“ವಿಶ್ವ ಕನ್ನಡ ಸಾಹಿತ್ಯೋತ್ಸವ ಜಗವ ಬೆಳಗುವ ನಂದಾದೀಪ”…..

ವಿಶ್ವ ಕನ್ನಡ ಸಾಹಿತ್ಯೋತ್ಸವ ಜಗವ ಬೆಳಗುವ
ನಂದಾದೀಪ
ಕರುನಾಡ ಐತಿಹಾಸಿಕ ಸಂಭ್ರಮ ಸಾರುತಿಹ
ಕನ್ನಡ ಜ್ಯೋತಿ
ಕನ್ನಡ ಕಟ್ಟಾಳುಗಳ ಶ್ರಮ ಸಾರ್ಥಕತೆಯ
ಕುರೂಹು ಕನ್ನಡ ಜ್ಯೋತಿ
ಕವಿ ಹೃದಯ ಅಕ್ಷರ ಹೂಮಾಲೆ
ಸುಗಂಧ ಸೂಸುತ ಬೆಳಗುತಿಹ ಕನ್ನಡ ಜ್ಯೋತಿ
ಶರಣರ ಅನುಭವದ ಸುವಚನ ಜನ ಮನ
ನಡೆನುಡಿ ಒಂದಾಗಿಸುತ
ಪ್ರಜ್ವಲಿಸುತಿಹ ಕನ್ನಡ ಜ್ಯೋತಿ
ರೈತಾಪಿ ಶ್ರಮಿಕರ ಕಾಯಕದ
ಸುಕೃಫಲವಾಗಿಸುತ ಸರ್ವರ ಹೃದಯದಲಿ
ಕನ್ನಡ ಜ್ಯೋತಿ
ನಾಡ ಪರಿಸರ ವನ್ಯ ಜೀವಿಗಳ ಸಂರಕ್ಷಣೆಯ
ಗುರಿಯತ್ತ ಜಾಗೃತಿ ಕಿರಣ ಬೆಳಕ ಮುಡಿಸುತಿಹ
ಕನ್ನಡ ಜ್ಯೋತಿ
ಜ್ಜಾನ ವಿಜ್ಞಾನ ಸುಜ್ಞಾನ ತಂತ್ರಜ್ಞಾನ ವಿಶ್ವದಿ
ಅರಿವು ಮೂಡಿಸುತಿಹ ಕನ್ನಡ ಜ್ಯೋತಿ
ಭಾಷಾ ಪಂಡಿತರಿಗೆ ಕನ್ನಡ ಅಕ್ಷರ ಸುಲಭ ಸವಿ
ಹಿತ ಕಲಿಸುತ ಸಾಗುತಿಹ ಕನ್ನಡ ಜ್ಯೋತಿ
ವಿಶ್ವ ಕನ್ನಡ ಸಾಹಿತ್ಯೋತ್ಸವ ಸರ್ವರ ಹರುಷದ
ಬೆಳಕು ಕನ್ನಡ ಜ್ಯೋತಿ
ನಿರಂತರ ಸಾಗುತಿಹ ಕನ್ನಡ ಜ್ಯೋತಿ
ಸದಾ ಕರುನಾಡ ನಂದಾದೀಪ ಅಕ್ಷರ ಜ್ಯೋತಿ
ಕನ್ನಡಜ್ಯೋತಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕಾಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರೃತರು
ಬಾಗಲಕೋಟ