ಯಾವುದೇ ಕಂಡೀಷನ್ ಇಲ್ಲದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ಜಿಎಚ್ ಶ್ರೀನಿವಾಸ್

ಮಹಿಳೆಯರು ಪ್ರತಿನಿತ್ಯ ಬೆಳಗಿ ನಿಂದ ಸಂಜೆಯವರಿಗೂ ಮಕ್ಕಳಿಗೆ ಯಜಮಾನರಿಗೆ ತಿಂಡಿ ಊಟಕ್ಕೆ ಅಡಿಗೆ ಮಾಡಬೇಕು,ಮನೆ ಕೆಲಸ ಮಾಡುತ್ತಾ ವಿರಾಮವಿಲ್ಲದೆ ದುಡಿಯುತ್ತಾರೆ.

ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ರವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗವು ತರೀಕೆರೆ ಬಸ್ ನಿಲ್ದಾಣದ ಆವರಣದಲ್ಲಿ ಏರ್ಪಡಿಸಿದ್ದ ಶಕ್ತಿ ಯೋಜನೆ ಉದ್ಘಾಟನೆ ಮಾಡಿ ಮಾತನಾಡಿದರು. ಮಹಿಳೆಯರಿಗೆ ಮನೋರಂಜನೆ ಬೇಕು,ಪ್ರವಾಸ, ಪುಣ್ಯಕ್ಷೇತ್ರ ದರ್ಶನಕ್ಕೆ ನೆಂಟರು ಬಂದು ಬಳಗದವರನ್ನು ಭೇಟಿ ಮಾಡಲು ಅನುಕೂಲವಾಗುವಂತೆ.

ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿತ್ತು. ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಕೊಟ್ಟಿದ್ದು ಯಾವುದೇ ಕಂಡೀಶನ್ ಇಲ್ಲದೆ ಉಚಿತ ಪ್ರಯಾಣ ಮಾಡಿರುವುದು, ಆಸ್ಪತ್ರೆ ಚಿಕಿತ್ಸೆಗೆ ಹೋಗಲು ಅವಕಾಶವಾಗಿದೆ. ಶ್ರೀಮಂತರು ಕಾರಿನಲ್ಲಿ,ರೈಲಿನಲ್ಲಿ ಓಡಾಡುತ್ತಾರೆ ಬಡವರು ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ 156 ಭರವಸೆಗಳನ್ನು ಕೊಟ್ಟಿದ್ದು ಅದರಲ್ಲಿ 150 ಭರವಸೆಗಳನ್ನು ಹಿಡೇರಿಸಿದ್ದಾರೆ. ಈಗ 5 ಭರವಸೆ ನೀಡಿದ್ದು ಎಲ್ಲಾ ಭರವಸೆಗಳನ್ನು ಹಿಡೇರಿಸುವರು. ಸಿದ್ದರಾಮಯ್ಯನವರು ಏನೇ ಮಾಡಿದರು ಯೋಚನೆ ಮಾಡಿ ಮಾಡುತ್ತಾರೆ, ಅವರು ಆರ್ಥಿಕ ತಜ್ಞರಾಗಿದ್ದಾರೆ. ಬಜೆಟ್ಟನ್ನು ಅವರೇ ತಯಾರು ಮಾಡಿ ಮಂಡಿಸುತ್ತಾರೆ ಕೆ ಚಟ್ಟನಹಳ್ಳಿಯಲ್ಲಿ, ಬಸ್ಸು ನಿಲ್ಲಿಸಲು ತಿಳಿಸಿರುತ್ತೇನೆ.

ಹಾಗೂ ಲಕ್ಕವಳ್ಳಿ ಮಾರ್ಗವಾಗಿ ಕುವೆಂಪು ವಿಶ್ವವಿದ್ಯಾನಿಲಯದ ಮೂಲಕ ಶಿವಮೊಗ್ಗಕ್ಕೆ ಮತ್ತು ನಂದಿ ಸುಣ್ಣದಹಳ್ಳಿ ಹೊಸಳ್ಳಿ ಗ್ರಾಮಗಳಿಗೂ ಗ್ರಾಮಾಂತರ ಬಸ್ಸು ಸೌಕರ್ಯ ಕಲ್ಪಿಸುತ್ತೇನೆ ಎಂದು ಹೇಳಿದರು. ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಕೆ ಹೊಸೂರು ನ ಬಳಿ 4 ಎಕರೆ 30ಗುಂಟೆ ಜಮೀನು ಡಿಪೋ ಮಾಡಲು ಕಾಯ್ದಿರಿಸುತ್ತೇನೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಚಿಕ್ಕಮಗಳೂರು ವಿಭಾಗೀಯ ಲೆಕ್ಕಪತ್ರ ಮೇಲ್ವಿಚಾರಕರಾದ ಶ್ರೀಕಾಂತ್ ಮಾತನಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 2002ರಲ್ಲಿ ಚಿಕ್ಕಮಗಳೂರು ವಿಭಾಗವನ್ನು ಆರಂಭಿಸಲಾಯಿತು.

ಜಿಲ್ಲೆಯಲ್ಲಿ 6 ಡಿಪೋಗಳಿದ್ದು 19 ಬಸ್ ನಿಲ್ದಾಣಗಳಿವೆ. ಪ್ರತಿ ದಿನ 60 ಲಕ್ಷ ರೂಪಾಯಿ ಆದಾಯ ಬರುತ್ತಿದೆ. 2161 ಜನ ಸಿಬ್ಬಂದಿಗಳಿದ್ದು 52 ಅನುಸೂಚಿಗಳಿದ್ದು 13 ಅಂತರಾಷ್ಟ್ರೀಯ ಸಾರಿಗೆ ಬಸ್ಸಿಗಳಿದ್ದು,3811 ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗಿದೆ.

6 ರಿಂದ 12 ವರ್ಷದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಉಚಿತವಾಗಿ ರಾಜ್ಯದೊಳಗೆ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಬಹುದು. ಸೇವಾ ಸಿಂಧು ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಮೂರು ತಿಂಗಳೊಳಗೆ ಸ್ಮಾರ್ಟ್ ಕಾರ್ಡ್ ಪಡೆಯಿರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದರು. ಉಪವಿಭಾಗ ಅಧಿಕಾರಿಯಾದ ಸಿದ್ದಲಿಂಗ ರೆಡ್ಡಿ ಮಾತನಾಡಿ ನಮ್ಮ ರಾಜ್ಯದಲ್ಲಿ ಉತ್ತಮವಾದ ಸಾರಿಗೆ ವ್ಯವಸ್ಥೆ ಇದೆ,ಶಾಲಾ ಕಾಲೇಜು ಶಿಕ್ಷಣ ಪಡೆಯಲು, ಆರೋಗ್ಯ ಸಮಸ್ಯೆ ಇರುವವರು ಬೆಂಗಳೂರು ಮಂಗಳೂರು ಶಿವಮೊಗ್ಗ ಮಣಿಪಾಲ್ ನಂತಹ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಬಹುದಾಗಿದೆ.

ವೃದ್ಧರು ಯಾತ್ರಾ ಸ್ಥಳಗಳಿಗೆ, ಪುಣ್ಯಕ್ಷೇತ್ರಗಳಿಗೆ ಹೋಗಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು. ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ ರವರು ಮಾತನಾಡಿ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರಿಗೂ ಶುಭವಾಗಲಿ ಎಂದು ಶುಭ ಕೋರಿದರು. ತಹಸಿಲ್ದಾರ್ ಗ್ರೇಡ್ 2, ಗೋವಿಂದಪ್ಪ, ಪುರಸಭಾ ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ, ನಿಗಮದ ಸಹಾಯಕ ಅಭಿಯಂತರರಾದ ಶ್ರೀಧರ ಸ್ವಾಮಿ, ಉಪಸ್ಥಿತರಿದ್ದು ಶ್ರೀಮತಿ ರೇಣುಕ ಪ್ರಾರ್ಥಿಸಿ, ರಘು ಸ್ವಾಗತಿಸಿ ನಿರೂಪಿಸಿದರು. ಸಾರಿಗೆ ನಿಯಂತ್ರಕರಾದ ವೈಎಸ್ ವಿರೂಪಾಕ್ಷಪ್ಪ ವಂದಿಸಿ ಸಿಹಿ ಹಂಚಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button