ಗ್ರಾಮದ ಮೈಬುಸುಬಾನಿ ದರ್ಗಾ – ಉರುಸಿನ ಮೆರವಣಿಗೆ.
ಕಂದಗಲ್ಲ ಅ.04





ಮುಲ್ಲಾರ ಓಣಿ ಹಾಗೂ ಜೆಂಡಾಕಟ್ಟೆ ಎಂದು ಪ್ರಸಿದ್ದಿ ಪಡೆದಿರುವ ಕಂದಗಲ್ಲ ಗ್ರಾಮದ 6 ನೇ. ವಾರ್ಡಿನಲ್ಲಿರುವ ಮೈಬುಸುಬಾನಿ ದರ್ಗಾ ಊರುಸು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕಂದಗಲ್ಲ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿಶಿಷ್ಟ ವಾದ್ಯ ಮೇಳ ಹಾಗೂ ಭಕ್ತಿ ಭಾವದೊಂದಿಗೆ ಸಾಗಿದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ನಂತರ ಮಹಾ ಪ್ರಸಾದ ಜರುಗಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ