ವಿಧಾನಸಭೆ ಚುನಾವಣೆಗೆ ಸಾರ್ವಜನಿಕರು ನಿರ್ಭಯವಾಗಿ ಮತದಾನ ಮಾಡುವಂತೆ ಪೊಲೀಸ್ ಇಲಾಖೆಯಿಂದ ಹಲವು ಗ್ರಾಮಗಳಲ್ಲಿ ಪಥಸಂಚಲನ
ಕೊಟ್ಟೂರು ಏಪ್ರಿಲ್ ,6
ವಿಜಯನಗರ ಜಿಲ್ಲೆ, ಕೊಟ್ಟೂರು:ವಿಧಾನಸಭೆ 2023ರ ಚುನಾವಣೆಯು ಪೂರ್ವದಲ್ಲಿ ಯಾವುದೇ ಘಟನೆಗಳು ನಡೆಯಬಾರದು ಮತದಾರರು ನಿರ್ಭಯದಿಂದ ಹಾಗೂ ಶಾಂತಿಯುತವಾಗಿ ಮತ ಚಲಾಯಿಸಬೇಕು. ಹಾಗೂ ಯಾವುದೇ ದುರ್ಘಟನೆ ನಡೆಯದಂತೆ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ರಾಪಿಡ್ ಆಕ್ಷನ್ ಫೋರ್ಸ್ ವತಿಯಿಂದ ಕೊಟ್ಟೂರ್ ಪೊಲೀಸ್ ಠಾಣೆಯ ಸಹಕಾರದೊಂದಿಗೆ ತಾಲೂಕಿನ ಉಜ್ಜಿನಿ ,ಕಾಳಾಪುರ ,ಚಿನ್ನಹಳ್ಳಿ, ತೂಲಹಳ್ಳಿ ,ನಾಗರಕಟ್ಟಿ, ಗ್ರಾಮಗಳಲ್ಲಿ ಪತಸಂಚಲನ ಮಾಡಿದರು. ಉಜ್ಜಿನಿ ಗ್ರಾಮದಲ್ಲಿ ಪ್ರಾರಂಭಗೊಂಡು ಪಥಸಂಚಲನ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು,

ಸಾರ್ವಜನಿಕರ ಸಂಚಾರಿ ಮತದಾರರಲ್ಲಿ ಭಯದ ವಾತಾವರಣ ಹೋಗಲಾಡಿಸುವ ಉದ್ದೇಶದಿಂದ ಪತಸಂಚನದಲ್ಲಿ ಕೇಂದ್ರ ಭದ್ರತೆ ಪಡೆ ನರೇಶ್ ಗುಪ್ತ ಮುಕೇಶ್ ಗುಪ್ತ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು ಮತ್ತು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್ ವೆಂಕಟ ಸ್ವಾಮಿ ಕೊಟ್ಟೂರ್ ಪಿಎಸ್ಐ ವೆಂಕಟೇಶ್ ಹಾಗೂ ನೂರಾರು ಸಿಬ್ಬಂದಿ ವರ್ಗದವರು ಭಾಗವಯಿಸಿದ್ದರು ತಾಲೂಕ ವರದಗಾರರು ಪ್ರಧೀಪ್ ಕುಮಾರ್ ಕೊಟ್ಟೂರು