ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರದ ಆದೇಶದನ್ವಯ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಾಗುವಂತೆ ತಹಶೀಲ್ದಾರರಿಗೆ – ಶಾಸಕರು ಸೂಚನೆ ನೀಡಿದರು.

ಕೂಡ್ಲಿಗಿ ಅ.08

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ರಂದು ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ವಿಜಯನಗರ ಜಿಲ್ಲೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ 2024-25 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಿಮಿತ್ತವಾಗಿ ಪೂರ್ವಭಾವಿ ಸಭೆಯನ್ನು ಮಾನ್ಯ ಡಾಕ್ಟರ್ ಶ್ರೀನಿವಾಸ ಎನ್ ಟಿ ಶಾಸಕರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ವರ್ಷದಂತೆ ನಡವಳಿಕೆಯ ಪ್ರಕಾರ ಈ ಬಾರಿಯು ಸಹ ವಾಲ್ಮೀಕಿ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ದೊಂದಿಗೆ ಮೆರವಣಿಗೆ ಮೇನ್ ಬಾಯ್ಸ್ ಸ್ಕೂಲ್ ಆವರಣದಲ್ಲಿರುವ ಚಂದ್ರಶೇಖರ್ ಆಜಾದ್ ರಂಗ ಮಂದಿರದಲ್ಲಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವ ವೇದಿಕೆಗೆ ದಿವಂಗತ ಮಾನ್ಯ ಮಾಜಿ ಶಾಸಕರು ಎನ್. ಟಿ. ಬೊಮ್ಮಣ್ಣ ನವರ ಹೆಸರಿಡುವಂತೆ ಸರ್ವ ಮುಖಂಡರು ಒಪ್ಪಿಗೆಯೊಂದಿಗೆ ತೀರ್ಮಾನಿಸಲಾಯಿತು.

ಹಾಗೆ ಪ್ರತಿ ವರ್ಷದಂತೆ ಅಕ್ಟೋಬರ್ 17 ರಂದು ನಡೆಯುವ ವಾಲ್ಮೀಕಿ ಜಯಂತಿಯಗೆ ಅನೇಕ ಮುಖಂಡರುಗಳು ತಮ್ಮ ತಮ್ಮ ಸಲಹೆಗಳನ್ನು ತಿಳಿಸುವಾಗ ಅಜ್ಜಯ್ಯ ಇವರು ವಾಲ್ಮೀಕಿ ಜಯಂತಿಯ ದಿನದಂದು ಯಾವುದೇ ಕಾರಣಕ್ಕೂ ಮಧ್ಯದ ಅಂಗಡಿ ತೆಗೆದಂತೆ ಕ್ರಮ ಕೈಗೊಳ್ಳ ಬೇಕೆಂದು ಹಾಗೂ ವಾಲ್ಮೀಕಿ ಜಯಂತಿ ಅಂಗವಾಗಿ ಸ್ನೇಹ ಎಂಬ ಜೋಗತಿಯ ಸಮಾಜ ಸೇವೆಯನ್ನು ಅರಿತು ಅವರಿಗೆ ಸನ್ಮಾನ ಮಾಡುವ ಅವಕಾಶ ದೊರಕಿಸಿ ಕೊಡಬೇಕೆಂದು ತಮ್ಮ ಸಲಹೆ ತಿಳಿಸಿದರು. ಹಾಗೆ ಕಾಟೇರ ಹಾಲೇಶ್, ಕೆ ಈಶಪ್ಪ, ದೇವರ ಮನೆ ಮಹೇಶ್, ಶಾಮಿಯಾನ ಚಂದ್ರಪ್ಪ, ಕೆ.ಕೆ ಹಟ್ಟಿ ರಮೇಶ್, ಅಜಯ್ ರಾಮಸಾಲಿ, ಹಾಗೆ ಇನ್ನು ಅನೇಕ ಮುಖಂಡರುಗಳು ತಮ್ಮ ಸಲಹೆಗಳನ್ನು ತಿಳಿಸಿದರು ಹಾಗೆ ಈ ಸಭೆಗೆ ನೆರೆದಂತ ವಿವಿಧ ಸಮುದಾಯಗಳ ಮುಖಂಡರುಗಳನ್ನು ಯಾವುದೇ ಜಯಂತಿಗಳನ್ನು ಆಯಾ ಸಮುದಾಯಕ್ಕೆ ಸೀಮಿತವಾಗಿ ಮಾಡುವುದು ಬೇಡ ಹಾಗೆ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ ಕೊಂಡು ಯಶಸ್ವಿಯಾಗಿ ಕಾರ್ಯಕ್ರಮ ಮಾಡೋಣ ಎಂದು ಮಾನ್ಯ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ಎಲ್ಲಾ ರೀತಿಯ ಅಭಿವೃದ್ಧಿಯ ವ್ಯವಸ್ಥೆಯನ್ನು ಪ್ರತಿ ಗ್ರಾಮ ಪಟ್ಟಣಗಳಲ್ಲಿ ವಾಸಿಸುವಂತಹ ಸಾರ್ವಜನಿಕರಿಗೆ ಸರ್ಕಾರದಿಂದ ಸಿಗುವಂತಹ ಮೂಲಭೂತ ಸೌಕರ್ಯಗಳನ್ನು ಮೊದಲು ಅಭಿವೃದ್ಧಿಯ ವಿಷಯವಾಗಿ ಹೆಚ್ಚಾಗಿ ಹೊತ್ತು ಕೊಡುತ್ತಿದ್ದೇನೆ ಆದ್ದರಿಂದ ನೆರೆದಂತ ಎಲ್ಲಾ ಸಮುದಾಯದ ಮುಖಂಡರುಗಳು ತಾಲೂಕನ್ನು ಅಭಿವೃದ್ಧಿ ಮಾಡಲು ಸರ್ಕಾರದಿಂದ ಅನೇಕ ಯೋಜನೆಗಳನ್ನು ತರಲು ನನಗೆ ಸಂಪೂರ್ಣ ಸಹಕಾರ ಕೊಡಿ ಎಂದು ಕೇಳಿ ಕೊಂಡರು. ಈ ಸಮಯದಲ್ಲಿ ಎಲ್ಲಾ ಮುಖಂಡರ ಸಮ್ಮುಖದಲ್ಲಿ ನನ್ನ ಮನದಾಳದ ಮಾತುಗಳನ್ನು ತಿಳಿಸಲು ಇಚ್ಚಿಸುತ್ತೇನೆ, ಕಾರಣ ಈ ಕೂಡ್ಲಿಗಿ ತಾಲೂಕನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಲು ತಮ್ಮೆಲ್ಲರ ಸಹಕಾರ ತುಂಬಾ ಮುಖ್ಯ ಎಂದು ತಿಳಿಸಿದರು ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ಶ್ರೀಮತಿ ರೇಣುಕಾ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಾದ ಕೆ ಎಮ್ ಮುಗಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ್ ಶ್ರೀ ವಾಲ್ಮೀಕಿ ಮಹಾ ಸಭಾದ ಅಧ್ಯಕ್ಷರಾದ ಎಸ್ ಸುರೇಶ್ ಹಾಗೂ ಸಿಪಿಐ ಸುರೇಶ್ ತಳವಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೈಯದ್ ಶುಕ್ರರು, ವಾಲ್ಮೀಕಿ ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ಪಕ್ಷಗಳ ಮುಖಂಡರುಗಳು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರುಗಳು ದಲಿತ ಸಮುದಾಯದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ.ಕೂಡ್ಲಿಗಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button