ಬಹುದಿನದ ಬೇಡಿಕೆ ಈಡೇರಿಸಿದ – ಶಾಸಕ ರಾಜುಗೌಡ ಪಾಟೀಲ.
ಯಲಗೋಡ ಮಾರ್ಚ್.10

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ತಾಂಡಾದಲ್ಲಿ, ನನಗೆ ಈ ಹಿಂದೆ ಕೆಜೆಪಿ ಪಕ್ಷದಲ್ಲಿ ನಂತರ ಜೆಡಿಎಸ್ ಪಕ್ಷದಲ್ಲಿ ನನಗೆ ಹೆಚ್ಚಿನ ಮತವನ್ನು ಹಾಕಿದ್ದಾರೆ, ತಾಂಡಾ ಹಾಗೂ ಊರಿನವರು ನಮ್ಮ ಯಲಗೋಡ ದಿಂದ ಢವಳಾರಕ್ಕೆ ಹೋಗಲು ರಸ್ತೆಯ ಸಮಸ್ಯೆ ಇದೆ ಹಾರಿಸಿ ಬಂದ ಮೇಲೆ ಈ ಕೆಲಸ ಮಾಡಬೇಕು ಎಂದು ಹೇಳಿದರು, ಅವರ ಆಸೆಯನ್ನು ಇಂದು ಈಡೇರಿಸಿದ್ದೇನೆ, ಇನ್ನೂ ಬಹಳ ಕೆಲಸ ಮಾಡುತ್ತಾನೆ ಆದರೆ ನಮ್ಮ ಸರ್ಕಾರ ಇಲ್ಲದ ಸಲುವಾಗಿ ಅನುದಾನ ಕಡಿಮೆ ಬರುತ್ತದೆ ನನ್ನ ಮತ ಕ್ಷೇತ್ರದಲ್ಲಿ ೧೨೦ ಹಳ್ಳಿಗಳು ಬರುತ್ತವೆ, ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಿಂದ ಅನುದಾನ ಕೊರತೆ ಇದೆ ಅದರ ಸಲುವಾಗಿ ಮುಂದೆ ಇನ್ನೂ ನಿಮ್ಮ ತಾಂಡಾಕ್ಕೆ ಕೆಲಸ ಮಾಡುತ್ತೇನೆ.

ದೇವರ ಹಿಪ್ಪರಗಿ ಮತ ಕ್ಷೇತ್ರದ ವಾಪ್ತಿಯಲ್ಲಿ ಬರುವ ಯಲಗೋಡ ತಾಂಡಾದಲ್ಲಿ ಐದು ಕೋಟಿ ರೂಪಾಯಿಗಳ, ಯಲಗೋಡ ದಿಂದ ಢವಳಾರ ಗ್ರಾಮದ ವರೆಗೆ ರಸ್ತೆಯ ಭೂಮಿ ಪೂಜೆಯನ್ನು ಮಾಡಿ ಮಾತನಾಡಿದ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿಯವರು, ಈ ಕಾರ್ಯಕ್ರಮದಲ್ಲಿ ನಿಂಗಯ್ಯಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಹಮ್ಮದ್ ರಪೀಕ್ ಕಣಮೇಶ್ವರ, ಅಭಿವೃದ್ಧಿ ಅಧಿಕಾರಿಗಳಾದ ಎಸ್ ಕೆ ಹಡಪದ, ಗ್ರಾಮ ಆಡಳಿತ ಅಧಿಕಾರಿಗಳಾದ ರಾಮನಗೌಡ ರಾಂಪೂರ, ಲ್ಯಾಂಡ್ ಆರ್ಮಿಯ ಹಿರಿಯ ಸಹಾಯಕ ಅಭಿಯಂತರರು ರಾಜಶೇಖರ, ಕಿರಿಯ ಅಭಿಯಂತರರು ಮಲ್ಲಿನಾಥ, ಗ್ರಾಮದ ಹಿರಿಯರಾದ ಮಶ್ಯಾಕಸಾಬ ಚೌಧರಿ, ಶರಣ್ಣಪ್ಪ ಚಬನೂರ ಬಸಲಿಂಗಪ್ಪ ಜ್ಯಾಯಿ ಶರಣು ದೂರೆ ಸಂಗಪ್ಪ ಕೋಣ್ಣಿನ ಉಮೇಶ್ ಇಂಗಳಗಿ ಬಸವರಾಜ ಇಂಗಳಗಿ, ನಜೀರ್ ಕಣಮೇಶ್ವರ, ತಾಂಡಾದ ಮುಖಂಡರಾದ ಟೋಪು ರಾಠೋಡ, ಶೇವು ರಾಠೋಡ ಪೂಮು ರಾಠೋಡ ಗುರುನಾಥ ರಾಠೋಡ, ಲಾಲಸಿಂಗ ಚವ್ಯಾಣ ಸೀತಾರಾಮ ರಾಠೋಡ ಸೋಮಲು ರಾಠೋಡ, ಹಾಗೂ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ, ಹಾಗೂ ಎಲ್ಲಾ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ