ವಿಶ್ವ ಶ್ರವಣ ದಿನಾಚರಣೆ “ಕಿವಿ ಶ್ರವಣ ಬಗ್ಗೆ ನಿರ್ಲಕ್ಷ್ಯ ಬೇಡ ಜಾಗೃತಿ ಇರಲಿ”…..

ಜಗದಲ್ಲಿ ಜೀವಸಂಕುಲಗಳಲ್ಲಿ ಕಿವಿಯು ಬದುಕಿಗೆ ಪೂರಕ.ಮೆದುಳಿನ ಕಿಡಕಿಗಳುವಿಶ್ವದ ಜ್ಞಾನದ ಬೆಳಕಿಗೆ ಮುಖ್ಯ.ಕಿವಿದೋಷ ಮನುಜನ ದಿನನಿತ್ಯ ಬಾಳನಲ್ಲಿ ದಾರಿ ತಪ್ಪುವವುದು ಮುಜುಗರ ಉಂಟು ಮಾಡುತ್ತದೆ. ಕಿವಿಗೆ ಕೇಳು ಹೇಳುವ ವಿಷಯ ಉತ್ತಮವಿರಲಿ ಹೇಳಿದ ಮಾತು ಕೇಳದಾಗ ಕಿವಿ ಹಿಂಡುವುದು ಲೋಕಾರೂಢಿ ಆರೋಗ್ಯಕರ ಕಿವಿ ಶ್ರವಣ ಶಕ್ತಿದಾಯಕ. ಶ್ರವಣ ದೋಷ ವಯೋಸಹಜ ಆಧುನಿಕ ವೈದ್ಯ ವಿಜ್ಞಾನದ ಸಹಾಯದಿ ಶ್ರವಣ ಸಾಧನ ಬಳಸಿ ಕಿವಿ ಕೇಳುವ ಸುಧಾರಣೆ ಮಕ್ಕಳಲ್ಲಿ ಶ್ರವಣದೋಷ ಬಲವಾದ ಪೆಟ್ಟಿನಿಂದ ಅನಾವಶ್ಯಕ ಕಡ್ಡಿ ಹಾಕುವುದರಿಂದ ದೋಷ ಉಂಟಾಗುವುದು. ಎಚ್ಚರಿಕೆ ವಹಿಸಬೇಕು ಮಕ್ಕಳ ಬಳೆವಣಿಗೆಗೆ ಕಿವಿಗಳ ಆರೋಗ್ಯ ಮುಖ್ಯ. ವಯೋಜ ಸಹಜ ಕಿವಿ ಶ್ರವಣ ದೋಷ ಸಾಮಾನ್ಯ, “ಜೀವನದಲ್ಲಿ ಕೇಳಿಸಿ ಕೊಳ್ಳಲು ಜಾಗೃತಿ ಇರಲಿ” ಶ್ರವಣ ಆರೖಕೆ ಕಿವಿ ರಕ್ಷಣೆ ನಮ್ಮಲ್ಲೆರ ಹೊಣೆ ಕಿವಿಯ ಒಳಗಡೆ ಯಾವುದೇ ವಸ್ತು ಹಾಕಬೇಡಿ. ಮೊಬೈಲ್ ನಲ್ಲಿ ದೀರ್ಘ ಕಾಲ ಮಾತನಾಡಬೇಡಿ ಕಲುಷೀತ ನೀರು ವಾಯು ಜೋರಾದ ಶಬ್ಧ ಗಳಿಂದ ದೂರವಿರಿ. ಸೂಕ್ತ ಚಿಕಿತ್ಸೆಯಿಂದ ಶ್ರವಣ ದೋಷ ನಿವಾರಣೆ ಶಬ್ಧ ಮಾಲಿನ್ಯ ಮಕ್ಕಳು ಆಟದ ಸಮಯದಲ್ಲಿ ಮಣ್ಣು ಮರಳು ಸೇರುವ ಸಾಧ್ಯತೆ ಇರುತ್ತದೆ. ಕಲುಷಿತ ವಾಯು ಕಿವಿ ಸೇರಿದಾಗ ಶೀತ ನೆಗಡಿ ಆವರಿಸಿದಾಗ ಕಿವಿಗಳು ತೊಂದರೆ ಸಹಜ ನಿರ್ಲಕ್ಷ್ಯ ಬೇಡ. ವೈದ್ಯಕೀಯ ಪರೀಕ್ಷೆ ಚಿಕಿತ್ಸೆ ಅವಶ್ಯಕ ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆ ಯಿಂದ ಕಿವಿಯ ಶ್ರವಣ ದೋಷ ನಿವಾರಿಸಬಹುದು. “ಬದಲಾಗುತ್ತಿರುವ ಮನಸ್ಥಿತಿ ಕಿವಿಯ ಶ್ರವಣ ಆರೈಕೆ ಉತ್ತಮ ಗೊಳಿಸಲು ನಿಮ್ಮನ್ನು ಸಶಕ್ತ ಗೊಳಿಸಿ ಕೊಳ್ಳಿ” ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಿ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಯಾವುದೇ ತರಹ ಕಿವಿ ಶ್ರವಣ ದೋಷವಿದ್ದಲ್ಲಿ ಕಿವಿ ಮೂಗು ಗಂಟಲು ತಜ್ಞರ ಸಲಹೆ ಚಿಕಿತ್ಸೆ ಉಚಿತವಾಗಿರುತ್ತದೆ.ಸಮಾಜ ಕುಟುಂಬದಲ್ಲಿ ಅನಾವಶ್ಯಕ ವಿಷಯಾಂತರ ದಿಂದ ಸಾಮಾಜಿಕ ಕೌಟುಂಬಿಕ ಸ್ವಾಸ್ಥ್ಯ ಕಲುಷಿತ ವಾಗಬಹುದು ಎಚ್ಚರಿಕೆ ವಹಿಸುವುದು ಇಲ್ಲಿ ಕೇಳಿ ಅಲ್ಲಿ ಹೇಳಿದಿರುವುದು ಅವಶ್ಯಕ. ಉತ್ತಮ ವಿಷಯ ಹಂಚಿಕೆ ವೈಯಕ್ತಿಕ ಕುಟುಂಬ ಸಮಾಜ ಸುಧಾರಿಸುವುದು ಉತ್ತಮ ವ್ಯಕ್ತಿತ್ವದ ಮನುಜ ಧರ್ಮ ಎನಿಸುವುದು. ಬೇಡವಾದ ಮಾರಕ ಎನಿಸುವುದು ಕೇಳಿದರೂ ಕಿವಿ ಕೇಳದ ಹಾಗಿರುವುದು ಉತ್ತಮ ಕಾರ್ಯಗಳಲ್ಲಿ ಒಂದೆನಿಸುವುದು. ವಿಶ್ವ ಶ್ರವಣ ದಿನ ಆರೋಗ್ಯಕರ ಕಿವಿಗಳು ಮಾನವನ ಉತ್ತಮ ಜೀವನ ಶೈಲಿಗೆ ಪೂರಕವಾಗಲಿ ಸಮಾಜ ಕುಟುಂಬ ವ್ಯಕ್ತಿ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ವಾಗದಿರಲಿ. “ವಿಶ್ವ ಶ್ರವಣ ದಿನಾಚರಣೆ” ಶುಭ ದಿನದ ಆರೋಗ್ಯಕರ ಕಿವಿ ಶ್ರವಣ ತಮ್ಮ ಕುಟುಂಬ ಪರಿವಾರ ಸರ್ವರ ಕಿವಿ ಶ್ರವಣ ದೋಷ ಆಗದಿರಲಿ ಕಿವಿಗಳ ಶ್ರವಣ ಸುಂದರಿ ಬದುಕಿಗೆ ಜೋಪಾನವಾಗಿರಲಿ ಕಿವಿಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಕಾಳಜಿ ಇರಲಿ ಅನಿವಾರ್ಯ ಪರಿಸ್ಥಿತಿಗಳಲ್ಲಿ ಕಿವಿ ತುರಿಕೆ ಶೀಲೀಂದ್ರ ಬೆಳವಣಿಗೆ ಒಣಗಿದ ಕಿವಿ ಬ್ಯಾಕ್ಟೇರಿಯಾ ದೋಷ ಕಾಣಿಸಿದರೆ ಕಿವಿ ತಜ್ಞರು ಸಲಹೆ ಚಿಕಿತ್ಸೆ ಪಡೆಯಿರಿ.
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿಗಳು
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.