ಸಂವಿಧಾನ ಸರ್ವ ಜಾತಿ ಜನಾಂಗಕ್ಕೆ ಸಮಾನ ಅವಕಾಶ ನೀಡದೆ – 67.ನೇ ಮಹಾಪರಿ ನಿರ್ವಾಣ ದಿನಾಚರಣೆ.
ಹುನಗುಂದ ಡಿಸೆಂಬರ್.8

ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ನೀಡುವ ಮೂಲಕ ಸರ್ವ ಜಾತಿ ಜನಾಂಗಕ್ಕೆ ಸಮಾನ ಅವಕಾಶವನ್ನು ಕಲ್ಪಿಸಿದ ಮಹಾನ ಮಾನವತಾವಾದಿ ಡಾ.ಬಾಬಾ ಸಾಹೇಬ ಅಂಬೇಡ್ಕರ ತತ್ವಾದರ್ಶಗಳ ಮತ್ತು ಅವರ ಕೊಟ್ಟ ಸಂವಿಧಾನ ಎಲ್ಲರಿಗೂ ದಾರಿ ದೀಪವಾಗಿವೆ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಹೊಸಮನಿ ಹೇಳಿದರು.ಬುಧವಾರ ಸಾಯಂಕಾಲ ಪಟ್ಟಣದ ವಿ.ಮ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ೬೭ ನೆಯ ಮಹಾಪರಿ ನಿರ್ವಾಣ ದಿನಾಚರಣಿಯಲ್ಲಿ ಮಾತನಾಡಿದ ಅವರು ಪ್ರಪಂಚದಲ್ಲಿಯೇ ಭಾರತ ದೇಶ ಅನೇಕ ಜಾತಿ,ಮತ,ಪಂಥ,ಧರ್ಮ,ಭಾಷೆಗಳನ್ನು ಹೊಂದಿದ ಈ ದೇಶದ ಪ್ರತಿಯೊಂದು ಸಮಾಜಕ್ಕೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ ಮಹಾನ್ ವ್ಯಕಿ.ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ಸಾಮಾಜಿಕ ನ್ಯಾಯದ ಹರಿಕಾರ,ಶೋಷಿತ ಸಮುದಾಯ ಧ್ವನಿ,ಅವರ ವಿದ್ವಾಂತ ಪಾಂಡಿತ್ಯವನ್ನು ಮೆಚ್ಚಿಕೊಂಡ ವಿಶ್ವವೇ ಅವರ ಹುಟ್ಟಿದ ದಿನವನ್ನು ಜ್ಞಾನ ದಿನವನ್ನಾಗಿ ಆಚರಿಸುತ್ತಾರೆ.ಆದರೆ ಡಾ.ಬಿ.ಆರ್.ಅಂಬೇಡ್ಕರ ಅವರು ಹಿಂದು ಧರ್ಮದಲ್ಲಿದ್ದ ಜಾತಿ ವ್ಯವಸ್ಥೆ,ಕಂದಾಚಾರಗಳನ್ನು ಕಟುವಾಗಿ ವಿರೋಧಿಸಿ ಬೌದ್ದ ಧರ್ಮವನ್ನು ಸೇರಿದರು.ಅವರ ಮರಣದ ದಿನವನ್ನು ಮಹಾಪರಿ ನಿರ್ವಾಣ ದಿನವೆಂದು ಆಚರಿಸುತ್ತಿದ್ದೇವೆ.ಯಾವ ವ್ಯಕ್ತಿ ಸಂವಿಧಾನ ರಚನಾ ಸಭೆಗೆ ಬರಬಾರದು ಎಂದು ವಿರೋಧಿಸುತ್ತಿದ್ದ ಮನವಾದಿಗಳಿಗೆ ಬೃಹತ್ ಲಿಖಿತ ಸಂವಿಧಾನವನ್ನು ರಚಿಸಿ ಕೊಟ್ಟ ಮಹಾನ್ ಮಾನವತಾ ವಾದಿಯಾಗಿದ್ದಾರೆ.ಅವರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದರು.ದಲಿತ ಮುಖಂಡ ಉಮೇಶ ಕಡೇಮನಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ ಕೇವಲ ದಲಿತರಿಗೆ ಮಾತ್ರ ಸಂವಿಧಾನ ರಚಿಸಲಿಲ್ಲ.ಸರ್ವ ಜಾತಿ ಜನಾಂಗಕ್ಕೆ ಅನುಕೂಲವಾಗುವಂತಾ ಸಂವಿಧಾನ ರಚಿಸಿದ್ದಾರೆ.ಸಂವಿಧಾನವನ್ನು ವಿರೋಧಿಸುವ ಬುದ್ದಿವಂತರು ಇದನ್ನು ಅರ್ಥ ಮಾಡಿಕೊಳ್ಳಬೇಕು.ಇಡೀ ದೇಶವೇ ಡಾ.ಬಾಬಾಸಾಹೇಬ ಅಂಬೇಡ್ಕರ ಕೊಟ್ಟ ಸಂವಿಧಾನದ ಅಡಿಯಲ್ಲಿ ಸಮಾನವಾಗಿ ಇಂದು ಜೀವನವನ್ನು ನಡೆಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪರವೇಜ ಖಾಜಿ,ಹನಮಂತ ನಡುವಿನಮನಿ,ಸುರೇಶ ಹಳಪೇಟಿ,ವಿಜಯ ಭಾವಿಕಟ್ಟಿ,ಆನಂದ ಚಲವಾದಿ,ಕೆಂಚಪ್ಪ ಮಾದರ,ಶ್ರೀನಿವಾಸ ಮೇಟಿ,ಶಿವಪುತ್ರಪ್ಪ ತಗ್ಗಿಹಾಳ,ಗ್ಯಾನಪ್ಪ ಪೂಜಾರಿ,ಸಿದ್ದಪ್ಪ ಜಾಲಿಗಿಡದ,ಮುತ್ತು ಭಜಂತ್ರಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ