮ ಇವರು ಕೇಂದ್ರ ಸರ್ಕಾರಕ್ಕೆ ಇನ್ನೂ 15 ದಿನದೊಳಗಾಗಿ ಕಾರ್ಮಿಕರ ಕೂಲಿ ಹಣವು ಅವರ ಖಾತೆಗಳಿಗೆ ಜಮಾವಾಗಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬಿದಿಗೆ ಇಳಿದು ನಮ್ಮ ರಾಜ್ಯ ಸಂಘಟನೆ ಗ್ರಾಕೂಸ್ ರಾಜ್ಯ ಮುಖಂಡರ ಜೊತೆ ಚರ್ಚೆ ನಡೆಸಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಾದ ಬಸವಲಿಂಗಮ್ಮ, ಹೆಚ್. ದುರ್ಗಮ್ಮ , ನೇಹಾ, ರೇಣುಕಮ್ಮ, ಜ್ಯೋತಿ ,ಗೌರಮ್ಮ, ಕಮಲಮ್ಮ, ಕನಕಮ್ಮ ,ಪವಿತ್ರ ,ಶೇಖರಪ್ಪ, ಅಂಜಿನಪ್ಪ ,ದುರ್ಗಪ್ಪ ನಾಗರಾಜ ,ಗಂಗಮ್ಮ ಹೀಗೆ 70ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿ ಮನವಿ ಪತ್ರ ನೀಡಿದರು. ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ