ವರ್ಗಾವಣೆಗೊಂಡ ಶಿಕ್ಷಕ ಹುಮ್ಮಳಿಸಿದ ದುಖಃ – ಅಡುಗೆ ಸಿಬ್ಬಂದಿಗೆ ಕಾಲು ಮುಗಿದ ವಿಜಯ ಕುಮಾರ ಮೈತ್ರಿ ಶಿಕ್ಷಕರು.
ಕುಷ್ಟಗಿ ತಾಲೂಕಿನ ದೋಟಿಹಾಳ ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕ ವಿಜಯಕುಮಾರ ಮೈತ್ರಿ ಅವರು ಕಾಟಾಪುರ ಪ್ರೌಢಶಾಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ಹುಮ್ಮಳಿಸಿದ ದುಖಃ ಕಣ್ಣೀರಿಟ್ಟು, ಬಿಳ್ಕೊಟ್ಟ ಘಟನೆ ಜರುಗಿತು,’ನಮ್ಮ ಶಾಲೆ ಬಿಟ್ಟು ಹೋಗಬೇಡಿ ಸರ್, ನೀವು ಇಲ್ಲಿಯೇ ಇರಬೇಕು, ನಮಗೆ ಚೆನ್ನಾಗಿ ಪಾಠ ಮಾಡ್ತೀರಿ, ನಿಮ್ಮ ಪಾಠ ನಾವಿನ್ನೂ ಆಲಿಸಬೇಕು, ನಿಮ್ಮಿಂದ ಮಾರ್ಗದರ್ಶನ ಪಡೆಯಬೇಕು’ ಎಂದು ವಿದ್ಯಾರ್ಥಿಗಳು ಕಣ್ಣೀರಿಡುತ್ತಾ ಗೋಗರೆದರು. ಹಲವಾರು ವಿದ್ಯಾರ್ಥಿಗಳು ಶಿಕ್ಷಕನ ಕಾಲಿಗೆ ಬಿದ್ದು ನಮಸ್ಕರಿಸಿದರು.

ವಿಜಯಕುಮಾರ ಮೈತ್ರಿ ಶಿಕ್ಷಕ ವೃತ್ತಿ ಆರಂಭಿಸಿದ್ದು ಇದೇ ದೋಟಿಹಾಳ ಸರ್ಕಾರಿ ಪ್ರೌಢ ಶಾಲೆಯಿಂದ: 2010ರ ಜುಲೈ 14 ರಿಂದ ಆಂಗ್ಲ ಶಿಕ್ಷಕರಾಗಿ ಸೇರ್ಪಡೆಗೊಂಡ ವಿಜಯಕುಮಾರ, ವಿದ್ಯಾರ್ಥಿಗಳಿಗೆ ಸರಳವಾಗಿ, ಮನ ಮುಟ್ಟುವಂತೆ ಪಾಠ ಮಾಡುತ್ತಿದ್ದರು, ಜೊತೆಗೆ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಸಂಸ್ಕಾರ, ಸಂಸ್ಕೃತಿ ಹೇಳುತ್ತಿದ್ದರು. ವಿಶೇಷ, ವಿಭಿನ್ನ ಚಟುವಟಿಕೆಗಳನ್ನು ಮಾಡಿಸುತ್ತಿದ್ದರು ಎಂದು ವಿದ್ಯಾರ್ಥಿಗಳು ಹೇಳಿದರು.ಜಿಲ್ಲಾ ಪ್ರೌಢಶಾಲೆ ಇಂಗ್ಲಿಷ್ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಕಳೆದ ಏಳೆಂಟುವರ್ಷಗಳಿಂದ ಕೆಲಸ ಮಾಡಿದ್ದಾರೆ. ಅಡುಗೆ ಸಿಬ್ಬಂದಿಗೆ ಕಾಲುಮುಗಿದ ಶಿಕ್ಷಕ: ದೋಟಿಹಾಳ ಶಾಲೆಯಿಂದ ಆಂಗ್ಲ ಶಿಕ್ಷಕ ವರ್ಗಾವಣೆಗೊಂಡ ವಿಜಯಕುಮಾರ ಮೈತ್ರಿ ಅಡುಗೆ ಸಿಬ್ಬಂದಿಗೆ ಕಾಲು ಮುಗಿದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡ ಆದರ್ಶ ವ್ಯಕ್ತಿತ್ವದ ಶಿಕ್ಷಕರೆಂದು ಇಡೀ ಡೋಟಿಹಾಳ ಗ್ರಾಮಸ್ಥರು ಮನೆ ಮನೆಯ ಮಾತಾಗಿರುವುದು ವಿಶೇಷವಾಗಿದೆ.