ಅಂಬೇಡ್ಕರ್ ಮಹಾ ಪರಿ ನಿರ್ವಾಣ ದಿನಾಚರಣೆ – ಕಾಲ್ನಡಿಗೆ ಜಾಥಾ.

ಕೊಟ್ಟೂರು ಡಿಸೆಂಬರ್.6

ಅಂಬೇಡ್ಕರ್‍ರ ಅವರ 67.ನೇ  ಮಹಾ ಪರಿನಿರ್ವಾಣದ ಅಂಗವಾಗಿ ಡಿ.6-ರಂದು ಸ್ವಾಭಿಮಾನ ಸಂಕಲ್ಪ ದಿನವನ್ನಾಗಿ ಆಚರಣೆ ಮಾಡಲಾಗುವುದು. ಮಹಾ ಪರಿನಿರ್ವಾಣ ದಿನದ ನಿಮಿತ್ತ ಬುಧವಾರ ರಂದು ಅಂಬೇಡ್ಕರ್ ಭಾವ ಚಿತ್ರದೊಂದಿಗೆ ಗಾಂಧಿ ವೃತ್ತದಿಂದ ಮೆರವಣಿಗೆ ಕಲ್ನಾಡಿಗೆಯ ಜಾಥಾ ಮೂಲಕ  ಪಟ್ಟಣದ ಬಸ್ಟಾಂಡ್ ಸರ್ಕಲ್ ಹತ್ತಿರದ ವೃತ್ತದಲ್ಲಿ  ಮೇಣದಬತ್ತಿ ದೀಪ ಹಚ್ಚಿ  ಗೌರವಿಸಲಾಯಿತು.ಬದ್ದಿ ಮರಿಸ್ವಾಮಿ ಮಾತನಾಡಿದ ಅವರು, ತಲೆ ಮಾರುಗಳಿಂದ ನಡೆಯುತ್ತಿದ್ದ ದಲಿತ ಸಮುದಾಯಗಳ ಮೇಲಿನ ಸವರ್ಣೀಯರ ದೌರ್ಜನ್ಯವನ್ನು ಖಂಡಿಸಿದ್ದಲ್ಲದೇ, ಸಮ ಸಮಾಜದ ಕನವರಿಕೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಅಂಬೇಡ್ಕರ್ ಡಿ.6ರಂದು ಪರಿ ನಿರ್ವಾಣ ಹೊಂದಿದರು.

ಆದುದರಿಂದ ಡಿ.6-ರಂದು ದೇಶಾದ್ಯಂತ ಶೋಕಾಚರಣೆ ಮಾಡಲಾಗುತ್ತದೆ.ಎಂದರುತಗ್ಗಿನಕೇರಿ ಕೊಟ್ರೇಶ್ ಮಾತನಾಡಿದ ಅವರು,ನನ್ನ ಸಾವು ಹತ್ತಿರ ಬರುತ್ತಿದೆ. ನನ್ನ ಜನರಿಗೆ ಹೇಳು ನನ್ನ ಹೋರಾಟವನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಅವರು ಸಾಯುವ ಮುನ್ನ ಹೇಳಿದ ಮಾತುಗಳು ಹೋರಾಟಗಾರರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚುತ್ತವೆ. ಆದುದರಿಂದ ಅಂದು ಸ್ವಾಭಿಮಾನ ಸಂಕಲ್ಪ ದಿನಾವಾಗಿ ಆಚರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ತಗ್ಗಿನಕೇರಿ ವಕೀಲರು ಹನುಮಂತಪ್ಪ, ಕೊಟ್ರೇಶ್ ,ಬದ್ದಿ ದುರ್ಗೇಶ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪೂಜಾರ್ ಚಂದ್ರಶೇಖರ್, ಪೂಜಾರ್ ಅಜ್ಜಪ್ಪ,ಬುದ್ಧಿ ಮಂಜುನಾಥ್, ಕೆ ಶಿವರಾಜ್, ಪರಶುರಾಮ್, ಅಮರೇಶ್, ದಲಿತ ಮುಖಂಡರು ಯುವಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು.ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button