ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹುನಗುಂದ ಜಿಲ್ಲೆಯಲ್ಲಿ ಮೂರನೆಯ ಸ್ಥಾನ.
ಹುನಗುಂದ ಮೇ.09

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹುನಗುಂದ ತಾಲೂಕು ಶೇ ೮೦.೦೮ % ರಷ್ಟು ಫಲಿತಾಂಶ ಪಡೆದು ಕೊಳ್ಳುವ ಮೂಲಕ ಬಾಗಲಕೋಟಿ ಜಿಲ್ಲೆಯಲ್ಲಿಯೇ ಹುನಗುಂದ ೩ ಸ್ಥಾನದಲ್ಲಿದೆ ಮತ್ತು ಅಮೀನಗಡ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಕಾರ್ತಿಕ ರುದ್ರಗೌಡ ಬಡಗೌಡರ ೬೨೫ ಕ್ಕೆ ೬೧೭ (೯೮.೭೨) ಅಂಕವನ್ನು ಪಡೆದು ಹುನಗುಂದ ಮತ್ತು ಇಳಕಲ್ಲ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೆದಾರ ತಿಳಿಸಿದ್ದಾರೆ.ಕಳೆದ ಬಾರಿ ಹುನಗುಂದ ತಾಲೂಕು ಶೇ.೯೩ % ರಷ್ಟು ಅಂಕವನ್ನು ಪಡೆದು ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿತ್ತು.ಆದರೆ ಈ ಬಾರಿ ಮೂರನೆಯ ಸ್ಥಾನಕ್ಕೀಳಿದಿದೆ.೮೨ % ರಷ್ಟು ಫಲಿತಾಂಶ ಪಡೆದು ಜಮಖಂಡಿ ಮೊದಲ ಸ್ಥಾನದಲ್ಲಿದ್ದರೇ ೮೧% ರಷ್ಟು ಅಂಕ ಪಡೆದು ಮುದೋಳ ದ್ವಿತೀಯ ಸ್ಥಾನ,ಶೇ ೮೦.೦೮%ರಷ್ಟು ಅಂಕವನ್ನು ಪಡೆದು ಹುನಗುಂದ ೩ ಸ್ಥಾನವನ್ನು ಪಡೆದುಕೊಂಡಿದ್ದು. ಕಳೆದ ಬಾರಿಗಿಂತ ಈ ಬಾರಿ ಕೇವಲ ಶೇ ೨ ಪರ್ಸೆಂಟ್ ಕಡಿಮೆ ಬಂದಿದ್ದರಿಂದ ಫಲಿತಾಂಶದ ಪಟ್ಟಿಯಲ್ಲಿ ಹುನಗುಂದ ಮೊದಲ ಸ್ಥಾನದಿಂದ ಮೂರನೆಯ ಸ್ಥಾನಕ್ಕಿಳಿದಿದೆ ಎಂದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.