ಶಾಲೆ ಮಕ್ಕಳಿಗೆ ತಿಳುವಳಿಕೆ – ಹೇಳಿದ ಶಾಸಕರು.
ಮುಷಲಗುಮ್ಮಿ ಸ.28

ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮುಷಲಗುಮ್ಮಿ ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ಹಳೆಯ ವಿದ್ಯಾರ್ಥಿಗಳ ನೂತನ ಕೊಠಡಿ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಶಾಲೆ ಓದುವಂತ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಮತ್ತು ತಂದೆ ತಾಯಿಗೆ ಹೆಸರು ಬರುವ ಹಾಗೆ ಓದಬೇಕು ಓದಿ ಗೌರ್ಮೆಂಟ್ ಕೆಲಸ ತೆಗೆದು ಕೊಳ್ಳಬೇಕು ಹಾಗೂ ಆ ಗ್ರಾಮಕ್ಕೆ ಹೆಸರು ಮಾಡಬೇಕು ಆಗ ಶಿಕ್ಷಣಕ್ಕೆ ಒಂದು ಬೆಲೆ ಸಿಕ್ಕಂತಾಗುತ್ತದೆ ಶಿಕ್ಷಣವೆಂಬುದು ಬಹಳ ಮಹತ್ವದ್ದು ನಾವು ಏನೇ ಮಾಡಿದರು ಶಿಕ್ಷಣ ದಿಂದಲೇ ಮಾತ್ರ ಮೇಲಕ್ಕೆ ಬರಲು ಸಾಧ್ಯ ಎಂದು ತಿಳುವಳಿಕೆ ಹೇಳಿದ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು