ಎಸ್.ಎಮ್.ವಿ.ವಿ ಸಂಘದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜು ವಾರ್ಷಿಕ ಸಮ್ಮೇಳನ, ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭ ಕೋರುವ ಹಾಗೂ ನಿವೃತ್ತಿ ಹೊಂದಲಿರುವ ಉಪನ್ಯಾಸಕರು ಸನ್ಮಾನ ಸಮಾರಂಭ.
ಕಲಕೇರಿ ಫೆ.12

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿಯ ಎಸ್.ಎಮ್.ವ್ಹಿ.ವ್ಹಿ ಸಂಘದ. ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜ್ ವಾರ್ಷಿಕ ಸ್ನೇಹ ಸಮ್ನೇಳನ ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭ ಕೋರುವ ಹಾಗೂ ನಿವೃತ್ತಿ ಹೊಂದಲಿರುವ ಉಪನ್ಯಾಸಕರು ಸನ್ಮಾನ ಸಮಾರಂಭ ಕಾರ್ಯಕ್ರಮ. ಸಾನಿಧ್ಯ ಪರಮ ಪೂಜ್ಯ ಶ್ರೀ ಷ.ಬ್ರ ಸಿದ್ದರಾಮ ಶಿವಾಚಾರ್ಯರು ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಈ ಪೂಜ್ಯರು ಆಶೀರ್ವಚನ ನೀಡಿದರು. ನಿವೃತ್ತಿ ಹೊಂದಲಿರುವ ಸಿ.ಎಸ್ ಹಿರೇಮಠ ಪ್ರಚಾರ್ಯರು. ಇವರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ನಾವು ಕಲಿಸಿದ ವಿದ್ಯಾ ನಿಮ್ಮತ್ರ ಇರುತ್ತೆ ವಿದ್ಯಾರ್ಥಿಗಳು ಮೊದಲು ನಿಮ್ಮ ತಾಯಿ ತಂದೆಯನ್ನು ಪೂಜಿಸಿ ಸಂತೋಷದಿಂದ ನೋಡಿ ಯಾಕಂದ್ರೆ ಈ ಜಗತ್ತಿನಲ್ಲಿ ಏನು ತರುವುದಿಲ್ಲ ಏನು ವಯ್ಯುವುದಿಲ್ಲ ನಾವು ಎಷ್ಟು ಮಾಡಿದರೂ ಬಾಡಿಗೆ ಮನೆ ಅಲ್ಲಿರುವುದು ಸ್ವಂತ ಮನೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಓದುವುದರಲ್ಲಿ ಗಮನ ಕೊಡಿ ಎಂಬುದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿದರು.

ಹಾಗೂ.ಎಸ್.ಎಸ್. ಕಲಶೆಟ್ಟಿ ಇಂಗ್ಲಿಷ್ ಉಪನ್ಯಾಸಕರು ಇವರು ಕೂಡ ಮೊದಲು ನಿಮ್ಮ ತಂದೆ ನಿಮ್ಮ ತಾಯಿಯ ಪೂಜಿಸಿ ಅವರನ್ನು ಸಂತೋಷದಿಂದ ನೋಡಿ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖ ನೋಡಬೇಡಿ ನಿಮ್ಮ ತಂದೆ ತಾಯಿಯ ಮುಖ ನೋಡಿ ನಿಮ್ಮ ಮುಖ ಕಾಣುತ್ತೆ ತಂದೆ ತಾಯಿಗಿಂತ ದೊಡ್ಡವರು ಯಾರು ಇಲ್ಲ ಅವರೇ ನಮಗೆಲ್ಲಾ ಸರ್ವಸ್ವ ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲಾ ಹಿರಿಯರಿಗೆ ಮನ ಮುಟ್ಟುವಂತೆ ಈ ಸಂದರ್ಭದಲ್ಲಿ ಬಹಳ ಚೆನ್ನಾಗಿ ತಿಳಿಸಿದರು.

ಬಿ.ಜಿ ಚನ್ನಗೊಂಡ ಇವರು ಈ ಸಂದರ್ಭದಲ್ಲಿ 35 ವರ್ಷಗಳ ಕಾಲ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜು ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕಲಿಸಿ ನನ್ನ ವಿದ್ಯಾರ್ಥಿಗಳು ಮೇಲೆ ಭರವಸೆಯ ಬೆಳಕು ಮೂಡಲಿ ಎಂದು ವಿದ್ಯಾರ್ಥಿಗಳಿಗೆ ಸ್ವಂತ ತಮ್ಮ ಮಕ್ಕಳಂತೆ ವಿದ್ಯಾಭ್ಯಾಸಗಳನ್ನು ಮಾಡಿಸಿ ಇವತ್ತಿನ ದಿವಸ ನಿವೃತ್ತ ಹೊಂದಲಿರುವ ಸಿ.ಎಸ್ ಹಿರೇಮಠ ಪ್ರಚಾರ್ಯರು. ಮತ್ತು ಎಸ್.ಎಸ್ ಕಲಶೆಟ್ಟಿ ಇಂಗ್ಲಿಷ್ ಉಪನ್ಯಾಸಕರು. ಎಲ್ಲಾ ಶಿಕ್ಷಕರ ವತಿಯಿಂದ ವಿದ್ಯಾರ್ಥಿ ವತಿಯಿಂದ ಗುರು ಮಾತೆಯರು ವತಿಯಿಂದ ಶುಭ ಹಾರೈಸಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕಾರ್ಯದರ್ಶಿಗಳ ಎಮ್.ಎಸ್ ಜೋಗೋರ್, ಅಧ್ಯಕ್ಷರಾದಂತ ಎಸ್.ಬಿ ಪಾಟೀಲ ಇವರು ಕೂಡ ಈ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಜಿ ಝಳಕಿ ನಿರ್ದೇಶಕರು. ಎಸ್.ಎಮ್ ಕಡಕೋಳ ನಿರ್ದೇಶಕರು, ಜಿ.ಎಮ್ ಗುಮಶೆಟ್ಟಿ ನಿರ್ದೇಶಕರು, ವೇ.ರವಿ ಸ್ವಾಮಿ ಹತ್ತರಹಾಳ ಮಠ ಕಾರ್ಯದರ್ಶಿಗಳು ಕಾಯಕ ಶಿಕ್ಷಣ ಸಂಸ್ಥೆಯ ಚಿಕ್ಕಸಿಂದಗಿ. ಎಸ್.ಎನ್ ಮಠ, ಎಮ್.ಜೆ ಬಿರಾದಾರ್. ಎಸ್.ಸಿ ಚಳ್ಳಗಿ, ಎಮ್.ಎಸ್ ಕವದಿ, ವ್ಹಿ.ಆರ್ ಝಳಕಿ, ಡಿ.ಎಮ್ ಗುಮಶೆಟ್ಟಿ, ಕ.ಡಿ ದೇಸಾಯಿ, ಶ್ರೀಮತಿ ಎಸ್.ಎಸ್ ಝಳಕಿ, ಎಸ್.ಎಸ್ ದುರ್ಗಿ, ಆರ್.ಎಮ್ ಗುಮ್ಮಶೆಟ್ಟಿ. ಬಿ.ಎಮ್. ಕುಂಬಾರ್ . ಆಯ್. ಎಮ್. ಝಳಕಿ, ಹಿರಿಯರಾದಂತಹ ಸಂಗಾರೆಡ್ಡಿ ದೇಸಾಯಿ. ಎಸ್.ಎಮ್.ವ್ಹಿ.ವ್ಹಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಈ ಕಾಲೇಜಿನ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳು ಊರಿನ ಹಿರಿಯರು ಈ ಸಂದರ್ಭದಲ್ಲಿ ಬಹಳ ವಿಜೃಂಭಣೆಯಿಂದ ಈ ಸಮಾರಂಭ ಅದ್ದೂರಿಯಿಂದ ನಡೆಯಿತು. ಎಲ್ಲರೂ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ