ಚಾಲಕರು ಸುರಕ್ಷಿತ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ – ಎಸ್.ಆರ್.ಸೊನ್ನದ.
ಹುನಗುಂದ ಜನೇವರಿ.24

ಎಂತಹ ತುರ್ತು ಪರಸ್ಥಿತಿಯಲ್ಲೂ ಸಹ ತಮ್ಮ ಕುಟುಂಬವನ್ನು ಲೆಕ್ಕಿಸದೇ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪಿಸುವ ಮಹತ್ತರ ಜವಾಬ್ದಾರಿ ಚಾಲಕರ ಮೇಲಿದ್ದು.ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.ಆದರೂ ಸುರಕ್ಷಿತ ಪ್ರಯಾಣಕ್ಕೆ ಚಾಲಕರು ಹೆಚ್ಚಿನ ಆದ್ಯತೆ ನೀಡಿ ಎಂದು ಕೆಎಸ್‌ಆರ್‌ಟಿಸಿ ಹುನಗುಂದ ಘಟಕ ವ್ಯವಸ್ಥಾಪಕ ಎಸ್.ಆರ್.ಸೊನ್ನದ ಹೇಳಿದರು. ಬುಧವಾರ ಪಟ್ಟಣದ ಹುನಗುಂದ ಬಸ್ ನಿಲ್ದಾಣದಲ್ಲಿ ಸಾರಿಗೆ ಘಟಕ ವತಿಯಿಂದ ಚಾಲಕರ ದಿನಾಚರಣೆ ನಿಮಿತ್ಯ ಚಾಲಕರಿಗೆ ಶಾಲಾ ಮಕ್ಕಳಿಂದ ಮತ್ತು ಹಿರಿಯ ಪ್ರಯಾಣ ಕರಿಂದ ಪುಷ್ಪಗುಚ್ಚ ನೀಡಿ ಶುಭ ಹಾರೈಸುವ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು,ಹಬ್ಬ,ಹರಿದಿನ,ಉತ್ಸವಗಳು ಬಂದರೂ ರಜೆಯನ್ನು ಪಡೆಯದೇ ತಮ್ಮಲ್ಲಿ ಎಷ್ಟೋ ನೋವು,ನಲಿವು,ಕಷ್ಟ ಕಾರ್ಪಣ್ಯಗಳಿದ್ದರೂ ಅವುಗಳನ್ನು ಬದಿಗೊತ್ತಿ ಪ್ರತಿ ದಿನದ ಕರ್ತವ್ಯಕ್ಕೆ ಸನ್ನದ್ದರಾಗಿ ಬಸ್ ರಥವನ್ನು ಏರಿ ಶಾಲಾ,ಕಾಲೇಜು ಮಕ್ಕಳನ್ನು,ವೃದ್ದರನ್ನು,ಆಸ್ಪತ್ರೆಗೆ ತೆರಳುವ ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಸುರಕ್ಷಿತವಾಗಿ ಹೋಗಿ ಬನ್ನಿ ಎಂದು ಹೇಳುವದೆಂದರೇ ಅದು ಸಾರಿಗೆ ನೌಕರರು ಮಾತ್ರ.ಸಾರಿಗೆ ನೌಕರರು ಬೇಕಾ ಬಿಟ್ಟಿಯಾಗಿ ನಿರ್ಲಕ್ಷ್ಯದಿಂದ ಕರ್ತವ್ಯವನ್ನು ನಿರ್ವಹಿಸದೇ,ಕರ್ತವ್ಯಕ್ಕೆ ಹೋಗುವ ಮುಂಚೆ ಮೊದಲು ವಾಹನವನ್ನು ಪರೀಕ್ಷಿಸಿ ಕೊಂಡು, ಚಾಲಕ ತನ್ನೆಲ್ಲ ವ್ಯಕ್ತಿಗತ ಒತ್ತಡಗಳನ್ನು ಬದಿಗಿರಿಸಿ ವಾಹನ ನಡೆಸಿದಾಗ ಮಾತ್ರ ಪ್ರಯಾಣಿಕರ ಸುಖ ಪ್ರಯಾಣವಾಗುತ್ತದೆ.ವಾಹನದಲ್ಲಿರುವ ಪ್ರಯಾಣಿಕರು ತನ್ನ ಕುಟುಂಬದ ಸದಸ್ಯರಂತೆ ನೋಡಿ ಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.ನಿಲ್ದಾಣ ನಿಯಂತ್ರಣಾಧಿಕಾರಿ ಷಣ್ಮುಖಪ್ಪ ಆನೇಹೊಸೂರ ಮಾತನಾಡಿ ಚಾಲಕ ಕರ್ತವ್ಯ ದೇವರಿಗಿಂತಲೂ ದೊಡ್ಡದು, ಪ್ರತಿ ಕುಟುಂಬದ ಸದಸ್ಯರು ದಿನ ನಿತ್ಯದ ಪ್ರಮುಖ ಕೆಲಸಕ್ಕೆಂದು ಬಸ್‌ನಲ್ಲಿಯೇ ಪ್ರಯಾಣ ಬೆಳೆಸುತ್ತಾರೆ.ನಮ್ಮ ಸಾರಿಗೆ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ವಯೋವೃದ್ದರಿಗೆ ಹಾಗೂ ಅನಾರೋಗ್ಯ ಎಲ್ಲ ವರ್ಗದವರಿಗೂ ಅತ್ಯವಶ್ಯಕ,ಚಾಲಕರು ಸಾಧ್ಯವಾದಷ್ಟು ಕಾಳಜಿಯಿಂದ ವಾಹನ ಚಲಾಯಿಸಬೇಕು ಎಂದರು. ಇದೇ ವೇಳೆ ಹುನಗುಂದ ಪಟ್ಟಣಕ್ಕೆ ಬರುವ ಹೋಗುವ ಎಲ್ಲ ಬಸ್ ಚಾಲಕರಿಗೆ ವಿದ್ಯಾರ್ಥಿಗಳಿಂದ ಹೂವು ಗುಚ್ಛ ನೀಡಿ ಚಾಲಕ ದಿನಾಚರಣೆ ಆಚರಿಸಲಾಯಿತು. ಟ್ರಾಫಿಕ್ ಇನ್ಸ್ಪೆಕ್ಟರ್ ಶೈಲಾ ಜಿಗಳೂರ, ಸಾರಿಗೆ ನಿಯಂತ್ರಕ ಬಿ.ಬಿ. ಕುರಿ, ಎಂ.ಬಿ. ಮೆಣಸಿನಕಾಯಿ,ಎಸ್.ಎಂ. ತೋಟಗೇರ,ಎಸ್.ಎಚ್. ಜಗ್ಗಲ,ಬಿ,ವೈ ಸುಂಕದ,ಎಸ್.ಸಿ, ಅಗಸಿಮುಂದಿನ,ಎಸ್.ಎ. ಕಿರಸೂರ,ಎ.ಬಿ. ಗೌಡರ ಮತ್ತು ಎಸ್.ಎಂ.ಬಳೂಲಕರ ಉಪಸ್ಥಿತರಿದ್ದರು.
****ಬಾಕ್ಸ್ ಸುದ್ದಿ*** ಇತ್ತೀಚನ ದಿನಗಳಲ್ಲಿ ಪ್ರಯಾಣ ಕರ ಧ್ವನಿಯಾಗಿ ಚಾಲಕರು ಕೆಲಸ ಮಾಡುತ್ತಿಲ್ಲ.ತಮ್ಮ ಕುಟುಂಬ ಜವಾಬ್ದಾರಿಯನ್ನು ಸಹಿತ ಮರೆತು ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುತ್ತಿದ್ದು ಇದರಿಂದ ಬಸ್ಸಿನಲ್ಲಿರುವ ಪ್ರಯಾಣ ಕರಿಗೆ ತಕ್ಷಣ ತೊಂದರೆಯಾಗುವ ಸಾಧ್ಯತೆ ಇದ್ದು.ಇದರ ಕುರಿತು ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪಪರಿಗಣ ಸಿ ಸುರಕ್ಷಿತ ಸಂಚಾರಕ್ಕೆ ಒತ್ತು ನೀಡಬೇಕು.ವೇ.ಮೂ. ಮಹಾಂತಯ್ಯ ಗಚ್ಚಿನವ್ಮಠ ಹುನಗುಂದ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ