ಪಿ.ಡಿ.ಓ ಸುಳ್ಳು ವೈದ್ಯಕೀಯ ದೃಢೀಕರಣ ಸಲ್ಲಿಕೆ ಗಂಭೀರ ಆರೋಪ – ತಾಳಗುಪ್ಪ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಹಿಡಿದ ಕೈ ಗನ್ನಡಿಯಾಗಿದೆ.

ತಾಳಗುಪ್ಪ ನವೆಂಬರ್.3

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿಯ ಆಡಳಿತದ ಬಗ್ಗೆ ಒಂದಲ್ಲಾ ಒಂದು ವಿಷಯ ಪ್ರಜ್ಞಾವಂತ ನಾಗರಿಕರಲ್ಲಿ ಚರ್ಚೆಯ ಸಂಗತಿಯಾಗುತ್ತಿರುವುದು ನಗ್ನಸತ್ಯವಾಗಿದೆ.ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರತ ಪಿ.ಡಿ.ಓ ರವರು ಸುಳ್ಳು ವೈದ್ಯಕೀಯ ದೃಢೀಕರಣ ಸಲ್ಲಿಸಿ ರಜೆ ಪಡೆದಿರುವ ಬಗ್ಗೆ ಅನೇಕ ಉಹಾಪೋಹಗಳೂ ಗ್ರಾಮಸ್ಥರಲ್ಲಿ ಚರ್ಚೆಯ ವಿಷಯವಾಗಿದ್ದೂ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಪ್ರಾಮಾಣಿಕ ಧಕ್ಷ ಜನಸ್ನೇಹಿ ಆಡಳಿತದಲ್ಲಿ ಪಾರದರ್ಶಕ ಆಡಳಿತಗಾರ ಮುಖ್ಯ ಕಾರ್ಯ ನಿರ್ವಾಹಕ ಸ್ನೇಹಲ್ ಸುಧಾಕರ್ ಲೋಖ0ಡೇ ಐಎಎಸ್ ರವರು ಪಿ.ಡಿ.ಓ ಸಲ್ಲಿಸಿದ ವೈದ್ಯಕೀಯ ದೃಢೀಕರಣವನ್ನು ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿ ಸುತ್ತಿರುವುದು ಬೆಳಕಿಗೆ ಬಂದಿದೆ.ನಿನ್ನೆಯ ದಿನ ತಾಳಗುಪ್ಪಕ್ಕೆ ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ. ವೈ. ರಾಘವೇಂದ್ರ ರವರು ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೂ ತಾಳಗುಪ್ಪ ಗ್ರಾಮ ಪಂಚಾಯಿತಿ ಪಿ.ಡಿ.ಓ ಬಗ್ಗೆ ವಿಷಯ ಪ್ರಸ್ತಾಪ ಮಾಡಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ದಾಡುತ್ತಿರುವುದು ಜಗಜಾಹ್ಹಿರವಾಗಿದೆಈ ಮಧ್ಯೆ ಸಾಗರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೂ ಪಿ.ಡಿ.ಓ ರಜೆ ನೀಡಿದ ಅವರ ಸ್ಥಾನಕ್ಕೆ ಅಕ್ರಮವಾಗಿ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರತ ಗ್ರೇಡ್ 2 ಕಾರ್ಯದರ್ಶಿ ಸುರೇಶ್ ಬಿ. ಜಿ. ಯವರನ್ನು ಪ್ರಭಾರ ಪಿ.ಡಿ.ಓ ಆಗಿ ಕರ್ತವ್ಯ ನಿಯೋಜನೆ ಮಾಡುತ್ತಿರುವುದು ಸಂಗತಿಗಳೂ ಸಾಗರ ತಾಲ್ಲೂಕು ಪಂಚಾಯಿತಿ ಹಾಗೂ ತಾಳಗುಪ್ಪ ಗ್ರಾಮ ಪಂಚಾಯಿತಿಯ ಚಾವಡಿಯಲ್ಲಿ ಹರಿ ದಾಡುತ್ತಿದೆ.ಇಷ್ಟಕ್ಕೇಲ್ಲಾ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಏನೂ ನಡೆಯುತ್ತಿದೆ ಎನ್ನುವುದೇ ಉತ್ತರ ಸಿಗದ ಯಕ್ಷ ಪ್ರೆಶ್ನೆಯಾಗಿಯೇ ಉಳಿದಿದೆ.

✒️ಓಂಕಾರ ಎಸ್. ವಿ. ತಾಳಗುಪ್ಪ*

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button