ಯಲಗೋಡ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತ.
ಯಲಗೋಡ ಫೆಬ್ರುವರಿ.19

ದೇವರ ಹಿಪ್ಪರಗಿ ಯಲಗೋಡ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಗ್ರಾಮದ ಎಲ್ಲಾ ಸಾರ್ವಜನಿಕರು ಅದ್ದೂರಿಯಿಂದ ಸ್ವಾಗತ ಮಾಡಿ ಕೊಂಡರು, ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದರು, ತದನಂತರ ಕಾರ್ಯಕ್ರಮವನ್ನು ಅಂಬೇಡ್ಕರ್ ಅವರು ಭಾವಚಿತ್ರ ಹೂವು ಹಾಕುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಮ್ಮದ್ ರಪೀಕ್ ಕಣಮೇಶ್ವರ ವಹಿಸಿಕೊಂಡರು, ಈ ಸಂವಿಧಾನ ಜಾಗೃತಿ ಜಾಥಾದ ಇಡೀ ನಮ್ಮ ಭಾರತದ ದೇಶದ್ಯಾಂತ ಈ ಜಾಥಾವನ್ನು ಸಂಚರಿಸುವದು,ಅಂಬೇಡ್ಕರ್ ರವರು ಶಿಕ್ಷಣ ಕಲಿಯುವ ಸಮಯದಲ್ಲಿ ಬಹಳ ಸಂಕಷ್ಟವನ್ನು ಅನುಭವಿಸಿದರು ಅವರು ನಮ್ಮ ಜೀವನ ಸಲುವಾಗಿ ಹೋರಾಟವನ್ನು ಮಾಡಿಲ್ಲ ಬಡವರ ದೀನ ದಲಿತರ ಬಗ್ಗೆ ಚಿಂತನೆ ಮಾಡಿ ಬಡವರಿಗೆ ನ್ಯಾಯ ನೀಡಿದರು ಸರ್ವ ಜಾತಿಗೆ ಮೀಸಲಾತಿ ನೀಡಿದರು ಅಂಬೇಡ್ಕರರು ದಲಿತರ ನಾಯಕ ಅಲ್ಲ ಸರ್ವ ಜಾತಿಗೆ ಸಂವಿಧಾನ ಬರೆದ ನಾಯಕರು.

ವಿಶ್ವ ರತ್ನ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ ರವರು ಸಂವಿಧಾನ ಜಾಗೃತಿ ಜಾಥಾ ಬಗ್ಗೆ ಉಪನ್ಯಾಸ ನೀಡಿದ ಬಸವರಾಜ ಜಾಲವಾದ,ವಾಯ್ ಸಿ ಮಯೂರ, ಯವರು ಅಂಬೇಡ್ಕರ್ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು, ಹಾಗೂ ಮುಖ್ಯ ಅಥಿತಿಗಳಾದ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಪ್ರತಿ ನಿಧಿಯಾದ ಮಲ್ಲಕಪ್ಪ ನಾಟಿಕಾರ,ಸದಸ್ಯರಾದ ಹುಸೇನ್ ತಳ್ಳೋಳ್ಳಿ ಬಸವರಾಜ ಅಸ್ಕಿ ರಾಜಪಟೇಲ್ ಕಣಮೇಶ್ವರ ಬಸಲಿಂಗಪ್ಪ ಜ್ಯಾಯಿ ಅಪುಗೌಡ ಬಿರಾದಾರ ಶೇಖಪ್ಪ ಪೂಜಾರಿ ಹಾಗೂ ನೋಡಲ್ ಅಧಿಕಾರಿಗಳಾದ ಪಿ ಆರ್ ಉಮಚಗಿಮಠ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಕೆ ಹಡಪದ ಗ್ರಾಮ ಆಡಳಿತ ಅಧಿಕಾರಿಗಳಾದ ರಾಮನಗೌಡ ರಾಂಪೂರ, ಪಿ ಕೆ ಪಿ ಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾಡಿವಾಳಪ್ಪ ಹಿಕ್ಕನಗುತ್ತಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶಿವಲಿಂಗಪ್ಪ ಹಚಡದ,ಕಾಂಗ್ರೆಸ್ ಮುಖಂಡರಾದ ತುಳಸಿ ಹರಿಜನ,ದಲಿತ ಮುಖಂಡರಾದ ಲಕ್ಕಪ್ಪ ಬಡಿಗೇರ ಕಲಕೇರಿ, ಹಾಗೂ ವೀರೇಶ ಕರಕಳ್ಳಿಮಠ ಸಿ ಆರ್ ಪಿ,ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಮಶ್ಯಾಕಸಾಬ ಚೌಧರಿ, ಹಾಗೂ ಸೋಮಶೇಖರ ಹೋಸಮನಿ ಉಣಿಭಾವಿ ಶಿಕ್ಷಕರು,ಹಾಗೂ ದಲಿತ ಮುಖಂಡರಾದ ಹುಯೋಗಿ ತಳ್ಳೋಳ್ಳಿ, ಶ್ರೀಶೈಲ ಜಾಲವಾದ,ಸುತ್ತ ಮುತ್ತಲಿನ ಗ್ರಾಮದ ದಲಿತ ಮುಖಂಡರು ಹಾಗೂ ಯಲಗೋಡ ಗ್ರಾಮದ ಪ್ರೌಢ ಶಾಲೆಯ ಮಕ್ಕಳು, ಶಿಕ್ಷಕರು,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶಿಕ್ಷಕರು,ಎಲ್ಲಾ ಮಹಿಳಾ ಸಂಘದವರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆರು ಗ್ರಾಮ ಪಂಚಾಯತಿ ಸಿಬ್ಬಂದಿಗಳು,ಹಾಗೂ ಗ್ರಾಮದ ಎಲ್ಲಾ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ