ಮೀಸಲಾತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು
ತರೀಕೆರೆ ಏಪ್ರಿಲ್:6
ತರೀಕೆರೆ ಏ 6 — ದೇಶವನ್ನು ಸಾಮಾಜಿಕ ನ್ಯಾಯ ಭಾತೃತ್ವ, ಸೋದರತೆ, ಬಾಂಧವ್ಯ,ಸಮಾನತೆ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಬದುಕಲು ಬಿಡಬೇಕೆಂಬುದೇ ಸಂವಿಧಾನ.
ಎಂದು ಸಾಮಾಜಿಕ ಕಳಕಳಿ ವೇದಿಕೆಯ ಸಮಸ್ಥಾಪಕ ಅಧ್ಯಕ್ಷರಾದ ಡಾ. ರಾಜನಾಯಕ ರವರು ಇಂದು ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಇವರು ಒಳ ಮೀಸಲಾತಿ ವರ್ಗೀಕರಣದ ಬಗ್ಗೆ ಏರ್ಪಡಿಸಿದ್ದ ಕಾರ್ಯಗಾರವನ್ನು ಉದ್ಘಾಟನೆ ಮಾಡಿ ಉಪನ್ಯಾಸ ನೀಡಿದರು.
ಡಾ. ಬಿಆರ್ ಅಂಬೇಡ್ಕರ್ ರವರಂತಹ ಬುದ್ಧಿವಂತರು ಇನ್ನೂ ಹುಟ್ಟಿಲ್ಲ, ಇನ್ನೂ ಮುಂದೆಯೂ ಹುಟ್ಟುವುದಿಲ್ಲ. ಅವರು ನೀಡಿದ ಮತದಾನದ ಹಕ್ಕು ಅತಿ ಮುಖ್ಯವಾದದ್ದು, ಪವಿತ್ರವಾದದ್ದು, ಪ್ರಬಲ ಶಕ್ತಿವುಳ್ಳದ್ದು ಎಂದು ಹೇಳಿದರು. ದೇವಸ್ಥಾನ ಪ್ರವೇಶ ಮಾಡಬೇಡಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸೌಧ ಪ್ರವೇಶ ಮಾಡುವ ಅಧಿಕಾರ ಹಿಡಿಯಿರಿ. ಸಂವಿಧಾನ ನಾಶವಾದರೆ ಈ ದೇಶ ಛಿದ್ರ ಛಿದ್ರವಾಗುತ್ತದೆ. ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿ ಮೀಸಲಾತಿಯನ್ನು ನಾಶ ಮಾಡುತ್ತಿದ್ದಾರೆ. ಇದರಿಂದ ಔದ್ಯೋಗಿಕರಣ ನಾಶವಾಗುತ್ತಿದೆ.
ಮೀಸಲಾತಿಯನ್ನು ತೆಗೆದು ಹಾಕುವ ಒಳ ಸಂಚು ಅಡಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಳ ಮೀಸಲಾತಿ ಇರುವುದೇ. ಒಗ್ಗಟ್ಟನ್ನು ಹೊಡೆಯಲು ಮೀಸಲಾತಿಯನ್ನು ತಂದಿದ್ದಾರೆ. ಡಾ. ಬಿಆರ್ ಅಂಬೇಡ್ಕರ್ ರವರು ನೀಡಿದ ಸಂವಿಧಾನ ಬದ್ಧ ಮೀಸಲಾತಿಯನ್ನು ಮುಟ್ಟಲು ಯಾರಿಗೂ ಅಧಿಕಾರವಿಲ್ಲ. ಮೀಸಲಾತಿ ಯಾರ ಹಕ್ಕು ಅಲ್ಲ,ಅದು ನಮ್ಮ ಹಕ್ಕು. ಸಂವಿಧಾನದ 360 ಆರ್ಟಿಕಲ್ ಪ್ರಕಾರ ಮೀಸಲಾತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಮಕ್ಕಳು ನಿರ್ಗತಿಕರಾಗಲು ಬಿಡದೆ,ಮುಂದಿನ ಭವಿಷ್ಯಕ್ಕಾಗಿ 35 ದಿನಗಳ ಕಾಲ ನಿದ್ದೆ ಮಾಡದೆ ಜಾಗೃತರಾಗಿ ಆತ್ಮ ಸಾಕ್ಷಿಯಾಗಿ ಹಕ್ಕು ಒತ್ತಾಯ ಗಳಿಗೆ ಹೋರಾಡಲು ಬಂಜಾರ, ಭೋವಿ, ಕೊರಚ, ಕೊರಮ, ಸಮುದಾಯದವರಲ್ಲಿ ಮೀಸಲಾತಿ ಕುರಿತು ಅರಿವು,ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಡಿ ಆರ್ ಗಿರೀಶ್ ರವರು ಮಾತನಾಡಿ ಎರಡು ದಶಕಗಳಿಂದ ಒಳ ಮೀಸಲಾತಿ ವಿಚಾರವಾಗಿ ಪರ ವಿರೋಧವಾಗಿ ಹೋರಾಟಗಳು ನಡೆದಿವೆ. ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದೆಂದು ರಾಜ್ಯ ಸರ್ಕಾರಕ್ಕೆ ಮನವಿ, ಎಚ್ಚರಿಕೆಯನ್ನು ಕೊಟ್ಟಿದ್ದೆವು.ಮೀಸಲಾತಿಯ ಪರಿಕಲ್ಪನೆ ಇಂದಿನದಲ್ಲ 1935 ರಲ್ಲಿ ಬ್ರಿಟಿಷ್ ಸರ್ಕಾರಗಳು ಜಾರಿ ಮಾಡಿದ್ದರು. ನಂತರದ ದಿನಗಳಲ್ಲಿ ಛತ್ರಪತಿ ಶಾಹು ಮಹಾರಾಜ್ ರು, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸಹ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ.
ಭಾರತೀಯ ಸಂವಿಧಾನದ ಪ್ರಕಾರ ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ 101 ಜಾತಿಗಳು ಶಿಕ್ಷಣ, ಉದ್ಯೋಗ, ಸಾಮಾಜಿಕ,ರಾಜಕೀಯವಾಗಿ ಮೀಸಲಾತಿಯನ್ನು ಪಡೆದುಕೊಂಡಿವೆ. ಆದರೆ ಚುನಾವಣೆಯ ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ರಾಜಕೀಯ ಕುತಂತ್ರವಾಗಿದೆ. ಮೀಸಲಾತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬಂಜಾರ ಕೊರಚ ಕೊರಮ ಭೋವಿ ಸಮಾಜದವರು ರಾಜ್ಯಾದ್ಯಂತ ಸಂಘಟಿತರಾಗಿ ಹೋರಾಡುವುದು ಅನಿವಾರ್ಯವಾಗಿದೆ. ಮೀಸಲಾತಿ ಎಂಬುದು ರಾಷ್ಟ್ರೀಯ ನೀತಿ, ಬಡತನ ನಿರ್ಮೂಲನೆ ಮಾಡುವುದಲ್ಲ, ಸೈದ್ದಾಂತಿಕವಾಗಿ ಮೀಸಲಾತಿ ಜಾರಿಯಾಗಲಿ, ಪಿ ಟಿ ಸಿ ಎಲ್ ಕಾಯ್ದೆ, ಅಟ್ರಾ ಸಿಟಿ ಕಾಯಿದೆ, ದುರ್ಬಲ ಗೊಳ್ಳುತ್ತಿದೆ ಈ ಕುರಿತು ಜಾಗೃತ ರಾಗಬೇಕಾಗಿದೆ.
ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಹೇಳುವವರು ಅಂಬೇಡ್ಕರ್ ವಿರೋಧಿಗಳು, ಸಾಮಾಜಿಕ ವಿರೋಧಿಗಳು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಮುಖಂಡರಾದ ಎ ಶ್ರೀರಾಮು, ರವಿ ಕಿಶೋರ್, ಧನ ಪಾಲ್, ಟಿವಿ ಕೃಷ್ಣ, ಮಂಜುನಾಥ ಮತ್ತು ಕೊರಚ ಕೊರಮ ಸಮಾಜ ಮುಖಂಡರಾದ ಭದ್ರಪ್ಪ,ಬಂಜಾರ ಸಮಾಜದ ಮುಖಂಡರಾದ ಡಾಕ್ಯ ನಾಯಕ ಕರುಕುಚ್ಚಿ ಗೋವಿಂದ ನಾಯ್ಕ, ರಾಮ ನಾಯ್ಕ, ಪ್ರಕಾಶ್ ನಾಯ್ಕ, ಹಾಲ ನಾಯ್ಕ, ಉಮೇಶ್ ನಾಯ್ಕ, ಮಂಜ ನಾಯ್ಕ, ಉಪಸಿತರಿದ್ದು, ಬಿ ಕೃಷ್ಣ ನಾಯ್ಕ ಪ್ರಾರ್ಥಿಸಿ ಸ್ವಾಗತಿಸಿದರು, ಕುಮಾರ್ ನಾಯ್ಕ ನಿರೂಪಿಸಿದರು.
ಜಿಲ್ಲಾ ವರದಿಗಾರರು:ಎನ್ ವೆಂಕಟೇಶ್.ತರೀಕೆರೆ