ಮ್ಯಾಮ ಕೋಸ್ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಅಂಗಸಂಸ್ಥೆ.
ತರೀಕೆರೆ ಆಗಷ್ಟ.16

ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘವು ಸ್ವತಂತ್ರ ಪೂರ್ವ 1939ರಲ್ಲಿ ಆರಂಭಿಸಲಾಯಿತು ಅಂದಿನಿಂದಲೂ ಇಂದಿನವರೆಗೂ ಸಂಗವು ಲಾಭದಾಯಕವಾಗಿ ವಿವರಿಸುತ್ತಿದೆ ಎಂದು ಮ್ಯಾಮ್ ಕೋಸ್, ಉಪಾಧ್ಯಕ್ಷರಾದ ಎಚ್ ಎಸ್ ಮಹೇಶ್ ಹುಲ್ಕುಳಿ ರವರು ಇಂದು ತರೀಕೆರೆ ಅಡಿಕೆ ಮಾರಾಟದ ಸಹಕಾರ ಸಂಘ ತರೀಕೆರೆ ಶಾಖೆ, ಸೇರುದಾರರ ಸಮಾಲೋಚನಾ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾದ ನಂತರ ಸಂಘದ ಕೇಂದ್ರ ಕಚೇರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಉದ್ಘಾಟನೆ ಮಾಡಿದರು, ಸ್ಥಳೀಯ ಶಾಖೆಯು 1985ರಲ್ಲಿ ತರೀಕೆರೆ ತಾಲೂಕು ವ್ಯಾಪ್ತಿ ಪ್ರಾರಂಭಿಸಲಾಯಿತು ಒಟ್ಟು 2164 ಸದಸ್ಯರ ಸಂಖ್ಯೆಯನ್ನು ಹೊಂದಿರುತ್ತದೆ,110876 ಎಕ್ಟರ್ ವಿಸ್ತೀರ್ಣ ಹೊಂದಿದೆ. ಪ್ರಮುಖ ಬೆಳೆಗಳಾದ ಅಡಿಕೆ,ತೆಂಗು,ಭತ್ತ,,ಕಬ್ಬು, ರಾಗಿ, ಮೆಣಸಿನ ಕಾಯಿ,ಈರುಳ್ಳಿ,ಬಾಳೆ ಮತ್ತು ಮಾವು ಬೆಳೆಗಳಾಗಿರುತ್ತವೆ. ತರೀಕೆರೆ ಕ್ಷೇತ್ರದ ಅಂದಿನ ಶಾಸಕರಾದ ದಿವಂಗತ ಡಾ. ಎಚ್ ಆರ್ ರಾಜು ಇವರಿಂದ ಕಟ್ಟಡ ಶಿ ರೈತರಿಂದ ಅಡಿಕೆ ಖರೀದಿಸುವುದು ಶಿಲನ್ಯಾಸವಾಗಿರುತ್ತದೆ. ರೈತರಿಂದ ಅಡಿಕೆ ಖರೀದಿಸುವುದು ರೈತರಿಗೆ ಉಗ್ರಾಣ ವ್ಯವಸ್ಥೆಯನ್ನು ಒದಗಿಸುವುದು, ಆಧಾರ ಸಾಲ ನೀಡುವುದು, ಕಟಾವು ಸಾಲ ನೀಡುವುದು, ಸದಸ್ಯರಿಂದ ಶೇರು ಸಂಗ್ರಹಿಸುವುದು,
ಗುಂಪು ವಿಮೆ ಮಾಡಿಸುವುದು, ಮರಣೋತ್ತರ ನಿಧಿ ಯೋಜನೆ ಮತ್ತು ಅಂತ್ಯ ಸಂಸ್ಕಾರ ಯೋಜನೆಯಡಿ ಆರ್ಥಿಕ ನೀಡುವುದು ಮುಖ್ಯವಾದದ್ದು ಎಂದು ಹೇಳಿದರು. ನಿರ್ದೇಶಕರಾದ ಏಕೆ ಪ್ರಕಾಶ್ ರವರು ಗುಂಪು ವಿಮಾ ಯೋಜನೆಯಲ್ಲಿ ಪರಿಹಾರ ಬಾಬ್ಸು 1,27,802/- ರೂಗಳ ಚೆಕ್ಕು ವಿತರಿಸಿದರು. ಅಡಿಕೆ ಬೆಳೆಗಾರರು ರೈತ ಸದಸ್ಯರಾದ ನಂದಿ ಚಂದ್ರಪ್ಪ, ತರೀಕೆರೆ ಟಿ ಎನ್ ಲೋಕೇಶ್, ಟಿಎಲ್ ರಮೇಶ್, ಹೊಸಳ್ಳಿ ನಂಜುಂಡಪ್ಪ, ಬಸವರಾಜಪ್ಪ, ಬೊಸೇನ್ಹಳ್ಳಿ ಚಂದ್ರನಾಯ್ಕ, ಶಂಕ್ರಪ್ಪ, ಮಾದೇಗೌಡ, ದೋರನ್ನಾಳು ಧನಂಜಯ, ಮುಂತಾದವರು ರೈತರ ಸಮಸ್ಯೆಗಳನ್ನು ಚರ್ಚಿಸಿದರೂ. ಅಧ್ಯಕ್ಷರ ಭಾಷಣದಲ್ಲಿ ಮಹೇಶ್ ರವರು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡಲಾಗುವುದು. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ರವರ ನೇತೃತ್ವದಲ್ಲಿ ವಿವಿಧ ಕ್ಷೇತ್ರದ ವಿವಿಧ ರಂಗಗಳ ತಂತ್ರಜ್ಞಾನ ಮತ್ತು ವಿದೇಶದಲ್ಲಿನ ವಿಜ್ಞಾನಿಗಳ ಮಾರ್ಗದರ್ಶನವನ್ನು ಪಡೆಯಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ್, ನಿರ್ದೇಶಕರಾದ ಕೀರ್ತಿರಾಜ್, ಕೃಷ್ಣಮೂರ್ತಿ, ರತ್ನಾಕರ್, ದಿನೇಶ್, ತಿಮ್ಮಪ್ಪ, ವಿಜಯಲಕ್ಷ್ಮಿ, ವಿರೂಪಾಕ್ಷಪ್ಪ, ನರೇಂದ್ರ, ಬಡಿಯಣ್ಣ, ಭೀಮರಾವ್, ಒಡ್ಡಿನ ಬಯಲು ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ವ್ಯವಸ್ಥಾಪಕರಾದ ಪುಷ್ಪಲತಾ ಪ್ರಾರ್ಥಿಸಿದರು, ಬಿಎಸ್ ಭಗವಾನ್ ರೈತ ಗೀತೆ ಹಾಡಿದರು, ನಿರ್ದೇಶಕರಾದ ಆರ್ ದೇವಾನಂದ್ ಸ್ವಾಗತಿಸಿದರು, ಸುರೇಶ್ ಚಂದ್ರ ಅಂಬಲೂರು ನಿರೂಪಿಸಿ, ಪರಾಶರ ಕಟ್ಟೆ ಬಾಗಿಲು ರವರು ವಂದಿಸಿದರು.
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ್.ತರೀಕೆರೆ