ಪಿ.ಡಿ.ಓ ಮೇಲೆ ಹಲ್ಲೆ, ಆರೋಪಿಯನ್ನು – ಬಂಧಿಸಲು ತಹಶೀಲ್ದಾರರಿಗೆ ಮನವಿ.
ಕೊಟ್ಟೂರು ಆ .18





ತಾಲೂಕು ಪಂಚಾಯತಿ ಕಾರ್ಯಲಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಶ್ರೀ ಗಂಗಾಧರ.ಸಿ ಹೆಚ್ ಎಂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದಿನಾಂಕ 16-08-2025 ರಂದು ಮಧ್ಯಾಹ್ನದ ಹ್ಯಾಳ್ಯಾ ಗ್ರಾಮಕ್ಕೆ ಸಂಬಂಧಿಸಿದ ಖಾತೆ ಬದಲಾವಣೆ ಅಫೀಲು ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ತಾಲೂಕು ಪಂಚಾಯತಿ ಕೊಟ್ಟೂರು ಇವರಲ್ಲಿಗೆ ವಿಚಾರಣೆಗೆ ದಾಖಲಾತಿ ಗಳೊಂದಿಗೆ ಹೋಗುತ್ತಿರುವಾಗ ತಾಲೂಕು ಪಂಚಾಯತಿ ಕೊಟ್ಟೂರು ಆವರಣದಲ್ಲಿ ಹ್ಯಾಳ್ಯಾ ಗ್ರಾಮದ ಕರಿಬಸಪ್ಪ ಎನ್ನುವವರು ಪಿ.ಡಿ.ಓ ಗಂಗಾಧರ.ಸಿ ಹೆಚ್ ಎಂ ಇವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಸಂಬಂಧ ಪೋಲೀಸ್ ಠಾಣೆ ಕೊಟ್ಟೂರಿನಲ್ಲಿ FIR ದಾಖಲಾಗಿರುತ್ತದೆ.

ಈ ಸಂಬಂಧವಾಗಿ ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಂಡು ಸರ್ಕಾರಿ ನೌಕರರಿಗೆ ರಕ್ಷಣೆ ನೀಡಿ ಭಯ ಮುಕ್ತ ವಾತಾವರಣದಲ್ಲಿ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸಲು ಅನುವು ಮಾಡಿ ಕೊಡುವಂತೆ ಕೋರಿ ಮನವಿಯನ್ನು ಮಾನ್ಯ ತಹಶೀಲ್ದಾರರು ಮತ್ತು ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಕೆ ಅಮರೇಶ್ ರವರಿಗೆ ಅರ್ಜಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕರಾದ ಕೆ.ನೇಮಿರಾಜ್ ನಾಯ್ಕ್ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ, ಆನಂದ್ ಕುಮಾರ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ಯೋಗೇಶ್ವರ್ ದಿನ್ನಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ಕೊಟ್ಟೂರು ತಾಲೂಕು ಪಂಚಾಯತಿಯ ಪಿ.ಡಿ.ಓ ಸೆಕ್ರೆಟರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು