“ಅರಿತು ಜಗದಿ ಬಾಳುವವನೇ ಅರಸ”…..

ಅವಗುಣಗಳ ಮನದ ಕಸ ಗೂಡಿಸಿ
ಕಳಂಕ ರಹಿತ ಜೀವನ ವಿಶ್ವದಿ ಶ್ರೇಷ್ಠ
ಅಂದ ಚಂದಕ್ಕೆ ಪಶುವಿನಂತೆ ಮರುಳಾಗದಿರು
ಶುದ್ಧತೆಗೆ ಬದ್ಧನಾಗಿ ಸಂತೃಪ್ತನಾಗು
ನಿಸ್ಸಾಹಾಯಕನಲ್ಲ ಆತ್ಮಬಲ ಮಹಾಬಲ
ನಂಬು
ನಿಜವಾದ ನಿನ್ನ ಹಿತೈಷಿ ನೀನೇ
ಯಾರೋಮಾಡಿದ ತಪ್ಪಿಗೆ ಒಮ್ಮೊಮ್ಮೆ ಪರೀಕ್ಷೆ
ಸಮಾದಾನಿ ನಿಜ ದಾನಿ
ತಪ್ಪುಎಸಗದಂತೆ ಕಠೋರತೆಯಿರಲಿ
ಸತ್ಯ ಸರಿ ಇದ್ದಗ ನಿರ್ಭಯವಿರಲಿ
ಸುತ್ತ ಮುತ್ತು ಕ್ರೂರತನ ಮುಳ್ಳುಗಳಿದ್ದರೂ
ಆದರ್ಶತನದ ಸಾಧಕ ಜೀವಿಯಾಗು
ಮೂರು ಆಗಿ ಮತ್ತೊಂದು ಮತ್ತೊಂದಾಗಬೇಡಿ
ಗೌರವ ಅಪಮಾನ ವಿಪತ್ತು ಸಂಪತ್ತು
ನಮ್ಮತನದ ಕರ್ಮ ಆಧಾರಿತ
ಆಚಾರ ವಿಚಾರ ನಡೆ ನುಡಿ
ಸಹವಾಸ ನಿಜ ಪ್ರತಿಬಿಂಬ
ಅರಿತು ಜಗದಿ ಬಾಳುವವನೇ ಅರಸ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.