ಬನ್ನಿ ಮುಡಿದು. ಬಂಗಾರದಂಗ ಇರೋಣ…..

ದಸರಾ ಹಬ್ಬ ಭಾರತದ ಸಾಂಪ್ರದಾಯಿಕ ಹಬ್ಬಗಳಲ್ಲಿ ಅಗ್ರಸ್ಥಾನ . ದೇಶದಾದ್ಯಂತ ಸರ್ವ ಧರ್ಮದ ಜನರು ನಂಬಿಕೆ , ಭಕ್ತಿ – ಭಾವ ವಿಜೃಂಭಣೆಯಿಂದ ಆಚರಿಸುತ್ತಾರೆ . ದೇಶದಲ್ಲಿ ಆಚರಿಸಲ್ಪಡುವ ಹಬ್ಬ – ಹರಿದಿನಗಳು , ಜಾತ್ರೆ , ಉತ್ಸವಗಳ ಹಿಂದೆ ಐತಿಹಾಸಿಕ ಮತ್ತು ಅರ್ಥ ಪೂರ್ಣ ಹಿನ್ನೆಲೆ ಇರುತ್ತದೆ . ಅದರಲ್ಲೂ ನಾಡಹಬ್ಬ ದಸರಾವನ್ನು ಉತ್ತರ ಕರ್ನಾಟಕದ ಬಾಗಲಕೋಟ , ಕೊಪ್ಪಳ , ಕಲಬುರ್ಗಿ ಸಹಿತ ಇನ್ನಿತರೆ ಜಿಲ್ಲೆಗಳಲ್ಲಿ ಸೌಹಾರ್ದ ಮತ್ತು ಅರ್ಥ ಪೂರ್ಣವಾಗಿ ಆಚರಿಸುತ್ತಾರೆ . ಜಾತಿ , ಮತ , ದ್ವೇಷಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಆಚರಿಸುತ್ತಾರೆ . ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ , ಒಂಬತ್ತು ದಿನಗಳ ಕಾಲವೂ ದೇವಿ ಪುರಾಣವನ್ನು ಪಾರಯಣ ಮಾಡಲಾಗುತದೆ . ದಸರಾ ಹಬ್ಬವು ವಿಶೇಷವಾಗಿ ಹೆಂಗಸರಿಗೆ ಭಕ್ತಿ ಭಾವದ ಹಬ್ಬ .ಹಬ್ಬದ ಒಂಬತ್ತು ದಿನಗಳ ಕಾಲ ಹೆಂಗಸರು ಊರಿನ ಬನ್ನಿ ಮರದ ಗಿಡಕ್ಕೆ ಹರಕೆ ಹೊತ್ತು ಪೂಜೆ ಮಾಡುತ್ತಾರೆ . ಗೋಧೂಳಿ ಕಾಲದಲ್ಲಿ ಎದ್ದು ಇಡೀ ಮನೆಯನ್ನು ಸ್ವಚ್ಛಗೊಳಿಸಿ , ಮಡಿಯಾಗಿ ಊರಿನ ಬನ್ನಿ ಮಹಾಂಕಾಳಿ ದೇವಿಗೆ ಪೂಜೆ ಮಾಡುವ ಮೂಲಕ ಇಷ್ಟಾರ್ಥ ಸಿದ್ದಿಗೆ ಹರಕೆ ಕಟ್ಟುತ್ತಾರೆ . ಈ ದಿನಗಳಲ್ಲಿ ಪ್ರತೀ ಮನೆಯಲ್ಲಿಯೂ ದೇವಿಯದ್ದೆ ಆರಾಧನೆ , ಒಂಭತ್ತು ದಿನಗಳಲ್ಲಿಯೂ ದೇವಿ ಒಂದೊಂದು ಅವತಾರ ತಾಳುವುದು ಈ ಹಬ್ಬದ ಮತ್ತೊಂದು ವಿಶೇಷ ವಿಜಯ ದಶಮಿ ಈ ದಿನ ಶಮಿವೃಕಕ್ಕೆ ಪೂಜೆಯನ್ನು ಸಲ್ಲಿಸಿ ಬನ್ನಿಯನ್ನು ವಿನಿಯೋಗ ಮಾಡುವುದು ಉತ್ತರ ಕರ್ನಾಟಕದ ಆಚರಣೆಯ ಪದ್ಧತಿ , ಬನ್ನಿಯನ್ನು ವಿನಿಯೋಗ ಮಾಡುವಾಗ ‘ ನಾವು ನೀವು ಬನ್ನಿ ತೊಗೊಂಡು ಬಂಗಾರದಂತೆ ಇರೋಣ ‘ , ಇದು ಉತ್ತರ ಕರ್ನಾಟಕ ಭಾಗದ ಜನರ ಬಾಯಲ್ಲಿ ಬರುವ ಮಾತು ನಾವೆಲ್ಲಾ ಭಕ್ತಿ ಶ್ರದ್ದೆಯಿಂದ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯೋಣ.
*****
ಲೇಖನ:ಭೂಮಿಕಾ ದಾಸರಡ್ಡಿ
ಬಿದರಿ,