ಪ್ರೀತಿಯ ಮಗು ನೀನು ಓದು…

ನಿನಗಾಗಿ ಅಲ್ಲದಿದ್ದರೂ ನಿನ್ನವರಿಗಾಗಿ ನೀ
ಓದು.
ಹರಿದ ಬಟ್ಟೆ ತಾ ತೊಟ್ಟು ಹೊಸ ಬಟ್ಟೆ
ಕೊಡಿಸುವ ತಂದೆಗಾಗಿ ಓದು.
ತಾನು ಹಸಿದರೂ ನಿನಗೆ ಉಣಿಸಿ ಬುತ್ತಿ
ಕಳುಹಿಸುವ ತಾಯಿಗಾಗಿ ಓದು.
ಮನೆ ಜವಾಬ್ದಾರಿಯ ಹೊತ್ತು ದಿನಾಲೂ
ದುಡಿಯುವ ಹಿರಿಯಣ್ಣನಿಗಾಗಿ ಓದು.
ಟೇಲರಿಂಗ್ ದಿಂದ ಬಂದ ದುಡ್ಡಲ್ಲಿ ಪುಸ್ತಕ
ಕೊಡಿಸಿದ ಅಕ್ಕಳ ಪ್ರೀತಿಗಾಗಿ ಓದು.
ನಿನ್ನ ಮಾರ್ಗದರ್ಶನದಲ್ಲಿಯೇ ಸಾಗಬೇಕೆಂದು
ಕನಸು ಕಂಡ ತಂಗಿಗಾಗಿ ಓದು.
ನೀನು ಹೇಳಿದಂತೆ ಕೇಳಿ ನಿನ್ನ ಪ್ರತಿ ಕೆಲಸದಲ್ಲಿ
ಕೈ ಜೋಡಿಸುವ ತಮ್ಮನಿಗಾಗಿ ನೀ ಓದು.
ಹುಟ್ಟುರನ್ನು ಬಿಟ್ಟು ನಿಮ್ಮೂರಿಗೆ ಬಂದು ನಿನಗೆ
ಕಲಿಸುವ ಗುರುವಿಗಾಗಿ ಓದು.
ತಪ್ಪಾದಾಗ ತಿದ್ದಿ ಬಿದ್ದಾಗ ಎತ್ತಿ ತಾಯಿಯಂತೆ
ಲಾಲಿಸುವ ಗುರುಮಾತೆಗಾಗಿ ಓದು.
ಶಾಲೆಗೆ ಬಂದೊಡನೆ ಗೇಟ್ ತೆಗೆದು ನಗು
ಮುಖದಿಂದ ಸ್ವಾಗತಿಸುವ ಸೆಕ್ಯೂರಿಟಿ ಗಾರ್ಡ್
ಅಂಕಲ್ಗಾಗಿ ಓದು.
ಕಡಿಮೆ ಅಂಕ ಬಿದ್ದಾಗ ಬೈದು ಬುದ್ದಿ ಹೇಳುವ
ಮುಖ್ಯ ಶಿಕ್ಷಕರಿಗಾಗಿ ಓದು.
ರುಚಿ ರುಚಿ ಅಡುಗೆ ಮಾಡಿ ಉಣ ಬಡಿಸಿದ
ಅಡುಗೆ ಸಿಬ್ಬಂದ್ದಿಯವರಿಗಾಗಿ ಓದು.
ಅವಧಿಗೊಂದು ಸಲ ಗಂಟೆ ಬಾರಿಸುವ
ಅಂಕಲಗಾಗಿ ಓದು.
ಓದುವದಾದರೆ ಪ್ರಾಮಾಣಿಕತೆಯಿಂದ 100%
ಸರಿಯಾಗಿ ಓದು.
ಜೀವನದಲ್ಲಿ No-1 ಆಗಿ ಬದುಕಲು ನೀನು
ಓದು.
ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು)
ಸಾ || ಹಿರೇಮಾಗಿ
ಜಿಲ್ಲೆ || ಬಾಗಲಕೋಟ
ಮೋ-ನಂ. 9845568484